ಆರೋಗ್ಯ

ಕ್ಯಾರೆಟ್ ನಲ್ಲಿದೆ ಅದ್ಬುತ ಅರೋಗ್ಯಕರ ಅಂಶಗಳು.

33

ಕ್ಯಾರೆಟ್ಟುಗಳಲ್ಲಿ ಕ್ಯಾಲೋರಿ ಪ್ರೋಟೀನ್ ಹಾಗೂ ಕೊಬ್ಬಿನ ಅಂಶಗಳು ತುಂಬ ಕಡಿಮೆ ಇದ್ದು, ಸುಮಾರು 86-95 ಶೇಖಡಾದಷ್ಟು ನೀರಿನ ಅಂಶವನ್ನು ಒಳಗೊಂಡಿದೆ. ಒಂದು ಮಧ್ಯಮ ಗಾತ್ರದ ಕ್ಯಾರೆಟ್ ಸೇವಿಸುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟುಗಳು ಲಭ್ಯವಾಗುತ್ತವೆ. ವಿವಿಧ ಪ್ರೋಟಿನ್, ವಿಟಮಿನ್ ಗಳನ್ನು ಹೇರಳವಾಗಿ ಹೊಂದಿರುವ ಕ್ಯಾರೆಟ್ ರೋಗ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು, ಹಲವಾರು ರೋಗಗಳನ್ನು ದೂರವಿಡುತ್ತದೆ.ರಕ್ತದ ಶುದ್ಧತೆಗೆ ಹಾಗೂ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು ಕ್ಯಾರೆಟ್ ಯಥೇಚ್ಚವಾಗಿ ಹೊಂದಿದೆ. ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಿದ್ದು, ಕ್ಯಾರೆಟ್ ತಿನ್ನುವುದರಿಂದ ನಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

ಇದರಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ , ಅಲ್ಲದೇ ಇದರಲ್ಲಿರುವ ಬಂಧಿಸುವ ಅಂಗಾಂಶದ ಅಂಶವು ಮೂಳೆ, ಸ್ನಾಯು , ಹಲ್ಲು ಹಾಗೂ ಒಸಡುಗಳನ್ನೂ ದೃಢಗೊಳಿಸುತ್ತದೆ. ಕ್ಯಾರೆಟ್ ಅನ್ನು ಹಸಿಯಾಗಿಯೂ, ಬೇಯಿಸಿಯೂ ಸೇವಿಸಬಹುದು. ಚಿಕ್ಕದಾಗಿ ತುರಿದು ಸಾಲಾಡ್ ನಲ್ಲಿ, ಬಟಾಣಿ, ಆಲುಗಡ್ಡೆ ಮೊದಲಾದವುಗಳ ಜೊತೆಗೆ ವಿವಿಧ ಬಗೆಯ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಕ್ಯಾರೆಟ್ಟುಗಳ ರಸವನ್ನು ಕೆಲವಾರು ವ್ಯಾಧಿಗಳಿಗೆ ಔಷಧಿಯ ರೂಪದಲ್ಲಿ ಸೇವಿಸುತ್ತಾರೆ.

ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಸಹಾ ಇದೆ. ಇವುಗಳು ಮಲಬದ್ದತೆಯಾಗದಂತೆ ನೆರವಾಗುವುದಲ್ಲದೆ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ದಿಸುತ್ತದೆ. ಕ್ಯಾರೆಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳಿವೆ ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಕ್ಯಾರೆಟ್ ನೀಡಲು ಶಕ್ತವಾಗಿದ್ದು ಶ್ವಾಸಕೋಶ ಹಾಗೂ ಬಾಯಿಯ ಕುಳಿಗಳ ಕ್ಯಾನ್ಸರ್ ನಿಂದಲೂ ಸಹ ರಕ್ಷಿಸುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಹಲವಾರು ರೋಗಗಳಿಗೆ ರಾಮಬಾಣ ಈ ಒಂದು ಡ್ರಾಗನ್ ಪ್ರುಟ್. ಈ ಅರೋಗ್ಯ ಮಾಹಿತಿ ನೋಡಿ.

