ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ೪೮ ವರ್ಷದ ಅನಿಲ್ ಕುಮಾರ್ ವಿಧಿವಶರಾಗಿದ್ದಾರೆ.

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಹೆಗ್ಗೋಡಿನ ನೀನಾಸಂನಲ್ಲಿ ಅನಿಲ್ಕುಮಾರ್ ತರಬೇತಿ ಪಡೆದಿದ್ದರು. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಲ್ ಅವರ ಸಹಪಾಠಿಯಾಗಿದ್ದರು. ಮೂಡಲ ಮನೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಲ್ ಅವರು, ಅನೇಕ ಸೀರಿಯಲ್, ರಂಗಭೂಮಿ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ.

ಅನಿಲ್ ಕುಮಾರ್ ಅವರು ಮೂಡಲ ಮನೆ, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಈಗ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

ರಾಜ್ಯ ಪ್ರಶಸ್ತಿ ವಿಜೇತ ಪಲ್ಲಟ ಸಿನಿಮಾದಲ್ಲಿ ಅನಿಲ್ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೇಮಂತರಾವ್ ನಿರ್ದೇಶನದ ಕವಲುದಾರಿ ಸಿನಿಮಾದಲ್ಲಿ ನಟಿಸಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗೆಳೆಯ ಅನಿಲ್ಕುಮಾರ್ ಅವರನ್ನು ಕಂಡು ದರ್ಶನ್ ಮರುಗಿ, ಸಹಾಯ ಮಾಡಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…
ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ. ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ….
ಮುಖದ ಸೌಂದರ್ಯಕ್ಕೆ ವಿವಿಧ ರೀತಿಯ ಮಾಸ್ಕ್ ಗಳು ಹಾಕುವುದು ತಿಳಿದ ಸಂಗತಿ. ಅದರ ಜೊತೆಗೆ ಚಾರ್ ಕೋಲ್ ಫೇಸ್ ಮಾಸ್ಕ್ ಕೂಡ ಎಲ್ಲರ ಬ್ಯೂಟಿ ಪ್ರಾಡಕ್ಟ್ ಲಿಸ್ಟ್ ನಲ್ಲಿ ಇವೆ. ಈ ಮಾಸ್ಕ್ ಒಳ್ಳೆಯದೇ ಆದರೂ, ಕೆಲವು ಜಾಗ್ರತೆ ವಹಿಸಿದರೆ ಸುಂದರ ತ್ವಚೆಯನ್ನು ಪಡೆಯಬಹುದು. ಚಾರ್ ಕೋಲ್ ಮಾಸ್ಕ್ ನಿಂದ ಮುಖದ ಮೇಲಿರುವ ಮೊಡವೆ, ಮಚ್ಚೆಗಳು, ಬ್ಲ್ಯಾಕ್ ಹೆಡ್ಸ್, ಬ್ಯಾಕ್ಟೀರಿಯಾ ಅಂತಹ ಸಮಸ್ಯೆಗಳು ತೊಲಗುತ್ತವೆ. ಚಾರ್ ಕೋಲ್ ಮಾಮೂಲಿ ಇದ್ದಿಲು ಅಲ್ಲ. ಇದನ್ನು ಕೊಬ್ಬರಿ ಚಿಪ್ಪು ಇದ್ದಿಲನ್ನು…
ಇಂಗ್ಲೆಂಡ್ನ ಲೀಸೆಸ್ಟರ್ ಶೈರ್ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗ ಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮಅಂತ್ಯಸಂಸ್ಕಾರ ಹೇಗೆ ನಡೆಯ ಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತ ದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟುಅಂತ್ಯ ಸಂಸ್ಕಾರ ಮಾಡಿ ಎಂದು ತಮ್ಮಆಸೆ…
ಚೆನ್ನೈನಲ್ಲಿ ಎದುರಾಗಿರುವ ನೀರಿನ ತೀವ್ರ ಕೊರತೆಯನ್ನು ನಿರ್ವಹಿಸಲು ನಿತ್ಯ 1 ಕೋಟಿ ಲೀಟರ್ ನೀರು ಪೂರೈಸುವುದಾಗಿ ಈ ಹಿಂದೆ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 68 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಇದೀಗ ಈ ಯೋಜನೆಯ ಭಾಗವಾಗಿ ಚೆನ್ನೈಗೆ ಮೊದಲ ನೀರಿನ ರೈಲು ಆಗಮಿಸಿದೆ. ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.ವೆಲ್ಲೂರು ಜಿಲ್ಲೆಯ ಜೋಲಾರ್ ಪೇಟೆಯಿಂದ ಬರೊಬ್ಬರಿ 25…
ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್ನಲ್ಲಿ ನಡೆದಿದೆ.ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ…