ಸುದ್ದಿ

ಮಾಸ್ಕ್ ಧರಿಸದೇ ರಸ್ತೆಗೆ ಇಳಿದವರಿಗೆ ಬಿತ್ತು ದುಬಾರಿ ದಂಡ. ಒಂದೇ ದಿನದಲ್ಲಿ 69,400 ರೂ. ವಸೂಲಿ.

120

ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಬೆಂಗಳೂರಿನ ವಿವಿಧೆಡೆ ಅನೇಕರು ಮಾಸ್ಕ್ ಧರಿಸದೇ ರಸ್ತೆಯಲ್ಲಿ ಹೊಡಾಡುತಿದ್ದರೆ ಇದನ್ನು ಕಂಡು ದಂಡವನ್ನು ವಿಧಿಸಿದ್ದಾರೆ.

ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿ ಆರ್.ಆರ್ ನಗರ, ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆ ಒಂದೇ ದಿನದಲ್ಲಿ 69,400 ರೂ ದಂಡ ವಸೂಲಿ ಮಾಡಲಾಗಿದೆ. ಈ ರೀತಿ ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು ಪೂರ್ವ ವಲಯದ ಕಡೆ 66 ಕೇಸ್ ಗಳು ದಾಖಲಾಗಿದ್ದು 13,200 ರೂ ಅನ್ನು ದಂಡ ವಸೂಲಿ ಮಾಡಿದ್ದಾರೆ, ಬೆಂಗಳೂರು ಪಶ್ಚಿಮ ವಲಯದಲ್ಲಿ 116 ಕೇಸ್ ಕಂಡು ಬಂದಿದ್ದು 23,200 ರೂ ದಂಡ ಪಾವತಿ ಮಾಡಿದ್ದಾರೆ, ಇನ್ನೂ ದಕ್ಷಿಣ ವಲಯದ ಕಡೆ 115 ಕೇಸ್ ಗಳು ಕಂಡು ಬಂದಿದ್ದೂ 23,000 ರೂ ದಂಡವನ್ನು ವಸೂಲಿ ಮಾಡಿದ್ದಾರೆ.

ಮಹದೇವಪುರ ವಲಯದಲ್ಲಿ 20 ಪ್ರಕರಣಗಳು, 4,000 ದಂಡ. ಆರ್. ಆರ್. ನಗರ ವಲಯದಲ್ಲಿ 15 ಕೇಸ್ ಗಳು 3,000 ರೂ ದಂಡ, ಯಲಹಂಕ ವಲಯದಲ್ಲಿ 6 ಕೇಸ್ ಗಳು 1,200 ರೂ ಫೈನ್. ದಾಸರಹಳ್ಳಿ ವಲಯ 4 ಕೇಸ್ 800 ರೂ. ದಂಡ ವಸೂಲಿ. ಬೊಮ್ಮನಹಳ್ಳಿ ವಲಯ 5 ಪ್ರಕರಣಗಳು 1,000 ರೂ. ಫೈನ್ ವಸೂಲಿ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