ಮನರಂಜನೆ

ಕೊನೆಗೂ ಗಾಯಕ ಚಂದನ್ ಶೆಟ್ಟಿಗೆ ತನ್ನ ಮನದ ಮಾತು ತಿಳಿಸಿದ ನಿವೇದಿತಾ ಗೌಡ..!

822

ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದ ಬಾರ್ಬಿ ಡಾಲ್ ನಿವೇದಿತಾ ಗೌಡ ತನ್ನ ಆತ್ಮೀಯ ಗೆಳೆಯ ರ‍್ಯಾಪರ್ ಚಂದನ್ ಶೆಟ್ಟಿಗೆ ಕಾಫಿ ಮಗ್ ಮೂಲಕ ತಮ್ಮ ಮನದ ಮಾತನ್ನು ಹೇಳಿದ್ದಾರೆ.

ನಿವೇದಿತಾ ತಮ್ಮ ಗೆಳೆಯ ಚಂದನ್ ಅವರಿಗೆ ಒಂದು ಕಾಫಿ ಮಗ್ ನೀಡಿದ್ದಾರೆ. ಆ ಕಾಫಿ ಮಗ್ ಮೇಲೆ “ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಎಂದು ನಾನು ಬಯಸುತ್ತೇನೆ. ಇಂತಿ ನಿನ್ನ ಪ್ರೀತಿಯ ನಿವಿ” ಎಂದು ಬರೆದು ಅದನ್ನು ಚಂದನ್‍ಗೆ ಕಳುಹಿಸಿದ್ದಾರೆ.

ಚಂದನ್ ಶೆಟ್ಟಿ ಅವರು ನಿವೇದಿತಾ ನೀಡಿದ ಮಗ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಇದು ನನಗೆ ತುಂಬಾ ಮುಖ್ಯವಾಗುತ್ತದೆ ನಿವಿ. ನಾನು ನಿನ್ನನ್ನ ಮಿಸ್ ಮಾಡಿಕೊಳ್ಳುತ್ತೇನೆ ನಿವಿ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಕಾರವಾರದಲ್ಲಿ ನಡೆದ ಅಂಕೋಲಾ ಉತ್ಸವದಲ್ಲಿ ಚಂದನ್ ವೇದಿಕೆ ಮೇಲೆ ತಮ್ಮ ಗೆಳೆತಿ ನಿವೇದಿತಾ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಈ ವೇಳೆ ನಿವೇದಿತಾ ಅವರು ಎಲ್ಲರೂ ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್ ಮಾಡಿ ಎಂದು ತಿಳಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