ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು

ಅನಾದಿಕಾಲದಿಂದಲೂ ಮಾನವನಿಗೆ ಆನೆಯು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅಂದಿನ ಭಾರತದ ಅರಸರ ಪಟ್ಟದಾನೆಯು ಸಮಾಜದಲ್ಲಿ ಅತಿ ಗೌರವಾನ್ವಿತ ಸ್ಥಾನವನ್ನು ಹೊಂದಿತ್ತು. ಸೈನ್ಯದ ಶಕ್ತಿಯು ಗಜಬಲವನ್ನು ಹೆಚ್ಚಾಗಿ ಅವಲಂಬಿಸಿತ್ತು. ಉಳಿದಂತೆ ಆನೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಬಳಸುವ ವಾಡಿಕೆ ಇಂದಿಗೂ ಇದೆ. ದಕ್ಷಿಣ ಭಾರತದ ಬಹಳಷ್ಟು ದೇವಸ್ಥಾನಗಳು ತಮ್ಮದೇ ಆನೆಯನ್ನು ಸಾಕಿಕೊಂಡಿವೆ. ಕೇರಳದ ತ್ರಿಸ್ಸೂರಿನ ಪೂರಮ್ ಉತ್ಸವ ಆನೆಗಳೇ ಕೇಂದ್ರವಾಗುಳ್ಳ ಒಂದು ಅತ್ಯಾಕರ್ಷಕವಾದ ಉತ್ಸವ

ಗಜ ಗರ್ಭ ನಾಲ್ಕರಿಂದ ಐದು ವರ್ಷಗಳಿಗೆ ಒಮ್ಮೆ ಆನೆ ಮರಿ ಹಾಕುತ್ತದೆ. ಗಜ ಗರ್ಭ ಎಂದು ಕೇಳಿರ್ತೀರಿ. ಆನೆಯ ಗರ್ಭಾವಸ್ಥೆ ಅವಧಿ 22 ತಿಂಗಳು. ಅವುಗಳ ಬೆಳವಣಿಗೆ ಪೂರ್ಣ ಪ್ರಮಾಣದಲ್ಲಿ ಅಗಲು 17 ವರ್ಷವಾಗುತ್ತದೆ. ಅಂದಹಾಗೆ ಗಂಡಾನೆಗಳಿಗೆ ಮಾತ್ರ ದಂತವಿರುತ್ತದೆ
ಹೆಣ್ಣಾನೆಯೇ ಚೀಫ್ ಹೆಣ್ಣಾನೆಗಳು ಗುಂಪಿನಲ್ಲಿದ್ದರೆ, ಗಂಡಾನೆಗಳು ಒಂಟಿಯಾಗಿರುತ್ತವೆ. ಹಿರಿಯ ಹೆಣ್ಣಾನೆಯೊಂದು ಗುಂಪಿನ ಮುಖಂಡತ್ವ ವಹಿಸಿರುತ್ತದೆ. ಆ ಗುಂಪಿನ ಹಿರಿಯ ಆನೆಗಳು ಹಿಂದೆ ತೋರಿಸಿದ ದಾರಿಯಲ್ಲೇ ಅವು ಮೇವು-ನೀರಿಗಾಗಿ ಹುಡುಕುತ್ತಾ ಸಾಗುತ್ತವೆ. ಅಂತಹ ದಾರಿಯನ್ನೇ ಆನೆ ಪಥ ಅಥವಾ ಎಲಿಫೆಂಟ್ ಕಾರಿಡಾರ್ ಅನ್ನೋದು.

