ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನೆಯಲ್ಲಿರುವ ಜಿರಳೆ ಶಾಶ್ವತವಾಗಿ ತೊಲಗಿಸಲು ಸರಳ ಮನೆಮದ್ದು. ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ ಇದು ಸಾಮಾನ್ಯ ಸಮಸ್ಯೆಯಂತು ಅಲ್ಲ. ಏಕೆಂದರೆ ಮನೆ ಎಷ್ಟೇ ಸ್ವಚ್ಛಂದವಾಗಿದ್ದರೂ ಅತಿಥಿಗಳ ಬಂದಾಗ ಒಂದು ಜಿರಲೆ ಕಾಣಿಸಿಕೊಂಡರೂ ಮುಜುಗರಕ್ಕೀಡಾಗುತ್ತೀರಿ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇಲಿ ಜಿರಳೆ ಇರುತ್ತದೆ ಇವುಗಳು ನಾನು ರೀತಿಯ ಸಾಂಕ್ರಮಿಕ ರೋಗಗಳು ತರಿಸುವಂತಹ ಕ್ರಿಮಿಗಳು ಇದ್ದೇ ಇರುತ್ತದೆ ಮನೆಯಲ್ಲಿರುವ ವಸ್ತುಗಳನ್ನು ಹಾಳುಮಾಡುವುದು ಆಹಾರ ಪದಾರ್ಥವನ್ನು ನಾಶಮಾಡುವುದು ಜಿರಳೆಗಳ ಕೆಲಸವಾಗಿದೆ. ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ ಅಪಾಯ ಕಟ್ಟಿಟ್ಟಬುತ್ತಿ. ಆಹಾರಗಳ ಮೇಲೆ ಜಿರಳೆಗಳು ಓಡಾಡುವುದರಿಂದ ಫುಡ್ ಪಾಯಿಸನ್ ಹಾಗೂ ಇನ್ನಿತರ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ಜಿರಳೆಗಳು ತೇವಾಂಶ ಮತ್ತು ಕತ್ತಲೆಯಲ್ಲಿ ಬಹಳ ವೇಗವಾಗಿ ಮತ್ತು ಸುಲಭವಾಗಿ ಸಂತಾನೋತ್ಪತಿ ಮಾಡಿಕೊಳ್ಳುತ್ತವೆ. ಅವುಗಳನ್ನು ತೊಡೆದುಹಾಕುವುದು ಕೂಡ ಅಷ್ಟು ಸುಲಭವಲ್ಲ. ಏಕೆಂದರೆ ಇಂದಿನ ಮಾಡ್ಯುಲರ್ ಅಡಿಗೆ ಮನೆಗಳಲ್ಲಿ ಅವರು ಸಾಕಷ್ಟು ಮರೆಮಾಚುವ ಸ್ಥಳಗಳನ್ನು ಕೀಟಗಳು ಬಹಳ ಸುಲಭವಾಗಿ ವಾಸಸ್ಥಾನವಾಗಿಸುತ್ತದೆ. ಕತ್ತಲೆ ಹೊಂದಿರುವ ಜಾಗ ಮತ್ತು ನೀರಿನ ಸಿಂಕ್ನಿಂದ ತೇವಾಂಶ ಹೊಂದಿರುವ ಸ್ಥಳಗಳು ಜಿರಳೆಗಳಿಗೆ ಅನುಕೂಲಕರವಾಗಿರುತ್ತದೆ.
ಜಿರಳೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಕೀಟನಾಶಕಗಳಿದ್ದರೂ, ಅವುಗಳ ಬಳಕೆಯಿಂದ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಅಲರ್ಜಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಅವುಗಳನ್ನು ಹೇಗೆ ತೊಡೆದುಹಾಕಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ.

