ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಿದ್ರು ಟ್ರಾಫಿಕ್ ಸಮಸ್ಯೆ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಐಟಿ ಬಿಟಿ ಜನರಿಗೆ ನೇರವಾಗಬಲ್ಲ ಪಾಡ್ ಕಾರ್ ಸೇವೆಯನ್ನು ಪರಿಚಯಿಸಲಾಗುತ್ತಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ವಷಾಂತ್ಯಕ್ಕೆ ಹೊಸ ಯೋಜನೆಗೆ ಚಾಲನೆ ಸಿಗಲಿದೆ.
ಬಿಬಿಎಂಪಿ ಕೂಡಾ ಪಿಆರ್‌ಟಿಎಸ್ ಯೋಜನೆ ಅನುಷ್ಠಾನದ ಬಗ್ಗೆ ಹೆಚ್ಚು ಉತ್ಸುಕವಾಗಿದ್ದು, ದೇಶದ ಮೊದಲ “ಖಾಸಗಿ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ) ಅನ್ನು ಆರಂಭಿಸುವ ಮೂಲಕ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹೇಳುವ ಇರಾದೆಯಲ್ಲಿದೆ.
ಯೋಜನೆಯ ವೆಚ್ಚ:-
ಪ್ರತಿ ಕಿ.ಮೀ. ಪಿಆರ್‌ಟಿಎಸ್ ನಿರ್ಮಾಣಕ್ಕೆ 25 ಕೋಟಿ ರೂ. ವೆಚ್ಚವಾಗಲಿದ್ದು, ಈ ಯೋಜನೆ ಅನುಷ್ಠಾನದಲ್ಲಿ ಬಿಬಿಎಂಪಿಯಿಂದ ಯಾವುದೇ ಹೂಡಿಕೆ ಇರುವುದಿಲ್ಲ. ಬದಲಿಗೆ ಪಾಲಿಕೆಗೆ ಈ ಮಾದರಿಯ ಟ್ಯಾಕ್ಸಿ ಓಡಿಸುವ ಸಂಬಂಧ ಪರವಾನಗಿ ಶುಲ್ಕ ಹಾಗೂ ಕಾರ್ಯಾಚರಣೆಯಿಂದ ಬರುವ ಆದಾಯದಲ್ಲಿ ಇಂತಿಷ್ಟು ಲಾಭಾಂಶ ಬರಲಿದೆ.
ತಜ್ಞರ ಸೂಚನೆಯಂತೆ ಬಿಬಿಎಂಪಿಯು ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿದ್ದು, ಈ ಸಂಬಂಧ ಮುಂದಿನ ವಾರದಲ್ಲಿ ಟೆಂಡರ್ ಕರೆಯಲಿದೆ. ಜೊತೆಗೆ ಮೆಟ್ರೋ ಮಾದರಿಯಲ್ಲಿ ಆರ್‌ಸಿಸಿ ಕಂಬಗಳು ಮತ್ತು ಸ್ಲಾಬ್ ನಿರ್ಮಿಸಿ ಅದರ ಮೇಲೆ ಪಾಡ್ ಟ್ಯಾಕ್ಸಿಗಳ ಮಾರ್ಗ ನಿರ್ಮಿಸುವ ತಂತ್ರಜ್ಞಾನ ಸೂಕ್ತ ಎಂದು ತಜ್ಞರು ನಿರ್ಧರಿಸಿದ್ದಾರೆ.
ಏನಿದು ಪಿಆರ್‌ಟಿಎಸ್?
ಇದೊಂದು ಸಾರ್ವಜನಿಕ ಸಾರಿಗೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನಿಗದಿತ ದೂರವನ್ನು ನಿರ್ದಿಷ್ಟ ಸಮಯದಲ್ಲಿ ಇದು ಕ್ರಮಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಕಾರಿಡಾರ್ ಇರುವುದರಿಂದ ಸಂಚಾರದಟ್ಟಣೆ ಕಿರಿಕಿರಿ ಇಲ್ಲ. ಮೆಟ್ರೋ ರೈಲು ಮುಖ್ಯರಸ್ತೆಗಳಲ್ಲಿ ಮಾತ್ರ ಸಂಚರಿಸುತ್ತದೆ.
ಎಲ್ಲಿಂದ ಎಲ್ಲಿಯವರಿಗೆ?
ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನದಟ್ಟಣೆ ಪ್ರದೇಶವಾಗಿರುವ ಎಂಜಿ ರೋಡ್ ಬಳಿಯ ಟ್ರಿನಿಟಿ ಸರ್ಕಲ್‌ನಿಂದ ವೈಟ್‌ಫೀಲ್ಡ್ ತನಕ ಪಾಡ್ ಕಾರ್ ಸೇವೆಯು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ.
ವೈಟ್‌ಫೀಲ್ಡ್ ಯಾಕೆ?
ನಗರದ ಅತ್ಯಧಿಕ ವಾಹನದಟ್ಟಣೆ, ಜನದಟ್ಟಣೆ ಇರುವ ಪ್ರದೇಶ ವೈಟ್‌ಫೀಲ್ಡ್.
