inspirational, ಸುದ್ದಿ

ಕೇವಲ ಒಂದು ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳ ರಂಪಾಟ..!

49


ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ಸೇಬಿಗಾಗಿ ಇಡೀ ದಿನ ಜಗಳವಾಡಿದ್ದು, ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಗಿದೆ. ಮೊನ್ನೆ ರಾತ್ರಿ ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದಾರೆ. ಆಪಲ್ ತಿನ್ನುವ ಮುನ್ನ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಗೆ ಸೇರಿದ್ದ ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ. ಚೈತ್ರ ಕೋಟೂರುಗೆ ಚಂದನ್ ಆಚಾರ್ ಅನುಮತಿ ನೀಡಿ ಸುಜಾತ ಅವರಿಗೆ ಈ ವಿಷಯವನ್ನು ತಿಳಿಸಲು ಹೇಳುತ್ತಾರೆ. ಆಪಲ್ ತಿನ್ನುವಾಗ ಅದೇ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಜೊತೆಗೂ ಹಂಚಿಕೊಂಡು ತಿಂದಿದ್ದಾರೆ.

ಮರುದಿನ ಬೆಳಗ್ಗೆ ಅಡುಗೆ ವಿಭಾಗದ ಚೀಫ್ ಆಗಿರುವ ಸುಜಾತ ಅವರು ಸೇಬು ಯಾರು ತಿಂದರು ಎಂದು ಪ್ರಶ್ನಿಸಿದ್ದಾರೆ. ಆಗ ಚೈತ್ರ ನಾನೇ ಸೇಬು ತಿಂದಿರುವುದು ಎಂದು ಹೇಳಿದ್ದಾರೆ. ಬಳಿಕ ನಾನೊಬ್ಬಳೇ ಸೇಬು ತಿನ್ನಲಿಲ್ಲ ಚಂದನ್ ಅವರಿಗೆ ಕೊಟ್ಟು, ಎಲ್ಲರಿಗೂ ಕೊಟ್ಟು ತಿಂದೆ ಎಂದು ಉತ್ತರಿಸಿದ್ದಾರೆ.

ರಾತ್ರಿ ಪರ್ಮಿಶನ್ ಕೊಟ್ಟ ಚಂದನ್ ಆಚಾರ್ ಬೆಳಗ್ಗೆ ಚೈತ್ರ ಕೋಟೂರ್ ಗೆ ಕಿರಿಕಿರಿ ಮಾಡಿದರು. ”ನನ್ನ ಜೊತೆಗೆ ಚಂದನ್ ಕೂಡ ತಿಂದರು” ಅಂತ ಚೈತ್ರ ಹೇಳಿದ್ದಕ್ಕೆ ಅದು ತಪ್ಪು ಅಂತ ಎಲ್ಲರಲ್ಲಿಯೂ ರಿಜಿಸ್ಟರ್ ಆಗಲು ಪದೇ ಪದೇ ”ಡೀಸೆನ್ಸಿ ಇಲ್ಲ” ಅಂತ ಹೇಳಿ ಹೇಳಿ ಚೈತ್ರ ಪಿತ್ತ ನೆತ್ತಿಗೇರಿಸಿದರು.ಈ ವೇಳೆ ಚೈತ್ರ, ಚಂದನ್ ಮೇಲೆ ರೇಗಾಡುತ್ತಾರೆ. ಮತ್ತೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಮುಗಿಯುವ ಲಕ್ಷಣ ಕಾಣುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಜೈ ಜಗದೀಶ್ ಜೋರಾಗಿ ಗದರುತ್ತಾರೆ.

