ವಿಸ್ಮಯ ಜಗತ್ತು

ನ್ಯಾಯಾಲಯದ ಈ ಪ್ರಕರಣಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ! ಮುಂದೆ ಸಿಗೋದು ಇಲ್ಲ!ಇನ್ನೂ ವಾದ ನಡೀತಾ ಇದೆ!ಯಾಕೆ ಗೊತ್ತಾ?ಈ ಲೇಖನಿ ಓದಿ…

437

ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.

ಆಗ ಶಿಕ್ಷಕರ ಒಪ್ಪಿಗೆ ಮೇರೆಗೆ ವಿಧ್ಯಾರ್ಥಿಯ ಕಾನೂನು ಕೋರ್ಸ್ ಮುಂದುವರಿಯಿತು. ಕೋರ್ಸ್ ಮುಗಿದ ನಂತರ ಶಿಕ್ಷಕರು ಶುಲ್ಕವನ್ನು ಪಾವತಿಸುವಂತೆ ಕೇಳಲು ಆರಂಭಿಸಿದಾಗ ವಿಧ್ಯಾರ್ಥಿಯು ಅವ್ರ ನಡುವೆ ನಡೆದ ಒಪ್ಪಂದವನ್ನು ನೆನಪಿಸಿ ದಿನಗಳನ್ನು ಮುಂದುಡುತ್ತಿದ್ದನು.

ಇದರಿಂದ ಬೇಜಾರಾದ ಶಿಕ್ಷಕನು ವಿಧ್ಯಾರ್ಥಿ ಮೇಲೆ ಕೋರ್ಟ್’ನಲ್ಲಿ ಮೊಕದ್ದೊಮ್ಮೆ ಹೂಡಿದನು. ನಂತರ ವಿಧ್ಯಾರ್ಥಿಯು ಸಹ ಶಿಕ್ಷಕನ ಮೇಲೆ ಮೊಕದ್ದೊಮ್ಮೆ ಹೂಡಿ ಒಬ್ಬರ ಮೇಲೊಬ್ಬರು ವಾದ ಮಾಡಿದರು.

ಮೂಲ

ಶಿಕ್ಷಕ ತನ್ನ ವಾದವನ್ನು ಹೀಗೆ ಹೇಳುತ್ತಾನೆ:-

“ನಾನು ಈ ಪ್ರಕರಣವನ್ನು ಗೆದ್ದರೆ,  ನ್ಯಾಯಾಲಯದ ಕಾನೂನು ಪ್ರಕಾರ, ವಿದ್ಯಾರ್ಥಿಯು ಬಾಕಿ ಪಾವತಿಸದೇ ಇರುವ ಕಾರಣದಿಂದ ನನಗೆ ಪಾವತಿಸಬೇಕಿದೆ. ಮತ್ತು ನಾನು ಈ ಪ್ರಕರಣವನ್ನು ಸೋತರೂ ಸಹ , ವಿದ್ಯಾರ್ಥಿ ನನಗೆ  ಹಣವನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಒಪ್ಪಂದದ ಪ್ರಕಾರ ಅವರು ನ್ಯಾಯಾಲಯದಲ್ಲಿ ಗೆದ್ದ ಮೊದಲ ಮೊದಲ ಪ್ರಕರಣ … ಹಾಗಾಗಿ ನಾನು ನನ್ನ ಹಣವನ್ನು ಪಡೆಯುತ್ತೇನೆ “.

ಮೂಲ

ಬುದ್ದಿವಂತ ವಿಧ್ಯಾರ್ಥಿಯ ವಾದ:-

ಸಮಾನವಾಗಿ ಪ್ರತಿಭಾವಂತ, ವಿದ್ಯಾರ್ಥಿ ಮತ್ತೆ ಹೇಳುವ ಮೂಲಕ ವಾದಿಸಿದರು: “ನಾನು ಕಾನೂನು ಗೆದ್ದಲ್ಲಿ, ಕಾನೂನಿನ ಪ್ರಕಾರ, ನಾನು ಶಿಕ್ಷಕರಿಗೆ ಏನನ್ನೂ ಪಾವತಿಸಬೇಕಾಗಿಲ್ಲ, ಏಕೆಂದರೆ ನನ್ನ ಯಾವುದೇ ಬಾಕಿ ಇಲ್ಲ ಅಂತನೇ ನಾನು ವಾದ ಮಾಡುತ್ತಿದ್ದೇನೆ.

ಮೂಲ

ಮತ್ತು ನಾನು ಒಂದು ವೇಳೆ ಕೇಸ್ ಸೋತರೆ, ನಾನು ಅವನಿಗೆ ಪಾವತಿಸಬೇಕಾಗಿಲ್ಲ. ಏಕೆಂದರೆ ನಾನು ನನ್ನ ಮೊದಲ ಪ್ರಕರಣವನ್ನು ಇನ್ನೂ ಗೆಲ್ಲಲಿಲ್ಲ …. ಆದ್ದರಿಂದ ಎರಡೂ ರೀತಿಯಲ್ಲಿ, ನಾನು ಶಿಕ್ಷಕನಿಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.

ಮೂಲ

ಇದೊಂದು ವಾದ ವಿವಾದಗಳನ್ನೇ ರೆಕಾರ್ಡ್ ಆಗಿರುವ ದೊಡ್ಡ ವಾದವಾಗಿದೆ.

ಇದು ಪ್ರಾಚೀನ ಗ್ರೀಕ್ ಇತಿಹಾಸದ ಭಾಗವಾಗಿದೆ. ವಕೀಲ ಶಿಕ್ಷಕ ಪ್ರೊಟಾಗೋರಾಸ್ (485-415 BCE) ಮತ್ತು ವಿದ್ಯಾರ್ಥಿ ಯುಥಾಲೋಸ್. ಇದನ್ನು ಪ್ರೊಟೊಗೊರಾಸ್ ಪ್ಯಾರಡಾಕ್ಸ್ ಎಂದು ಕರೆಯಲಾಗುತ್ತದೆ. ಈ ಪ್ರಕರಣವನ್ನು ಇಂದಿಗೂ ಪರಿಹರಿಸಲು ಸಾಧ್ಯವಾಗಿಲ್ಲ.

ಅತ್ಯಂತ ಆಸಕ್ತಿದಾಯಕ ಭಾಗ – ಇದು ಕಾನೂನು ಶಾಲೆಗಳಲ್ಲಿ ತರ್ಕ ಸಮಸ್ಯೆಯಾಗಿ ಇನ್ನೂ ಚರ್ಚಿಸುತ್ತಿದೆ (ಇಂದಿಗೂ ಸಹ)!

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