ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಟಾಲಿವುಡ್ ಖ್ಯಾತ ನಟ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು(ಫೆ.18) ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ತಾರಕರತ್ನ(39) ಕೊನೆಯುಸಿರೆಳೆದಿದ್ದಾರೆ. ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್ ಮಾಡಲಾಗಿತ್ತು. 23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಇತ್ತ ತಾರಕರತ್ನ ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಂದಮೂರಿ ಕುಟುಂಬಸ್ಥರು ಹಾರೈಸಿದ್ದರು. ಆಸ್ಪತ್ರೆಗೆ ಆಂಧ್ರ ಪ್ರದೇಶ ಸಚಿವರು, ಮಾಜಿ ಸಚಿವರು ಸೇರಿದಂತೆ ಹಲವು ರಾಜಕೀಯ ಗಣ್ಯರು ಆಸ್ಪತ್ರೆಗ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯದ ಬಗ್ಗೆ ವೈದ್ಯರ ಜೊತೆ ಚರ್ಚಿಸಿದ್ದರು. ಆದ್ರೆ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.
1983ರ ಫೆಬ್ರವರಿ 22ರಂದು ಜನಿಸಿದ್ದ ತೆಲುಗು ನಟ ತಾರಕರತ್ನ, ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಂದಮೂರಿ ಮೋಹನ್ಕೃಷ್ಣ, ನಂದಮೂರಿ ಶಾಂತಿ ಮೋಹನ್ ದಂಪತಿಯ ಪುತ್ರ, ಹೆಸರಾಂತ ನಟ, ಮಾಜಿ ಸಿಎಂ ಎನ್ಟಿಆರ್ ಮೊಮ್ಮಗ ತಾರಕರತ್ನ ಅವರು 2012ರಲ್ಲಿ ಅಲೇಖ್ಯಾ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದರು.
39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು. ಅವರು ಇತ್ತೀಚೆಗೆ ಡಿಸ್ನಿ+ ಹಾಟ್ಸ್ಟಾರ್ನ ತೆಲುಗು ವೆಬ್ ಸಿರೀಸ್ 9 ಅವರ್ಸ್ನಲ್ಲಿ ಕೂಡಾ ಅವರು ನಟಿಸಿದ್ದಾರೆ. ಇನ್ನು ಅಮರಾವತಿ ಚಿತ್ರಕ್ಕಾಗಿ ತಾರಕರತ್ನ ಅವರಿಗೆ 2009ರಲ್ಲಿ ಆಂಧ್ರದ ಪ್ರತಿಷ್ಠಿತ ನಂದಿ ಅವಾರ್ಡ್ (ಬೆಸ್ಟ್ ವಿಲನ್) ಪ್ರಶಸ್ತಿ ದೊರೆತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.
ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾ? ಇದು ಕೇವಲ ಒಂದು ಪದ್ಧತಿಯಲ್ಲ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇದೆ. ಹಿಂದು ಧರ್ಮದಲ್ಲಿ ಹಾಲು, ಕೇಸರಿ ಹಾಗೂ ಬಾದಾಮಿಗೆ ಬಹಳ ಮಹತ್ವವಿದೆ. ಹಾಗಾಗಿ ಮದುವೆಯ ಮೊದಲ ರಾತ್ರಿ ವಧು ಕೇಸರಿ, ಬಾದಾಮಿಯುಕ್ತ ಹಾಲನ್ನು ವರನಿಗೆ ನೀಡ್ತಾಳೆ….
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.
ಕೋತಿ ಚೇಷ್ಟೆ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಿಲ್ಲ. ಅದು ಚೇಷ್ಟೆಯಿಂದಲೇ ಗುರುತಿಸಿಕೊಳ್ಳುವಂತಹ ಪ್ರಾಣಿ. ತನ್ನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುವುದು, ಸಿಕ್ಕ ಸಿಕ್ಕ ಜನರ ಕೈಲಿರುವ ಆಹಾರ ಪೊಟ್ಟಣಗಳನ್ನು ಕಿತ್ತುಕೊಳ್ಳುವುದು ಮಾಡುತ್ತದೆ.
ಮೈಸೂರು: ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಮೇಲ್ವರ್ಗದ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರು- ಊಟಿ ರಸ್ತೆಯ ವೀರಾನಪುರ ಗೇಟ್ ಬಳಿಯ ಗ್ರಾಮದವೊಂದರಲ್ಲಿ ನಡೆದಿದೆ. ಜೂನ್ 3 ರಂದು ಘಟನೆ ನಡೆದಿದ್ದು, ದಲಿತ ವ್ಯಕ್ತಿಗೆ ಥಳಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳ್ಳಗಾದ 35 ವರ್ಷದ ವ್ಯಕ್ತಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಸೆಂಟ್ ಮೇರಿಸ್ ಸೈಕಿಯಾಟ್ರಿಕ್ ಡಿ- ಅಡಿಕ್ಸನ್ ಮತ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಾಲಯ ಪ್ರವೇಶಿಸಿದ್ದರಿಂದ ಮೇಲ್ವರ್ಗದವರು ಹಲ್ಲೆ ನಡೆಸಿದ್ದು,…
ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ…