fact check

ವಿಧಾನಸಭೆ ಚುನಾವಣೆ 2023:ಈ ವೇಳಾಪಟ್ಟಿ ನಿಜವೇ?

113

ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ. ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ ತಿಳಿಯಬಹುದಾಗಿದೆ.

 

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ ಹಳೆಯ ವೇಳಾಪಟ್ಟಿಯ ಫೋಟೊವನ್ನೆ ಎಡಿಟ್ ಮಾಡಲಾಗಿದೆ. ಈ ಫೋಟೊದಲ್ಲಿ 2018 ಇರುವ ಕಡೆ 2023 ಎಂದು (ಎಡಿಟ್) ತಿದ್ದಲಾಗಿದೆ. ಆ ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಲಾಗುತ್ತಿದ್ದು, ಅದನ್ನೆ ಪ್ರಸಕ್ತ ಸಾಲಿನ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿ ಎಂದು ನಂಬಿಸಲಾಗುತ್ತಿದೆ.

ನಿಜವೇನೋ ಎಂಬಂತೆ 2018ರ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿ ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಅದರಲ್ಲಿ ವಿಧಾನಸೌಧದ ಚಿತ್ರ ಸಹಿತ ನೀತಿ ಸಂಹಿತಿ ಜಾರಿ , ಚುನಾವಣಾ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ನಾಮಪತ್ರಗಳ ಪರಿಶೀಲನೆ, ಮತದಾನ, ಮತ ಎಣಿಕೆ ಎಂಬೆಲ್ಲ ಅಂಶಗಳನ್ನು ದಿನಾಂಕ ಸಹಿತ ಸೇರಿಸಲಾಗಿದೆ. ಆದರೆ ಇದು ಐದು ವರ್ಷಗಳ ಹಿಂದಿನ (2018ರ) ಚುನಾವಣೆಯ ವೇಳಾಪಟ್ಟಿ ಎಂಬುದು ಖಚಿತವಾಗಿದೆ. ಹೀಗಿದ್ದರೂ ಇದೇ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಕರ್ನಾಟಕ ವಿಧಾನಸಭೆ 2023ರ ಚುನಾವಣೆ ಬಗ್ಗೆ ಆಯೋಗ ವೇಳಾಪಟ್ಟಿ ಘೋಷಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ಕೆಲವೇ ದಿನಗಳಲ್ಲಿ ನೀಡಲಿದ್ದಾರೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೀ ಕುಡಿಯಲು ದುಡ್ಡಿಲ್ಲದೆ ಪರದಾಡ್ತಿದ್ದ ನಟಿ ಮನೆಯಲ್ಲಿ ದೇವರ ಫೋಟೊ ಬದಲು ಸಲ್ಮಾನ್ ಫೋಟೋ..!ಯಾಕೆ ಗೊತ್ತಾ?

    ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….

  • ಸುದ್ದಿ

    ಇವತ್ತಿಗೆ ನನಸಾಯ್ತು ನನ್ನ 30 ವರ್ಷಗಳ ಅರಣ್ಯದ ಕನಸು – ಸದಾಶಿವ ಮರಿಕೆ,.!

    ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ. ಪರಿಸರದ…

  • govt, modi, ತಂತ್ರಜ್ಞಾನ

    ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ನಮ್ಮ ಭಾರತ!

    ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

  • ಸಿನಿಮಾ

    ಅಬ್ಬಬ್ಬಾ “ರಾಜ್ ವಿಷ್ಣು” ಕನ್ನಡ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಚಿಂದಿ! ಟ್ರೇಲರ್ ನೋಡಲು ಈ ಲೇಖನಿ ಓದಿ….

    ಶರಣ್ ನಾಯಕ ನಟನಾಗಿ ನಟಿಸಿದ್ದು ಪ್ರಮುಖ ಪಾತ್ರಧಾರಿಗಳಾಗಿ ಚಿಕ್ಕಣ್ಣ, ಸಾಧು ಕೋಕಿಲ ನಟಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹೆಸರುಗಳನ್ನು ಇಟ್ಟು ನಿರ್ಮಾಣವಾಗುತ್ತಿರುವ ಸಿನಿಮಾ ‘ರಾಜ್ ವಿಷ್ಣು’ ಸಿನಿಮಾದ ಟ್ರೇಲರ್ ಇದೀಗ ಯೂಟ್ಯೂಬಲ್ಲಿ

  • ಸುದ್ದಿ

    ಪ್ರವಾಹದಲ್ಲಿ ಕೊಚ್ಚಿ ಹೋದ ಅರ್ಚಕ , ಎರಡು ದಿನ ಸೇತುವೆ ಕೆಳಗೆ ಇದ್ದು ಬದುಕಿ ಬಂದಿದ್ಹೇಗೆ..?

    ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ. ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ…