ಸುದ್ದಿ

‘ಮಜಾ’ಕ್ಕಾಗಿ ಶೈನ್ ಶೆಟ್ಟಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಚೈತ್ರ ಕೊಟ್ಟೂರು.. ಹೀಗೆಲ್ಲ ಮಾಡ್ತಿರೋದು ಯಾಕೆ ಗೊತ್ತಾ?

61

ಪಾಸಿಟೀವೋ, ನೆಗೆಟಿವೋ.. ಒಟ್ನಲ್ಲಿ ಪ್ರಚಾರ ಸಿಕ್ಕರೆ ಸಾಕು ಅಂತ ಕೆಲ ಸಿನಿಮಾ ತಂಡವರು ಏನೇನೋ ಪ್ಲಾನ್ ಮಾಡ್ತಾರೆ. ನೆಗೆಟಿವ್ ಪಬ್ಲಿಸಿಟಿ ಆದರೂ ಪರ್ವಾಗಿಲ್ಲ, ಒಟ್ನಲ್ಲಿ ಹೆಚ್ಚು ಜನರನ್ನು ತಲುಪಲು ಗಾಂಧಿನಗರದ ಕೆಲ ಮಂದಿ ಸರ್ಕಸ್ ಮಾಡುವುದು ನಿಮಗೆಲ್ಲ ಗೊತ್ತೇ ಇದೆ.

ಸೇಮ್ ಟು ಸೇಮ್ ಇದೇ ಸ್ಟ್ರಾಟೆಜಿಯನ್ನ ನಟಿ ಮತ್ತು ಬರಹಗಾರ್ತಿ ಚೈತ್ರ ಕೊಟ್ಟೂರು ‘ಬಿಗ್ ಬಾಸ್’ ಮನೆಯಲ್ಲಿ ಅಪ್ಲೈ ಮಾಡುತ್ತಿರುವ ಹಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮೂರು ಹೊತ್ತು ಸುಮ್ಮನೆ ಇದ್ದರೆ, ಕ್ಯಾಮರಾಗಳು ಕೂಡ ಝೂಮ್ ಹಾಕಲ್ಲ. ಹೀಗಾಗಿ ಫುಟೇಜ್ ಪಡೆಯಬೇಕು ಅಂದ್ರೆ ಏನಾದರು ಒಂದನ್ನ ಮಾಡುತ್ತಲೇ ಇರಬೇಕು.

ಕಾಲು ಕೆರೆದುಕೊಂಡು ರಗಳೆ ಮಾಡಿಕೊಳ್ಳದ ಚೈತ್ರ ಕೊಟ್ಟೂರು, ‘ಬಿಗ್ ಬಾಸ್’ ಮನೆಯೊಳಗೆ ಪ್ರೀತಿ-ಪ್ರೇಮದ ಆಟ ಆಡುತ್ತಿದ್ದಾರೆ. ಕಳೆದ ವಾರ ಶೈನ್ ಶೆಟ್ಟಿ ಹಿಂದೆ ಬಿದ್ದು ಇಡೀ ಮನೆಯಲ್ಲಿ ಹಾಟ್ ಟಾಪಿಕ್ ಆಗಿದ್ದ ಚೈತ್ರ ಕೊಟ್ಟೂರು ಈ ವಾರವೂ ಅದನ್ನೇ ಮುಂದುವರೆಸಿದ್ದಾರೆ.ಹೇಳಿ ಕೇಳಿ ಚೈತ್ರ ಕೊಟ್ಟೂರು ಬರಹಗಾರ್ತಿ ಆಗಿರುವುದರಿಂದ ‘ಬಚ್ಚಿಟ್ಟ ಒಲವ ಹೇಳಿಬಿಡು ಗೆಳೆಯ..’ ಎಂದು ಆರಂಭವಾಗುವ ಒಂದು ಕವನವನ್ನ ಬರೆದು ಯಾರಿಗೂ ಗೊತ್ತಾಗದಂತೆ ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಹಾಕಿದ್ದಾರೆ.

”ಸುಮ್ನೆ ಒಂದು ಸಣ್ಣ ಕವನ ಬರೆದಿದ್ದೇನೆ. ಬರೆಯಬೇಕು ಅಂತ ಬರೆದಿದ್ದಲ್ಲ, ಸುಮ್ನೆ ಆಟಕ್ಕಾಗಿ ಬರೆದಿದ್ದೇನೆ. ತಪ್ಪಾಗಿದ್ದರೆ ಕ್ಷಮಿಸಿ. ಇದನ್ನ ಶೈನ್ ಬ್ಯಾಗ್ ಒಳಗೆ ಇಡಬೇಕು ಅಂದುಕೊಂಡಿದ್ದೇನೆ. ಇದರಲ್ಲಿ ನನ್ನ ಹೆಸರು ಬರೆದಿಲ್ಲ. ನಾನೇ ಬರೆದಿದ್ದು ಅಂತ ಯಾವ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ಮಜಾ ಇರುತ್ತೆ ಅಂತ ಮಾಡ್ತಾ ಇದ್ದೀನಿ” ಎಂದು ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಕವನವನ್ನ ಇಟ್ಟು ‘ಬಿಗ್ ಬಾಸ್’ ಮುಂದೆ ಚೈತ್ರ ಕೊಟ್ಟೂರು ಹೇಳಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