ಉಪಯುಕ್ತ ಮಾಹಿತಿ

ಹಸುವಿನ ತುಪ್ಪದಲ್ಲಿ ಅಡಗಿದೆ ಪೋಷಕಾಂಶಗಳ ಆಗರ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

1302

ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣ ವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ ಮಿಳ್ಳೆ ಎಂಬ ಉಪ ಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿ ದ್ದಾರೆ. ಇದರ ಆಳ ಕಡಿಮೆ ಇದ್ದು, ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ! ಮಿಳ್ಳೆ ಈಗ ಅದೃಶ್ಯವಾಗಿರುವ ಕಾರಣ ತುಪ್ಪದ ಸೇವನೆಯ ಪ್ರಮಾಣ ಮತ್ತು ನಿಮ್ಮ ಇಂದಿನ ದೇಹಸ್ಥಿತಿಯನ್ನು ಪರಿಗಣಿಸಿ ಎಷ್ಟು  ಸೇವಿಸ ಬಹುದು ಎಂಬುದನ್ನು ನಿಮ್ಮ ಕುಟುಂಬ ವೈದ್ಯರು ಸಲಹೆ ನೀಡಬಲ್ಲರು. ಆ ಪ್ರಕಾರವೇ ಸೇವಿಸಿದರೆ ಉತ್ತಮ.

ಆರೋಗ್ಯದ ವಿಷಯಕ್ಕೆ  ಬಂದಾಗ ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ:

ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣ ದಲ್ಲಿರುವ ಕ್ಯಾಲೋರಿಗಳು,ಇ ಪೋಷಕಾಂಶ ಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವೂ ಇವೆ. ಆದರೆ ಎಮ್ಮೆಯ ಹಾಲಿನಿಂದ ತಯಾರಿಸಿದ ತುಪ್ಪದಲ್ಲೂ ಬಹುತೇಕ ಈ ಗುಣಗಳಿದ್ದರೂ ಕೊಬ್ಬಿನ ಪ್ರಮಾಣ ಅಪಾರ ವಾದುದರಿಂದ ಎಮ್ಮೆ ಹಾಲಿನ ತುಪ್ಪಕ್ಕಿಂತ ಹಸುವಿನ ಹಾಲಿನ ತುಪ್ಪವೇ ಉತೃಷ್ಕವಾಗಿದೆ. ಸಾಮಾನ್ಯವಾಗಿ ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ ಕೊಂಚ ತುಪ್ಪವನ್ನು ಬೆರೆಸಿ ತಿಂದರೆ ಆ ಖಾದ್ಯದ ರುಚಿ ಬಹಳಷ್ಟು ಹೆಚ್ಚುತ್ತದೆ. ಅಷ್ಟೆ ಅಲ್ಲ, ಹಸುವಿನ ತುಪ್ಪವನ್ನು ಉಪಯೋಗಿಸಿ ಮೈಯನ್ನು ಮಸಾಜ್ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ:-

ಸುಟ್ಟ ಗಾಯಕ್ಕೆ, ಚಿಕ್ಕ ಪುಟ್ಟ ತರಚು ಗಾಯಗಳಿಗೆ ತುಪ್ಪವನ್ನು ಹಚ್ಚುವ ಮೂಲಕ ಗಾಯಗಳು ಬೇಗನೇ ಮಾಗುತ್ತವೆ. ಅಷ್ಟೆ ಅಲ್ಲ ಇದರ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲೂ ಸಾಧ್ಯವಾಗುತ್ತದೆ. ಜೀವರಾಸಾಯನಿಕ ಕ್ರಿಯೆ ಹೆಚ್ಚಿಸುವುದು, ಕೂದಲು ಉದುರುವುದನ್ನು ತಡೆಗಟ್ಟುವುದು, ಹೃದಯ ಕ್ಷಮತೆಯನ್ನು ಹೆಚ್ಚಿಸುವುದು ಮೊದಲಾದ ಆರೋಗ್ಯ ಕರ ಪ್ರಯೋಜನಗಳಿವೆ.

ತುಪ್ಪದ ಆರೋಗ್ಯಕರ ಪ್ರಯೋಜನಗಳ ವಿವರ:-

ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಪ್ರತಿ ಊಟದೊಂದಿಗೆ ಸೇವಿಸಿದರೆಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ತುಪ್ಪ ಜೀರ್ಣಕ್ರಿಯೆಗೆ ಪ್ರಚೋದಕದ ರೂಪದಲ್ಲಿ ನೆರವಾಗುತ್ತದೆ.ಕೆಲವು ಸಂಶೋಧನೆಗಳ ಪ್ರಕಾರ ತುಪ್ಪದ ಸೇವನೆಯಿಂದ ಕ್ಯಾನ್ಸರ್ ಬೆಳವಣಿಕೆ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ ತುಪ್ಪವನ್ನು ನಿತ್ಯವೂ ಸೇವಿಸುತ್ತಾ ಬಂದಿರು ವವರಲ್ಲಿ ಕ್ಯಾನ್ಸರ್ ಪ್ರಮಾಣ ಅತಿ ಕಡಿಮೆ ಇರುವುದಕ್ಕೆ ಇದೇ ಕಾರಣವಿರಬಹುದು.

ತುಪ್ಪದ ಆರೋಗ್ಯಕರ ಪ್ರಯೋಜನಗಳ ವಿವರ:-

ರಾತ್ರಿ ಮಲಗುವ ಮುನ್ನ ಬಿಸಿಬಿಸಿ ಹಾಲಿಗೆ ಕೊಂಚವೇ ಕೊಂಚ ತುಪ್ಪವನ್ನು ಸೇರಿಸಿ ಕುಡಿಯುವ ಮೂಲಕ ಉತ್ತಮ ನಿದ್ದೆ ಬರುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಬೆಳಿಗ್ಗೆ ಕಲ್ಮಶಗಳು ಸುಲಭವಾಗಿ ಹೊರ ಹೋಗಲು ಸಾಧ್ಯವಾಗುತ್ತದೆ. ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚಲು ತುಪ್ಪ ನೆರವಾಗುತ್ತದೆ ಎಂದು ಬಹಳ ಹಿಂದಿಂದಲೂ ಭಾರತ ದಲ್ಲಿ ನಂಬಿಕೊಂಡು ಬರಲಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿ ಗಳಿಗೆ ತುಪ್ಪದ ತಿಂಡಿಗಳನ್ನು ಆಗಾಗ ನೀಡಲಾಗುತ್ತಿತ್ತು. ಮೂಗಿನಿಂದ ರಕ್ತ ಬರುತ್ತಿದ್ದರೆ ವೈದ್ಯರಿಗೆ ತೋರಿಸುವ ಮೊದಲು ತುಪ್ಪವನ್ನು ಪ್ರಯೋಗಿಸಿ ಒಂದು ಕೈ ನೋಡಬಹುದು. ಇದಕ್ಕಾಗಿ ಕರಗಿದ ತುಪ್ಪವನ್ನು ಮೂಗಿನ ತುದಿ ಮತ್ತು ಹೊಳ್ಳೆಗಳ ಒಳಗೆ, ವಿಶೇಷವಾಗಿ ರಕ್ತ ಒಸರುವೆಡೆ ದಿನಕ್ಕೆ ಮೂರು ನಾಲ್ಕು ಬಾರಿಯಂತೆ ಎರಡರಿಂದ ಮೂರು ದಿನ ಹಚ್ಚಬೇಕು.

ಶುದ್ಧ ತುಪ್ಪವನ್ನು ಪರೀಕ್ಷಿಸುವುದು ಹೇಗೆ?

ಇಂದು ದುಬಾರಿ ತುಪ್ಪದೊಂದಿಗೆ ಅಗ್ಗದ ಡಾಲ್ಡಾವನ್ನು ಬೆರೆಸಿ ಮಾರಾಟ ಮಾಡುವ ಖದೀಮರಿದ್ದಾರೆ. ಆದರೆ ತುಪ್ಪವನ್ನು ತಕ್ಷಣ ಪರೀಕ್ಷಿಸಲು ಕೆಲವು ಸುಲಭ ವಿಧಾನಗಳಿವೆ.
ಶುದ್ಧ ತುಪ್ಪ ಬಿಸಿ ಅಂಗೈಯಲ್ಲಿ ತಕ್ಷಣ ಕರಗುತ್ತದೆ. ಇದಕ್ಕಾಗಿ ಎರಡೂ ಹಸ್ತಗಳನ್ನು ಸುಮಾರು ಇಪ್ಪತ್ತು ಸೆಕೆಂಡ್ ಉಜ್ಜಿ ತಕ್ಷಣ ಒಂದು ಚಿಕ್ಕ ಪ್ರಮಾಣದ ಗಟ್ಟಿ ತುಪ್ಪವನ್ನು ಕೈ ಮೇಲೆ ಇಟ್ಟಾಕ್ಷವೇ ಕರಗಲು ಪ್ರಾರಂಭವಾಗಬೇಕು. ಹಾಗೂ ಕೆಲವೇ ಸೆಕೆಂಡುಗಳಲ್ಲಿ ದ್ರವವಾಗಬೇಕು. ಒಂದು ವೇಳೆ ಕರಗಲು ಹೆಚ್ಚು ಸಮಯ ತೆಗೆದುಕೊಂಡರೆ ಇದು ಅಪ್ಪಟವಲ್ಲ ಎಂದು ಖಾತ್ರಿಯಾಗುತ್ತದೆ. ಹಿರಿಯರು ಪರೀಕ್ಷಿಸಲು ಇನ್ನೊಂದು ವಿಧಾನ ಅನು ಸರಿಸುತ್ತಿದ್ದರು. ಇದಕ್ಕೆ ಶುದ್ದ  ತುಪ್ಪದ ಪರಿಮಳ ನಿಮ್ಮ ನೆನಪಿನಲ್ಲಿರಬೇಕು. ಕೊಂಚ ತುಪ್ಪವನ್ನು ಹಸ್ತದ ಹಿಂಬದಿಗೆ ಸವರಿ ನಾಲ್ಕಾರು ಬಾರಿ ಉಜ್ಜಿ ಒರೆಸಿಬಿಡಬೇಕು. ಅಪ್ಪಟ ತುಪ್ಪವಾದರೆ ತುಪ್ಪದ ವಾಸನೆ ಹೆಚ್ಚು ಹೊತ್ತು ಉಳಿದಿರುತ್ತದೆ. ಡಾಲ್ಡಾ ಸೇರಿಸಿದ್ದರೆ ಈ ಪರಿಮಳ ಒಂದು ನಿಮಿಷದೊಳಗ ಖಾಲಿಯಾಗುತ್ತದೆ.

ಶುದ್ಧ ತುಪ್ಪವನ್ನು ಪರೀಕ್ಷಿಸುವ ವಿಧಾನ :-

 

ಶುದ್ಧ ತುಪ್ಪದ ಬಾಟಲಿಯ ಮೇಲ್ಭಾಗದಲ್ಲಿ ಕರಗಿದ್ದು ಇದರ ಕೊಂಚವೇ ಕೆಳಗೆ ತುಪ್ಪ ಮರಳು ಮರಳಾಗಿರುತ್ತದೆ. ಆದರೆ ಇದು ಹಸುವಿನ ಮತ್ತು ಎಮ್ಮೆ ಹಾಲಿನ ತುಪ್ಪದಲ್ಲಿ
ಎರಡರಲ್ಲೂ ಕಂಡುಬರುತ್ತದೆ. ಒಂದು ವೇಳೆ ಡಾಲ್ಡಾ ಬೆರೆಸಿದ್ದರೆ ಮೇಲ್ಭಾಗ ಕರಗುವುದಿಲ್ಲ, ಗಟ್ಟಿಯಾಗಿಯೇ ಇರುತ್ತದೆ. ಶುದ್ಧ ತುಪ್ಪದ ದೀಪ ಯಾವುದೇ ಚಿಟಿಪಿಟಿಯಿಲ್ಲದೇ ಉರಿಯುತ್ತದೆ. ತುಪ್ಪವನ್ನು ಹತ್ತಿಯ ಬತ್ತಿಗೆ ಸವರಿ ಬೆಂಕಿ ಕೊಟ್ಟು ಉರಿಸಿ ಸೂಕ್ಷ್ಮವಾಗಿ ಗಮನಿಸಿ. ಶುದ್ದ ತುಪ್ಪವಾದರೆ ಜ್ವಾಲೆ ನೇರವಾಗಿ, ಏಕಪ್ರಕಾರವಾಗಿ ಹೊಗೆಯಿಲ್ಲದೇ ಉರಿಯುತ್ತದೆ. ಡಾಲ್ಡಾ ಬೆರೆಸಿದ್ದರೆ ಜ್ವಾಲೆ ಕೊಂಚ ಚಿಟಿಪಿಟಿ ಎನ್ನುವುದು ಅಥವಾ ವೇಗವಾಗಿ ಚಿಕ್ಕದೊಡ್ಡದಾಗುವುದು ಮತ್ತು ಜ್ವಾಲೆಯ ತುದಿಯಲ್ಲಿ ಕೊಂಚ ಕಪ್ಪು ಹೊಗೆಯಂತಿರುವುದು ಕಂಡುಬರುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ಸುಮಲತಾ ಅವರ ಮುಂದಿನ ಪ್ಲಾನ್ ಏನು?

    ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…

  • ಸುದ್ದಿ

    ಹೊರಬಿತ್ತು ರಾಮ ಸೇತುವಿನ ನಿಗೂಡ ರಹಸ್ಯ..!ಅಮೇರಿಕಾದ ನಾಸಾ ವಿಜ್ಞಾನಿಗಳು ಹೇಳಿದ ಸತ್ಯ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.

  • ಗ್ಯಾಜೆಟ್

    ಮುಂಬರುವ ದಿನಗಳಲ್ಲಿ ಹೂವಾವೆಯ್ ಇಂಡಿಯಾದಿಂದ 5G ತಂತ್ರಜ್ಞಾನ ಬಳಕೆ..?ತಿಳಿಯಲು ಈ ಲೇಖನ ಓದಿ..

    ಮುಂದಿನ ಕೆಲ ದಿನಗಳಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ತರಲು Huawei ತುದಿಗಾಲಲ್ಲಿ ನಿಂತಿದೆ, ಭಾರತೀಯರು 4ಜಿ ತಂತ್ರಜ್ಞಾನದ ರುಚಿ ಸವಿಯುತ್ತಿರುವ ಬೆನ್ನಲ್ಲೇ ಇದೀಗ ೫ಜಿ ತಂತ್ರಜ್ಞಾನವು ಭಾರತಕ್ಕೆ ಬರುತ್ತಿರುವುದು ಕೌತುಕಕ್ಕೆ ಕಾರಣವಾಗಿದೆ.

  • ವಿಚಿತ್ರ ಆದರೂ ಸತ್ಯ

    ನೆರೆಹೊರೆಯ ಜಗಳದಲ್ಲಿ ಜೈಲು ಪಾರಾದ ನಾಯಿ..!ತಿಳಿಯಲು ಈ ಲೇಖನ ಓದಿ…

    ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಫೆಬ್ರವರಿ, 2019) ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ಇಂದು ನೀವು…

  • ನೆಲದ ಮಾತು

    ಮೋದಿಯ ತಂತ್ರಗಾರಿಕೆಯಿಂದಾಗಿ, ತಾನು ತೋಡಿದ ಹಳ್ಳದಲ್ಲಿ ತಾನೇ ಬಿದ್ದಿದೆ ಚೀನಾ!

    ಭಾರತ ಚೀನಾಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗುವಂತೆ ಕಾಣುತ್ತಿವೆ. ಆದರೆ ಜಾಗತಿಕ ಗತಿ-ವಿಧಿಗಳನ್ನು ಅರ್ಥೈಸಿಕೊಂಡ ಯಾವನಾದರೂ ಚೀನಾದ ಇಂದಿನ ಹತಾಶ ಮನಸ್ಥಿತಿಯನ್ನು ನೋಡಿದರೆ ಚೀನಾ ಯುದ್ಧಕ್ಕೆಳೆಸಲಾರದೆಂದು ತಕ್ಷಣಕ್ಕೆ ನಿಶ್ಚಯಿಸಬಲ್ಲ. ಚೀನಾ ತನ್ನ ಹಿಡಿತದಲ್ಲಿರುವ ಪತ್ರಿಕೆಗಳ ಮೂಲಕ ಕೊಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ಒಂದು ಕಾಲದಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ಕೊಡುತ್ತಿತ್ತಲ್ಲ ಅದೇ ದನಿಯಿದೆ.