ಸೊಂಡಿಲ ವಿಶೇಷ ಆನೆಯ ವಿಶೇಷವೇ ಅದರ ಸೊಂಡಿಲು. ಹೆಚ್ಚಿನ ಚಟುವಟಿಕೆಗಳು ಸೊಂಡಿಲ ಮೂಲಕವೇ ಮಾಡುತ್ತವೆ. ಚಿಕ್ಕದೊಂದು ಗರಿಯನ್ನು ನಾಜೂಕಾಗಿ ಕೀಳುವುದಿರಲಿ, ದೊಡ್ಡದೊಂದು ಮರವನ್ನು ನೆಲಕ್ಕೆ ಉರುಳಿಸುವುದಿರಲಿ ಅದನ್ನು ಸೊಂಡಿಲ ಮೂಲಕವೇ ಮಾಡುತ್ತವೆ.
ನೆನಪು, ವಾಸನಾ ಗ್ರಹಣ ಶಕ್ತಿ ಅದ್ಭುತ ಇನ್ನು ಆನೆಗಳ ವಾಸನಾ ಗ್ರಹಣ ಶಕ್ತಿ ಅದ್ಭುತ. ಹನ್ನೆರಡು ಮೈಲು ದೂರವಿರುವ ನೀರಿನ ಪ್ರದೇಶವಾದರೂ ವಾಸನೆ ಮೂಲಕವೇ ಗ್ರಹಿಸುತ್ತವೆ. ಅದೇ ರೀತಿ ಅವುಗಳ ಸ್ಮರಣ ಶಕ್ತಿಯೂ ಅಮೋಘ. ಆ ಕಾರಣಕ್ಕೆ ಇಂಗ್ಲಿಷ್ ನಲ್ಲಿ ಎಲೆಫೆಂಟ್ ಮೆಮೊರಿ ಎಂಬ ಮಾತೇ ರೂಢಿಯಲ್ಲಿದೆ.
ಶಬ್ದ ಹೊರಡಿಸುವುದರಲ್ಲೂ ಸೂಕ್ಷ್ಮ ಗಾಳಿಯ ಮೂಲಕ ಶಬ್ದ ಹೊರಡಿಸುವುದರಲ್ಲೂ ಅಂಥ ಶಬ್ದವನ್ನು ಗ್ರಹಿಸುವುದರಲ್ಲೂ ಆನೆ ಬಹಳ ವಿಶಿಷ್ಟ ಪ್ರಾಣಿ. ಎಷ್ಟೋ ದೂರದಲ್ಲಿನ ಶಬ್ದವನ್ನೂ ಚೆನ್ನಾಗಿ ಗ್ರಹಿಸಿ, ಉತ್ತರ ಕೂಡ ನೀಡುತ್ತದೆ.
ದಿನಕ್ಕೆ 100- 150 ಕೆ.ಜಿ. ಆಹಾರ ಪಳಗಿದ ಆನೆ ಎಷ್ಟು ಸೌಮ್ಯವೋ ಕಾಡಾನೆ ಅಷ್ಟೇ ಅಪಾಯಕಾರಿ. ದೊಡ್ಡ ಆನೆಯೊಂದು ದಿನಕ್ಕೆ 100- 150 ಕೆ.ಜಿ. ಆಹಾರ ಸೇವಿಸುತ್ತದೆ. ದಿನದಲ್ಲಿ ಒಮ್ಮೆಯಾದರೂ ನೀರು ಕುಡಿಯುತ್ತದೆ. ಹಾಗಾಗಿ ನೀರಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…
ಬೆಂಗಳೂರು, ಜುಲೈ 29 ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. 2017-18, 2018-19 ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23507 ಮೀನುಗಾರರು ವಾಣಿಜ್ಯ ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್…
ಅಮರಶಿಲ್ಪಿ ರವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ.
ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ. ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು. ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ…
ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು.
ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿಯಲ್ಲಿ ಪುಕ್ಸಟ್ಟೆ ನಾಯಕನಾಗಲು ಮಂಜು ಹೊರಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಬಗ್ಗೆ ಕಾರ್ಯಕರ್ತನ ಬಳಿ ಪ್ರೀತಂ ಗೌಡ ಮಾತನಾಡಿದ್ದಾರೆನ್ನಲಾಗಿದೆ. ಹಾಸನದಲ್ಲಿ ಬಳ್ಳಾರಿ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆ. 10…