    ಕೆಲವು ಹಣ್ಣುಗಳು ಕಂಡ್ ಕಂಡಲ್ಲಿ ಸಿಗೋಲ್ಲ. ವಿಪರೀತ ದುಬಾರಿ ಬೇರೆ. ಹಾಗಂತ ತಿನ್ನದೇ ಇರಬಹುದು. ಅದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂಥ ಹಣ್ಣುಗಳಲ್ಲಿ ಡ್ರಾಗನ್ ಫ್ರೂಟ್ ಒಂದು. ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್‌ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್.  ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ….

  • ಸುದ್ದಿ

    ದಿನಾ ಒಂದು ಗ್ಲಾಸ್ ಈ ಹಾಲನ್ನು ಕುಡಿದರೆ ಸಾಕು ನಿಮ್ಮೆಲ್ಲಾ ಕಾಯಿಲೆಗಳು ಇನ್ನು ದೂರ,.!

    ಅರಿಶಿನ ಹಾಲು (ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು) ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ ರಕ್ತವನ್ನು ಶುದ್ಧೀಕರಿಸುತ್ತದೆ : ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ….

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ರಾಜಯೋಗ ಕಟ್ಟಿಟ್ಟಬುತ್ತಿ,. ನಿಮ್ಮ ರಾಶಿ ಇದೆಯಾ….!

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಮನೆ ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಗೆಳೆಯರಿಗೆ ಫೋನ್‌ ಮಾಡಿ ಮಾತುಕತೆ ನಡೆಸಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ಸುದ್ದಿ, ಸ್ಪೂರ್ತಿ

    ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿದ ರೈತರು. ಈ ಸುದ್ದಿ ನೋಡಿ.!

    ಕೆಲ  ರೈತರು ಹೊಂದಲ್ಲ ಒಂದು ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಹೊಸ ಪ್ರಯೋಗಗಳನ್ನು ಮಾಡಿ ತಮ್ಮ ಕೃಷಿಯಲ್ಲಿ ಲಾಭವನ್ನು ಗಳಿಸುತ್ತಾರೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹಕ್ಕೆ ಸಿಲುಕಿ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲೂ ಕೂಡ  ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಉತ್ತಮ ಕೃಷಿ ಮಾಡಿ ರೈತರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ. ನಾರಾಯಣಪುರ ಬಲದಂಡೆ ಎಂಬುವ ಕಾಲುವೆಯ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿರುವ ಅನೇಕ  ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ…

  • ರೆಸಿಪಿ

    106 ವರ್ಷದ ಈ ಅಜ್ಜಿ ವಿಶ್ವದ ಹಿರಿಯ ಯೂಟ್ಯೂಬ್ ಸ್ಟಾರ್..!ಈ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ ಗೊತ್ತಾ?

    ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

  • ರೆಸಿಪಿ

    ಮನೆಯಲ್ಲೇ ಕೆಲವೇ ಕ್ಷಣಗಳಲ್ಲಿ ಬಿಸಿ ಬಿಸಿ ಎಗ್ ಪೆಪ್ಪರ್ ಫ್ರೈ ಮಾಡಿ ತಿನ್ನಿ…ಮಾಡುವುದು ಹೇಗೆ?

    ರಜೆ ಬಂದರೆ ಸಾಕು ಮನೆಯಲ್ಲಿ ಎಲ್ಲರು ಇರುತ್ತಾರೆ. ಒಂದು ಕಡೆ ಎಲ್ರೂ ಇದ್ದರೆ ಸಾಕು ಏನಾದರೂ ಸ್ಪೈಸಿಯಾಗಿ ತಿನ್ನಲೂ ಕೇಳುತ್ತಾರೆ. ಪ್ರತಿದಿನ ಅದೇ ತಿಂಡಿ ಅಂತ ಬೇಸರ ಮಾಡಿಕೊಂಡು ತಿನ್ನುವುದಿಲ್ಲ. ಹೀಗಾಗಿ ಬೇಗ ತಯಾರಾಗುವ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ.. ಬೇಕಾಗುವ ಸಾಮಾಗ್ರಿಗಳು 1. ಮೊಟ್ಟೆ – 4    3. ಎಣ್ಣೆ – 2-3 ಚಮಚ3. ಮೆಣಸು – 1 ಚಮಚ   4. ಉಪ್ಪು – ರುಚಿಗೆ ತಕ್ಕಷ್ಟು5. ಕೊತ್ತಂಬರಿ ಸೊಪ್ಪು -ಸ್ವಲ್ಪ  6. ಅರಿಶಿಣ –…