ಸುದ್ದಿ

ಮಗು ಬಿದ್ದಿದ್ದು ಆಗುಂಬೆ ಘಾಟಿಯಲ್ಲಿ, ಗೊತ್ತಾಗಿದ್ದು ಕೊಪ್ಪದಲ್ಲಿ, ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ ಕಂದಮ್ಮ.

84

ಗುರುವಾರ ರಾತ್ರಿ 9.30ರ ಸಮಯದಲ್ಲಿ ಕಾರು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ಅಳುತ್ತಾ ನಿಂತಿತ್ತು. ಇದನ್ನು ಗಮನಿಸಿದ ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಕರೆ ತಂದು ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆ ಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮೂಲದವರಾದ ಬೀನು ಎಂಬವರು ಕುಟುಂಬ  ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ವಾಪಾಸ್ ಬರುವಾಗ ರಾತ್ರಿ ಸಮಯವಾಗಿದ್ದರಿಂದ ವಾಹನದಲ್ಲಿ ಪೋಷಕರು ನಿದ್ರೆಗೆ ಜಾರಿದ್ದರು. ಟಿಟಿ ವಾಹನದ ಹಿಂದಿನ ಡೋರ್ ಆಕಸ್ಮಿಕವಾಗಿ ತೆರೆದಿದ್ದರಿಂದ ಮಗು ಆಗುಂಬೆ ತಿರುವಿನ ಏಳನೇಯ ಕ್ರಾಸ್‍ನಲ್ಲಿ ಹೊರಗೆ ಬಿದ್ದಿದೆ. ಆದರೆ ವಾಹನದಲ್ಲಿ 8-10 ಮಂದಿ ಇದ್ದರೂ ಎಲ್ಲರೂ ಸಹ ನಿದ್ರೆಯಲ್ಲಿದ್ದರಿಂದ ಮಗು ಬಿದ್ದಿರುವುದು ತಿಳಿಯದೇ ಮುಂದೆ ತೆರಳಿದ್ದಾರೆ.

ಎನ್.ಆರ್ ಪುರ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ತಮ್ಮ ಮಗು ವಾಹನದಲ್ಲಿ ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡು ತಕ್ಷಣ ಅದೇ ಮಾರ್ಗವಾಗಿ ಕಾರು ತಿರುಗಿಸಿಕೊಂಡು ಮಗುವನ್ನು ಹುಡುಕುತ್ತಾ ವಾಪಸ್ ಬಂದಿದ್ದಾರೆ. ಬರುವಾಗ ಆಗುಂಬೆ ಫಾರೆಸ್ಟ್ ಗೇಟ್‍ನಲ್ಲಿ ಮಗು ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ತಮ್ಮ ಮಗು ಠಾಣೆಯಲ್ಲಿರುವ ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆ-ತಾಯಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ

    ಪ್ರಸ್ತುತ, ಚೈತ್ರ ಮಾಸ ನಡೆಯುತ್ತಿದೆ. ಈ ಸಮಯದಲ್ಲಿ, ಬೇವಿನ ಸೇವನೆಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದಲ್ಲೂ ಚೈತ್ರ ಮಾಸದಲ್ಲಿ ಬೇವಿನ ಎಲೆಗಳನ್ನು ತಿನ್ನುವುದು ಪ್ರಯೋಜನಕಾರಿ, ಚೈತ್ರ ಮಾಸದಲ್ಲಿ ಬೇವಿನ ಎಲೆ ಸೇವಿಸುವುದರಿಂದ ಅವರು ವರ್ಷಪೂರ್ತಿ ರೋಗಗಳಿಂದ ದೂರವಿರುತ್ತಾರೆ ಎಂದು ಹೇಳಲಾಗುತ್ತದೆ. ಬೇವಿನ ಎಲೆಗಳು ಮಾತ್ರವಲ್ಲ, ಅದರ ಕಾಂಡ, ತೊಗಟೆ, ಬೇರು ಮತ್ತು ಹಸಿ ಹಣ್ಣುಗಳೆಲ್ಲವೂ ಔ’ಷಧೀಯ ಗುಣಗಳಿಂದ ತುಂಬಿವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ಬೇವಿನ ಎಲೆಗಳನ್ನು ತಿನ್ನುವ ಮೂಲಕ, ಯಾವ…

  • ಸುದ್ದಿ

    7 ವರ್ಷಗಳಲ್ಲಿ 7 ಬಾರಿ ಗರ್ಭಪಾತ ; ಕರಳು ಚಿಮ್ಮುತ್ತೆ ಮಹಿಳೆಯ ಹೃದಯ ವಿದ್ರಾವಕ ಕಥೆ….

    ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…

  • Uncategorized, ಆರೋಗ್ಯ

    ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವಾ ಎಷ್ಟು ಹಾನಿಕರ ಗೊತ್ತಾ ನಿಮ್ಗೆ..?

    ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ಆಧ್ಯಾತ್ಮ, ಜ್ಯೋತಿಷ್ಯ

    ಶುಭ ಶನಿವಾರದಂದು ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ರೆ ಅದೃಷ್ಟವೋ ಅದೃಷ..!

    ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವತೆಗಳಿಗೆ ಅರ್ಪಣೆ ಮಾಡಲಾಗಿದೆ. ಅದ್ರಲ್ಲೂ ಶನಿವಾರಕ್ಕೆ ವಿಶೇಷ ಮಹತ್ವವಿದೆ. ಶನಿವಾರ ಶನಿದೇವನಿಗೆ ಪೂಜೆ ಮಾಡಲಾಗುತ್ತದೆ. ಕೋಪದ ದೇವರು ಶನಿ ಕೃಪೆಗೆ ಪಾತ್ರರಾಗಲು ಭಕ್ತರು ಹರಸಾಹಸ ಪಡ್ತಾರೆ. ಸಾಡೆಸಾತ್ ಶನಿ ಇದ್ದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅಂತವರು ಶನಿಯ ವಿಶೇಷ ಆರಾಧನೆ ಮಾಡಬೇಕಾಗುತ್ತದೆ. ಶನಿವಾರ ವಿಶೇಷ ಪೂಜೆ, ವೃತದ ಜೊತೆ ಶನಿವಾರ ಬೆಳಿಗ್ಗೆ ಕೆಲವೊಂದು ವಸ್ತುಗಳು ಕಣ್ಣಿಗೆ ಬಿದ್ರೆ ಶುಭಕರ. ಕಪ್ಪು ನಾಯಿ ಮೇಲೆ ಶನಿ ಸವಾರಿ ಮಾಡ್ತಾನೆ…

  • ಕ್ರೀಡೆ

    ಈ ಭಾರಿಯ ಐಪಿಎಲ್ ವಿದೇಶದಲ್ಲೋ? ಅಥವಾ ಭಾರತದಲ್ಲೋ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

    ಈ ಬಾರಿಯ ಐಪಿಎಲ್ ಕ್ರಿಕೆಟ್ ಸರಣಿ ವಿದೇಶದಲ್ಲಿ ನಡೆಯುತ್ತದೆ ಎಂಬ ಸುದ್ಧಿ ಎಲ್ಲೆಡೆ ಹರಡಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಎಲ್ಲಿ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಭಾರತದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದೇಶದಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗಿತ್ತು. 2009 ದಿಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲಾಗಿತ್ತು. ಈ ಬಾರಿಯೂ ಸಹ ವಿದೇಶದಲ್ಲಿ ಸರಣಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ಈ…