ನಿತ್ಯ ಪೀಕ್ ಅವರ್‌ನಲ್ಲಿ ಜನ ಅಲ್ಲಿ ಪರದಾಡುತ್ತಾರೆ. ಜತೆಗೆ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವುದರಿಂದ, ಇಲ್ಲಿ ಬಳಕೆ ಪ್ರಮಾಣ ಬೇರೆಡೆಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹೀಗಿರುತ್ತೆ ಪಾಡ್ ಕಾರ್:-
ವಂಡರ್‌ಲಾನಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ಯಾಷಿಂಗ್ ಕಾರುಗಳಂತೆಯೇ ಇರುವ ಈ ಪಾಡ್ ಟ್ಯಾಕ್ಸಿಗಳು ಮ್ಯಾಗ್ನೆಟಿಕ್ ವ್ಹೀಲ್ ಮೂಲಕ ಕಾರ್ಯಾಚರಣೆ ಮಾಡುತ್ತವೆ.
ಇವುಗಳ ಉದ್ದ 4 ಮೀ. ಇರುತ್ತದೆ. ಮಾರ್ಗದಲ್ಲಿ ಪ್ರತಿ 10 ಮೀಟರ್ ಅಂತರದಲ್ಲಿ ಒಂದರಂತೆ ಕಾರ್ಯಾಚರಣೆ ಮಾಡುತ್ತದೆ.
ಪ್ರಯಾಣ ದರ ಕಡಿಮೆ?
ಆಟೋ, ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಹೋಲಿಸಿದರೆ, ಪಿಆರ್‌ಟಿಎಸ್ ಟ್ಯಾಕ್ಸಿಗಳ ದರ ಅರ್ಧಕ್ಕರ್ಧ ಕಡಿಮೆ ಎನ್ನಲಾಗಿದೆ. ಆಟೋ ಪ್ರತಿ ಕಿ.ಮೀ.ಗೆ 20 ರೂ. ಆಗುತ್ತದೆ. ಟ್ಯಾಕ್ಸಿಗಳಲ್ಲಿ ಕಿ.ಮೀಗೆ 18 ರೂ. ಆಗುತ್ತದೆ. ಆದರೆ, ಪಾಡ್ ಟ್ಯಾಕ್ಸಿ ಪ್ರಯಾಣ ದರ ಕಿ.ಮೀಗೆ 9ರಿಂದ 10 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೊಂದು ದಿನ ಊಟ ಇಲ್ಲದೆ, ಮಲಗೋಕೆ ಜಾಗ ಇಲ್ಲದೆ ಚೆನ್ನೈನ ಫುಟ್ಪಾತ್ ಮೇಲೆ ಇದ್ದ ಈ ಹುಡುಗನ ಇವತ್ತಿನ ಸಾಧನೆ ಕೇಳಿದ್ರೆ ನೀವೆಲ್ಲ ಹುಬ್ಬೇರುಸ್ತೀರಾ. ಜೀವನ ಒಂದೇ ರೀತಿಯಲ್ಲಿ ಯಾವತ್ತೂ ಇರೋದಿಲ್ಲ ಅನ್ನೋದಕ್ಕೆ ಈ ಹುಡುಗನೇ ಸ್ಪಷ್ಟ ಉದಾಹರಣ..
ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಜ.2 ರ ಗೆಜೆಟಿಯರ್ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6,…
ಮೂಗುತಿಯೆಂದರೆ ಕೇವಲ ಸಾಂಪ್ರದಾಯಿಕ ಮಹಿಳೆಯರು ಮಾತ್ರ ಹಾಕಿಕೊಳ್ಳುವುದು, ಆಧುನಿಕ ಮಹಿಳೆಯರು ಮೂಗುತಿ ಧರಿಸುವುದಿಲ್ಲ. ಅವರು ಇದರಿಂದ ದೂರು ಇರುತ್ತಾರೆ ಎನ್ನುವ ಕಾಲವಿತ್ತು. ಆದರೆ ಕ್ರಮೇಣ ಮೂಗುತಿ ಕೂಡ ಒಂದು ಫ್ಯಾಷನ್ ಆಗುತ್ತಾ ಹೋಯಿತು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಮೂಗುತಿ ಸುಂದರಿ ಎಂದು ಕರೆಯಲ್ಪಡುತ್ತಿದ್ದಳು. ಆಕೆಯನ್ನು ನೋಡಿಯೋ ಗೊತ್ತಿಲ್ಲ. ಮೂಗುತಿ ಮಾತ್ರ ಒಂದು ಫ್ಯಾಷನ್ ಆಗಿ ಬೆಳೆಯಿತು.
ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.
ಕೆಮಿಕಲ್ ಗೋಡಾನ್ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್ನಲ್ಲಿ ನಡೆದಿದೆ. ಇಂದು ನಸುಕಿನ ಜಾವ 2 ಗಂಟೆಗೆ ಗೋಡಾನ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು 20 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜಗನ್ನಾಥ್ ಘಾಟ್ನಲ್ಲಿ ಗೋಡಾನ್ ಇದ್ದು, ಇಂದು ಬೆಳಗ್ಗೆ ಬೆಂಕಿ ಹೊತ್ತಿಗೊಂಡಿದೆ. ಈಗ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಚಿವ…
ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್ಮೆಂಟ್ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…