ಬಳಿಕ ಚೈತ್ರ ಮನೆಯಲ್ಲಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.ಸುಜಾತ ಹಾಗೂ ಚಂದನ್ ವರ್ತನೆಯಿಂದ ಬೇಸತ್ತ ಚೈತ್ರ ತಿಂಡಿ ತಿನ್ನುವುದಿಲ್ಲ ಎಂದು ಹಠ ಮಾಡುತ್ತಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಎಷ್ಟೇ ಸಮಾಧಾನ ಮಾಡಿದರೂ ಚೈತ್ರ ತಿಂಡಿ ತಿನ್ನಲು ಒಪ್ಪುವುದಿಲ್ಲ. ಬಳಿಕ ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್, ಕಿಶನ್ ಸೇರಿ ಯುವತಿಯರು ಚೈತ್ರರನ್ನು ಸಮಾಧಾನ ಮಾಡುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸೆಕ್ಯೂರಿಟಿ ಕಪಾಳಕ್ಕೆ ಹೊಡೆದ ಸಲ್ಮಾನ್ ಖಾನ್…..!ಕಾರಣ ಏನು…?

      ಮಕ್ಕಳ ಜೊತೆ ಗರಂ ಆಗಿ ವರ್ತಿಸಿದ್ದಕ್ಕೆ ತನ್ನ ಸೆಕ್ಯೂರಿಟಿ ಕಪಾಳಕ್ಕೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಬಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಮಂಗಳವಾರ ರಾತ್ರಿ ಸಲ್ಮಾನ್ ತಾವು ನಟಿಸಿದ ‘ಭಾರತ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‍ಗೆ ಹೋಗಿದ್ದರು. ಹೀಗಾಗಿ ಸಲ್ಮಾನ್‍ಗಾಗಿ ಸೆಕ್ಯೂರಿಟಿ ಗಾರ್ಡ್ ದಾರಿ ಮಾಡಿಕೊಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆ ಖಾರವಾಗಿ ವರ್ತಿಸಿದ್ದಕ್ಕೆ ಸಲ್ಮಾನ್ ಖಾನ್ ಸೆಕ್ಯೂರಿಟಿಯ ಕಪಾಳಕ್ಕೆ ಹೊಡೆದಿದ್ದಾರೆ. ಸಲ್ಮಾನ್ ಖಾನ್ ಸೆಕ್ಯೂರಿಟಿಗೆ ಹೊಡೆದ ಫೋಟೋ ಮೊದಲು ಪೀಪಿಂಗ್…

  • ಜ್ಯೋತಿಷ್ಯ

    ತಾಮ್ರದ ಚೂರನ್ನು ಮನೆಯ ಈ ಭಾಗದಲ್ಲಿ ಇಟ್ಟು ನಂತರ ನಡೆಯುವ ಚಮತ್ಕಾರ ನೋಡಿ…

    ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ರತ್ನಗಳ ಬಗ್ಗೆ ಹೇಳಲಾಗಿದೆ. ಯಾವ ರತ್ನ ಧಾರಣೆ ಮಾಡಿದ್ರೆ ಏನು ಲಾಭ ಎಂಬುದನ್ನು ವಿವರಿಸಲಾಗಿದೆ. ಹಾಗೆ ತಾಮ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಮನೆಯಲ್ಲಿ ತಾಮ್ರದ ವಸ್ತುಗಳಿದ್ರೆ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶ ಮಾಡುವುದಿಲ್ಲವಂತೆ. ವಾಸ್ತು ಶಾಸ್ತ್ರದಲ್ಲಿ ತಾಮ್ರದ ವಸ್ತುಗಳು ಯಾವ ಜಾಗದಲ್ಲಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ. ತಾಮ್ರ ಕಠಿಣ ಕೆಲಸವನ್ನು ಸುಲಭ ಮಾಡುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲು ಇದು ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿದ್ದರೆ ವಾಸ್ತುದೋಷ…

  • ಜ್ಯೋತಿಷ್ಯ

    ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

    ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ…

  • ಉಪಯುಕ್ತ ಮಾಹಿತಿ

    ಇದು ದಕ್ಷಿಣ ಭಾರತದ ವಾಟರ್ ಬಾಂಬ್.!ಈ ಆಣೆಕಟ್ಟು ಒಡೆದ್ರೆ, ಈ ಭಾಗದ ನಗರಗಳು ಗ್ಯಾರಂಟಿ ಜಲಸಮಾಧಿ.!

    ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್  ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್  ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ… ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ…