ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ.
ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ ಹೊರಗಿನ ಆಟ ಮತ್ತು ಚಟುವಟಿಕೆಗಳಲ್ಲಿ ಒಳಗೊಳ್ಳುವಂತೆ ಮಾಡಿ. ಇದರಿಂದ ಹೆಚ್ಚು ಹೆಚ್ಚಾಗಿ ಸೂರ್ಯನ ಬೆಳಕನ್ನು ನೋಡುವಂತಾಗುತ್ತದೆ ಹಾಗೂ ಈ ಬೆಳಕಿನಲ್ಲಿ ಮೆದುಳಿನಲ್ಲಿ ಉತ್ಪತ್ತಿಯಾಗುವ ಮೆಲಟೋನಿನ್ ಪ್ರಮಾಣವನ್ನು ತಡೆಯುತ್ತದೆ. ಸಮಯಕ್ಕೆ ಸರಿಯಾಗಿ ನಮ್ಮ ನಿದ್ದೆ ಆವರಿಸಲು ಮತ್ತು ಎಚ್ಚರಾಗಲು ಈ ಮೆಲಟೋನಿನ್ ಪ್ರಮುಖ ಕಾರಣವಾಗಿದೆ. ಈ ವಿಧಾನದ ಮೂಲಕ ಮಕ್ಕಳು ಹಗಲಿನ ಹೊತ್ತು ಎಚ್ಚರಾಗಿದ್ದು ರಾತ್ರಿಯ ಸಮಯದಲ್ಲಿ ಬೇಗನೇ ಮಲಗತೊಡಗುತ್ತಾರೆ.
ಕೆಫೇನ್ ಇರುವ ಪೇಯಗಳನ್ನು ನೀಡದಿರಿ ಯಾವುದೇ ಕೆಫೀನ್ ಇರುವ ಪಾನೀಯ, ಉದಾಹರಣೆಗೆ, ಟೀ, ಕಾಫಿ, ಬುರುಗು ಪಾನೀಯ, ಸೋಡಾ ಮೊದಲಾದವುಗಳ ಸೇವನೆಯಿಂದ ಮಕ್ಕಳಲ್ಲಿ ನಿದ್ದೆ ಹಾರಿ ಹೋಗುತ್ತದೆ ಹಾಗೂ ಇವರನ್ನು ಮಲಗಿಸುವುದು ಭಾರೀ ಕಷ್ಟಕರವಾದ ಕೆಲಸವಾಗುತ್ತದೆ. ಹಾಗಾಗಿ ಸಂಜೆಯ ಬಳಿಕ ಈ ಯಾವುದೇ ಪಾನೀಯಗಳನ್ನು ನೀಡದಿರಿ.
ರಾತ್ರಿ ಮಲಗಲು ನಿರ್ದಿಷ್ಟ ಸಮಯವನ್ನು ಅನುಸರಿಸಿ ನಿಮ್ಮ ಮಕ್ಕಳು ಪ್ರತಿದಿನ ಒಂದೇ ಸಮಯಕ್ಕೆ ಸರಿಯಾಗಿ ಮಲಗುವಂತೆ ವೇಳಾಪಟ್ಟಿಯನ್ನು ನಿರ್ಧರಿಸಿ ಈ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಕ್ಕಳನ್ನು ಪ್ರೇರೇಪಿಸಿ. ಇದು ಮಕ್ಕಳಲ್ಲಿ ಆರೋಗ್ಯಕರ ವೇಳಾಪಟ್ಟಿಯನ್ನು ಅನುಸರಿಸುವ ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ದೇಹದ ಜೈವಿಕ ಗಡಿಯಾರ ಈ ಸಮಯಗಳಿಗೆ ಅನುಸಾರವಾಗಿ ಸ್ಪಂದಿಸತೊಡಗುತ್ತದೆ.
ಮಕ್ಕಳು ಸುರಕ್ಷತಾ ಭಾವನೆ ಹೊಂದುವಂತೆ ಮಾಡಿ ಸಂಜೆಯ ಬಳಿಕ ಮಕ್ಕಳಲ್ಲಿ ಹೆದರಿಕೆ ಹುಟ್ಟಿಸುವ ಯಾವುದೇ ಕಥೆಗಳನ್ನಾಗಲೀ, ಸಿನೇಮಾಗಳನ್ನಾಗಲೀ ಕೇಳುವುದಾಗಲೀ, ನೋಡುವುದಾಗಲೀ ಬೇಡ. ಈ ಹೆದರಿಕೆಯ ವಿಷಯಗಳು ಮಕ್ಕಳ ಮನದಲ್ಲಿ ಅಚ್ಚೊತ್ತಿದಂತೆ ನೆನಪಿನಲ್ಲಿ ಉಳಿಯುತ್ತವೆ ಹಾಗೂ ಈ ಹೆದರಿಕೆಯಿಂದಾಗಿ ಮಕ್ಕಳಿಗೆ ಬೇಗನೇ ಮಲಗಲು ಸಾಧ್ಯವಾಗದೇ ಹೋಗಬಹುದು.ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿ ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಿದರೆ ಇದು ನಿದ್ದೆಯ ವೇಳಾಪಟ್ಟಿಯನ್ನು ಏರುಪೇರುಗೊಳಿಸಬಹುದು. ಅಲ್ಲದೇ ಮಕ್ಕಳು ಸಂಜೆಯ ಬಳಿಕ ಕುಡಿಯುವ ನೀರಿನ ಪ್ರಮಾಣ ಅತಿಯಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಅತಿಯಾದರೆ ರಾತ್ರಿಯ ಸಮಯದಲ್ಲಿ ಮೂತ್ರವಿಸರ್ಜನೆಗೆ ಕೆಲವಾರು ಬಾರಿ ಏಳಬೇಕಾಗುತ್ತದೆ. ಇದು ನಿದ್ದೆಯನ್ನು ಭಂಗಗೊಳಿಸಬಹುದು. ಅಲ್ಲದೇ ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಿದ ಬಳಿಕವೇ ಮಲಗುವಂತೆ ರೂಢಿ ಮಾಡಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕುಲ ಕುಲವೆಂದು ಬಡಿದಾಡುವ ಈ ದಿನದಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲದೇವರು ಒಂದೇ ಎಂದು ತಿಳಿದು ಅಯ್ಯಪ್ಪ ಮಾಲೆ ಧರಿಸಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಸ್ಮರಣೆ ಮಾಡುತ್ತಿದ್ದಾನೆ. ಅಯ್ಯಪ್ಪಮಾಲೆ ಭಕ್ತರು 41 ದಿನ ಮಂಡಳ ಪೂರೈಸಿ ಶಬರಿಗೆ ಹೋಗುವಾಗ ಅರಣ್ಯದ ಮಧ್ಯದಲ್ಲಿಅಯ್ಯಪ್ಪ ಸ್ವಾಮಿಯ ಶಿಷ್ಯ ಬಾಬರ ಸ್ವಾಮಿ ಅವರ ದರ್ಗಾ ಇದೆ. ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ದರ್ಗಾದ ದರ್ಶನ ಪಡೆದು ಮೈಮೇಲೆ ವಿವಿಧ ಬಣ್ಣ ಹಚ್ಚಿಕೊಳ್ಳುತ್ತಾರೆ. ಅಡವಿಯಲ್ಲಿಹೋಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬಾಬರ…
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ. ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ…
ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು…
ಹಿರಿಯರ ಒಂದೊಂದು ಮಾತುಗಳು ಕಟ್ಟಿಟ್ಟ ಬುತ್ತಿ, ಬೆಳಿಗ್ಗೆಯಿಂದ ಸಂಜೆಯವರೆಗೆ ಮಾಡುವ ಎಲ್ಲಾ ಕೆಲಸದಲ್ಲೂ ಒಂದು ರೀತಿಯ ಅರ್ಥ ಇರುತ್ತದೆ, ಇನ್ನು ಕೆಲವು ಕೆಲಸಗಳನ್ನ ಈ ರೀತಿಯಲ್ಲಿ ಮಾಡಬೇಕು ಎಂದು ರೀತಿ ರಿವಾಜುಗಳು ಇದೆ. ನಾವು ಮಲಗುವಾಗ ಯಾವ ಕಡೆ ತಲೆಯನ್ನ ಹಾಕಿ ಮಲಗಬೇಕು ಎಂದು ಕೆಲವು ನಿಯಮಗಳನ್ನ ಇಡಲಾಗಿದೆ, ಮಲಗುವ ಈ ನಿಯಮದ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವಾಸ್ತು…
ಈಗ ಕರ್ನಾಟಕ ಬಿಜೆಪಿ ಪಾಳಯದಲ್ಲಿ ಸಂತೋಷ ವೋ ಸಂತೋಷ. ಬಿಜೆಪಿಯ ರಾಜ್ಯಾಧ್ಯಕ್ಷ ರಾದ ಯಡಿಯೂರಪ್ಪಾ ಗೆ ತಡೆಯಲಾರದ ಸಂತಸ. ಕಾರಣ ಅವರ ಮೇಲೆ ದಾಖಲಾಗಿದ್ದ ಬರೋಬರಿ ಐದೂ ಕೇಸುಗಳನ್ನು ಮಂಗಳವಾರ ಡಿಸೆಂಬರ್ 4 ರಂದು ಸುಪ್ರೀಂ ಕೋರ್ಟ್ ವಜಾ ಗಳಿಸಿದೆ. ಶಿವಮೊಗ್ಗ ಮೂಲದ ವಕೀಲರಾದ ಸಿರಾಜಿನ್ ಪಾಷಾ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಡಿನೋಟಿಫಿಕೇಷನ್ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ 5 ಕೇಸ್ ಗಳ ನ್ನು ದಾಖಲಿಸಿದ್ದರು. ಹಲವಾರು ವರ್ಷಗಳಿಂದ ಈ ಕೇಸ್ ಗಳ ವಿಚಾರಣೆ…
ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಕೆಲವು ದೇವಾಲಯಗಳ ರಹಸ್ಯಗಳನ್ನು ಇಲ್ಲಿಯವರೆಗೆ ಯಾರೂ ಬಹಿರಂಗಪಡಿಸಿಲ್ಲ. ಇಂದು ನಾವು ನಿಮಗೆ ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಾಲಯವನ್ನು ನೀವು ನೋಡಿರದಿದ್ದರೂ, ಅದರ ಹೆಸರನ್ನು ಖಂಡಿತ ಕೇಳಿರುತ್ತೀರಿ. ಏಕೆಂದರೆ ಈ ದೇವಾಲಯವು ಕೆಲವು ನಿಗೂಢತೆಗಳಿಗೆ ಮತ್ತು ಅದರ ಸಂಪತ್ತಿಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಆದ್ದರಿಂದ ಇದನ್ನು ಭಾರತದ ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಅನೇಕ ರಹಸ್ಯ ನೆಲಮಾಳಿಗೆಗಳಿವೆ. ಅವುಗಳಲ್ಲಿ ಕೆಲವು ತೆರೆದಿವೆ. ಆ ಮಳಿಗೆಗಳಿಂದ ಕೋಟ್ಯಂತರ…