ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗುಜರಾತ್‍ನ ಜಾಮ್‍ನಗರದಲ್ಲಿ ಇದೇ ರೀತಿಯ ಲವ್‍ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಬಹುತೇಕ ಲವ್ ಸ್ಟೋರಿಗಳಂತೆ ಈ ಕಥೆ ಕೂಡಾ ದುರಂತ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿ ಎರಡು ತಿಂಗಳ ನಂತ್ರ ಭಾವಿ ಪತ್ನಿಗೆ ಎಲೆಕ್ಟ್ರಿಕಲ್ ಶಾಕ್ ಹೊಡದಿತ್ತು. ಇದ್ರಿಂದ ಯುವತಿಯ ಎರಡು ಕಾಲು, ಕೈ ಕತ್ತರಿಸಬೇಕಾಯ್ತು. ಇಷ್ಟಾದ್ರೂ ಆಕೆಯನ್ನೇ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ ಭಾವಿ ಪತಿ ಆರು ತಿಂಗಳು ಆಕೆ ಜೊತೆ ಆಸ್ಪತ್ರೆಯಲ್ಲಿದ್ದ. ಆದ್ರೆ ಯುವತಿ ಬದುಕಿ ಬರಲಿಲ್ಲ. ಯುವತಿ ಶವಕ್ಕೆ ವಧುವಿನಂತೆ ಸಿಂಗಾರ ಮಾಡಿ ಅಂತ್ಯಸಂಸ್ಕಾರ ಮಾಡಲಾಯ್ತು.

ಕಣ್ಣೀರಿನ ಪ್ರೇಮ ಕಥೆ ನಡೆದಿರುವುದು ಗುಜರಾತಿನ ಜಾಮ್ ನಗರದಲ್ಲಿ. ಚಿರಾಗ್ ಮತ್ತು ಹಿರಲ್ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬುಧವಾರ ಹಿರಲ್ ಗೆ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಈಗಾಗಲೇ ಆರು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಿರಲ್ ಮಂಗಳವಾರ ಕೊನೆಯುಸಿರೆಳೆದ್ಲು. ಕೈ, ಕಾಲು ಕಳೆದುಕೊಂಡಿದ್ರೂ ಹಿರಲ್ ಮೇಲೆ ಚಿರಾಗ್ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಕಾಲ ಹಿರಲ್ ಆರೈಕೆ ಮಾಡಿದ್ದ ಚಿರಾಗ್ ಸಾಕಷ್ಟು ಪ್ರೀತಿ ನೀಡಿದ್ದ.

ಇಬ್ಬರು ಒಂದಾಗಿ ಬಾಳುವ ಕನಸು ಕಂಡಿದ್ದರು. ಆದ್ರೆ ಹಿರಲ್ ಸಾವು ಚಿರಾಗ್ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಚಿರಾಗ್ ನೋವು ಆಸ್ಪತ್ರೆ ಸಿಬ್ಬಂದಿ ಕಣ್ಣಲ್ಲೂ ನೀರು ತರಿಸಿತ್ತು. ಚಿಕ್ಕ ಚಿಕ್ಕ ವಿಷಯಕ್ಕೆ ಜಗಳವಾಡಿ ಕೊನೆಗೆ ಡೈವೋರ್ಸವರೆಗೂ ಹೋಗುವ ಸಂಬಂಧಗಳ ನಡುವೆ ಚಿರಾಗ್ ತನ್ನ ಪ್ರೀತಿಯ ಹಿರಲ್ ಮೇಲೆ ತೋರಿದ ಪ್ರೀತಿ ನಿಜಕ್ಕೂ ಇತರರಿಗೆ ಮಾದರಿ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವನಪೂರ್ತಿ ಯಾರೊಂದಿಗೆ ಇರಬೇಕು ಎಂದು ಚಿರಾಗ್ ಆಸೆಪಟ್ಟಿದ್ದನೋ ಆಕೆ ಅರ್ಧದಲ್ಲೇ ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ವಿಧಿ ವಿಪರ್ಯಾಸ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದಿನ ದಿನಗಳಲ್ಲಿ ಮೊಬೈಲ್ ಕಂಪ್ಯೂಟರ್ ಬಳಕೆಯನ್ನು ಏಳೆಂಟು ಗಂಟೆ ನಿರಂತರ ಮಾಡುತ್ತೇವೆ. ಇದರಿಂದ ಕಣ್ಣಿಗೆ ಬಹಳ ಹಾನಿ ಆಗುತ್ತದೆ.
ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ…
ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..
ಎಲ್ಲರಿಗು ಗೊತ್ತಿರುವಂತೆ ನಮ್ಮ ಸಂಸ್ಕೃತಿಯ ಪ್ರಕಾರ ಮದುವೆ ಆಗುವ ಹುಡುಗಿ ಹುಡುಗನಿಗಿಂತ ಚಿಕ್ಕವಳಿರಬೇಕು. ಆದರೆ ಇತ್ತೀಚಿಗೆ ನಡೆದ ರಿಸೆರ್ಚ್ ನ ಪ್ರಕಾರ ಹುಡುಗಿಯರು ತಮಗಿಂತ ಚಿಕ್ಕವರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡ್ತಾರಂತೆ.
ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಶಾಸ್ತ್ರದ ಪ್ರಕಾರ, ಬೆರಳಿಗೆ ಧರಿಸುವ ಉಂಗುರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ರಾಶಿಗೆ ಅನುಗುಣವಾಗಿ ವ್ಯಕ್ತಿಗಳು ಉಂಗುರವನ್ನು ಧರಿಸಬೇಕು. ರಾಶಿಗೆ ಹೊಂದಿಕೆಯಾಗದ ಉಂಗುರ ಧರಿಸಿದ್ರೆ ಆಪತ್ತು ಎದುರಾಗುತ್ತದೆ. ಸಾಮಾನ್ಯವಾಗಿ ಬೆಳ್ಳಿ ಉಂಗುರವನ್ನು ಎಲ್ಲರೂ ಧರಿಸ್ತಾರೆ. ಆದ್ರೆ ಮೂರು ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಸೂಕ್ತ ಸಲಹೆ ಪಡೆಯದೆ ಬೆಳ್ಳಿ ಉಂಗುರ ಧರಿಸಿದ್ರೆ ಸಮಸ್ಯೆ ಎದುರಾಗುತ್ತದೆ….