ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಲ್ದೂರು ಸಮೀಪದ ಹಳಿಯೂರು ಕಾಲೊನಿ ವಾಸಿ ಲೋಕೇಶ್, ಸರಿತಾ ಅವರ 3 ತಿಂಗಳ ಮಗು ಆರವ್ನನ್ನು ಜಾಂಡೀಸ್ ಕಾಯಿಲೆ ಕಾರಣ ಹಾಸನದ ಮಣಿ ಆಸ್ಪತ್ರೆಗೆ ಕಳೆದ ಗುರುವಾರ ದಾಖಲಿಸಲಾಗಿತ್ತು. ಮಣಿ ಆಸ್ಪತ್ರೆಯವರು ಮಗುವಿನ ಪೋಷಕರಿಂದ ಹಣ ಕಟ್ಟಿಸಿಕೊಂಡು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ ಹಸ್ತಾಂತರಿಸಿಬಿಟ್ಟರು.
ಮಗುವಿನ ಅಂತ್ಯಕ್ರಿಯೆ ನಡೆಸಲು ತಾಯಿ ಸರಿತಾ ಅವರ ತವರು ಮನೆ ಮೂಡಿಗೆರೆ ಸಮೀಪದ ಭಾರತಿ ಆಂಬ್ಯುಲೆನ್ಸ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಮೂಡಿಗೆರೆ ಸಮೀಪ ಮಗು ಮೂತ್ರ ವಿಸರ್ಜಿಸಿದ್ದಲ್ಲದೇ, ಏಕಾಏಕಿ ಅಳಲು ಪ್ರಾರಂಭಿಸಿತು. ಆಶ್ಚರ್ಯಚಕಿತರಾದ ಪೋಷಕರು, ತಕ್ಷಣವೇ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರೀಕ್ಷಿಸಿ ಮಗು ಜೀವಂತವಾಗಿರುವುದನ್ನು ದೃಢಪಡಿಸಿದರು. ವೈದ್ಯರ ಸೂಚನೆ ಮೇರೆಗೆ ತಕ್ಷಣವೇ ಮಂಗಳೂರಿನ ಫಾದರ್ಮುಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಗು ಆರೋಗ್ಯವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಲೋಕೇಶ್,ಸರಿತಾ ದಂಪತಿಗೆ ಇದು 2ನೇ ಮಗು. ಮೊದಲ ಗಂಡು ಮಗು ಕಾಯಿಲೆಯಿಂದ ಮೃತಪಟ್ಟಿತ್ತು. 3 ವರ್ಷದ ನಂತರ 2ನೇ ಮಗುವಾಗಿದ್ದು ಹುಟ್ಟಿದಾಗ ಆರೋಗ್ಯವಾಗಿಯೇ ಇತ್ತು. ಜಾಂಡೀಸ್ ಕಾಯಿಲೆ ಕಂಡುಬಂದ ಕಾರಣ ಚಿಕಿತ್ಸೆ ಕೊಡಿಸಲು ಹಾಸನದ ಮಣಿ ಆಸ್ಪತ್ರೆಗೆ ಸೇರಿಸಿದ್ದರು. ಹಾಸನದ ಮಣಿ ಆಸ್ಪತ್ರೆಯ ಬಗ್ಗೆ ಇಂತಹ ಅಪಸ್ವರಗಳು ಮತ್ತೆಮತ್ತೆ ಕೇಳಿಬರುತ್ತಿದ್ದು, ಇವರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಣಿ ಆಸ್ಪತ್ರೆ ವೈದ್ಯರು ಮಗುವಿನ ಚಿಕಿತ್ಸೆಗೆ ನಮ್ಮಿಂದ 50 ಸಾವಿರ ರೂ. ಕಟ್ಟಿಸಿಕೊಂಡು 4 ದಿನ ಆಸ್ಪತ್ರೆಯಲ್ಲಿಇಟ್ಟುಕೊಂಡು ಕೊನೆಗೆ ಮಗು ಸತ್ತುಹೋಗಿದೆ ಎಂದರು. ಆದರೆ ಮಗು ಜೀವಂತವಾಗಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ನಾವು ಇದ್ದ ಮಗುವನ್ನು ಕಳೆದುಕೊಳ್ಳಬೇಕಿತ್ತು– ಲೋಕೇಶ್, ಮಗುವಿನ ತಂದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ. ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ…
ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ. ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು. ಅರ್ಪಣಾ ನಿವೃತ್ತ ಎಸ್ಬಿಐ ಉದ್ಯೋಗಿ ಸಾವಿತ್ರಿ…
ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.
ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. ಆದ್ರೆ ಇದರಿಂದ ಕೂದಲು ಬೆಳೆಯುವ ಬದಲು ಮತ್ತಷ್ಟು ಕೂದಲು ಉದುರಲು ಕಾರಣವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು ನೆರವಾಗುತ್ತದೆ.ದಾಸವಾಳದ ಜೊತೆ ಬೇರೆ ಬೇರೆ ಉತ್ಪನ್ನಗಳನ್ನು ಬೆರೆಸಿ…
ಹಿಂದೊಂದು ದಿನ ಊಟ ಇಲ್ಲದೆ, ಮಲಗೋಕೆ ಜಾಗ ಇಲ್ಲದೆ ಚೆನ್ನೈನ ಫುಟ್ಪಾತ್ ಮೇಲೆ ಇದ್ದ ಈ ಹುಡುಗನ ಇವತ್ತಿನ ಸಾಧನೆ ಕೇಳಿದ್ರೆ ನೀವೆಲ್ಲ ಹುಬ್ಬೇರುಸ್ತೀರಾ. ಜೀವನ ಒಂದೇ ರೀತಿಯಲ್ಲಿ ಯಾವತ್ತೂ ಇರೋದಿಲ್ಲ ಅನ್ನೋದಕ್ಕೆ ಈ ಹುಡುಗನೇ ಸ್ಪಷ್ಟ ಉದಾಹರಣ..