ಬೇವಿನ ಎಲೆಗಳ ಬಳಕೆ : ಅಡುಗೆಮನೆಯಲ್ಲಿ ಜಿರಳೆಗಳನ್ನು ಹೋಗಲಾಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬೇವಿನ ಎಲೆಗಳ ಬಳಕೆ. ಅಡುಗೆಮನೆಯ ವಿವಿಧ ಮೂಲೆಗಳಲ್ಲಿ ಬೇವಿನ ಎಲೆಗಳನ್ನು ಅರೆದು ಇಟ್ಟುಬಿಡಿ. ಇದರ ಸುಗಂಧದಿಂದ ಜಿರಳೆಗಳು ಓಡಿಹೋಗುತ್ತವೆ. ಹಾಗೆಯೇ ಇದನ್ನು ಬದಲಾಯಿಸುತ್ತಿದ್ದರೆ ಜಿರಳೆಗಳು ಸಮಸ್ಯೆ ಇರುವುದಿಲ್ಲ.
ಲವಂಗಗಳ ಬಳಕೆ : ಲವಂಗವನ್ನು ಕಿಚನ್ ಡ್ರಾಯರ್ಗಳಲ್ಲಿ ಇರಿಸಿದರೂ ಜಿರಲೆಗಳು ಬರುವುದಿಲ್ಲ. ಇದರ ವಾಸನೆಯಿಂದ ಜಿರಳೆಗಳು ಹೊರ ಹೋಗುತ್ತವೆ. ವಾರಕ್ಕೊಮ್ಮೆ ಜಿರಳೆಗಳಿರುವ ಜಾಗದಲ್ಲಿ ಲವಂಗವನ್ನು ಇರಿಸುವುದರಿಂದ ಕೀಟಗಳ ತೊಂದರೆಯನ್ನು ದೂರ ಮಾಡಬಹುದು.

ಬೋರಿಕ್ ಪೌಡರ್ ಮತ್ತು ಸಕ್ಕರೆಯ ಮಿಶ್ರಣ : ಬೋರಿಕ್ ಪುಡಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿರಲೆಗಳಿರುವ ಮೂಲೆಗಳಲ್ಲಿ ಇರಿಸಿ. ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶ ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿರಲೆಗಳು ಓಡಿ ಹೋಗುತ್ತವೆ.
ಬೇವಿನ ಬಳಕೆ : ಬೇವು ಮತ್ತು ಅದರ ಎಲೆಗಳು ಅನೇಕ ಸಮಸ್ಯೆಗಳಿಗೆ ರಾಮಬಾಣ. ಹಾಗೆಯೇ ಜಿರಳೆಗಳನ್ನು ತೊಡೆದುಹಾಕಲು ನೀವು ಬೇವಿನ ಎಣ್ಣೆ ಅಥವಾ ಪುಡಿ ಎರಡನ್ನೂ ಬಳಸಬಹುದು. ರಾತ್ರಿಯ ವೇಳೆ ಅಡುಗೆಮನೆಯಲ್ಲಿ ಮತ್ತು ಒದ್ದೆಯಾದ ಸ್ಥಳದಲ್ಲಿ ಬೇವಿನ ಎಣ್ಣೆ ಅಥವಾ ಪುಡಿಯನ್ನು ಹಾಕಿದರೆ ಜಿರಲೆಗಳು ಬರುವುದಿಲ್ಲ. ದಿನ ಕಳೆದಂತೆ ಇದೇ ಕ್ರಮವನ್ನು ಪುನರಾವರ್ತಿಸುತ್ತಿದ್ದರೆ ಜಿರಲೆ ಸಮಸ್ಯೆ ಮಾಯವಾಗುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಭಾರತದ ಜೈಪುರ್ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು,…
ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.
ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ. ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು. ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ತಮ್ಮ ಸಂಪ್ರದಾಯ ಔಷಧಗಳನ್ನು ತಯಾರಿಸುತ್ತಾರೆ.ಈ ಬೀಜಗಳಿಂದ ಸಾಕಷ್ಟು ಪೋಷಕಗಳು ಲಭ್ಯವಾಗುತ್ತವೆ. ಇವುಗಳಲ್ಲಿ ಪ್ರೋಟೀನ್ ನೊಂದಿಗೆ ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಪರಸ್ ನಂತಹ ಖನಿಜಗಳು, ಐರನ್, ಜಿಂಕ್…
ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…
ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ. ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು…
ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…