ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.
ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.
ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು ಎಂಬುದನ್ನು ತಜ್ಞರು ಹೇಳಿದ್ದಾರೆ ನೋಡಿ.
1. ಚಳಿಗಾಲದಲ್ಲಿ ಆಗಾಗ ಏನಾದರೂ ತಿನ್ನುತ್ತಿದ್ದರೆ ದೇಹ ಬೆಚ್ಚಗಿರುತ್ತದೆ.
ಇದೊಂದು ಶುದ್ಧ ತಪ್ಪು ಕಲ್ಪನೆ ಎಂದು ಹೇಳುತ್ತಾರೆ ಪೌಷ್ಟಿಕತಜ್ಞರು. ಚಳಿಗಾಲ ಬಂತೆಂದರೆ ಸಾಕು, ಜಾಸ್ತಿ ಆಹಾರ ಸೇವಿಸಿ. ಆಗಾಗ ಏನಾದರೂ ಸ್ವಲ್ಪ ತಿನ್ನುತ್ತಿರಿ. ಇದರಿಂದ ದೇಹ ಬೆಚ್ಚಗಿರುತ್ತದೆ. ಅನಾರೋಗ್ಯಕ್ಕೆ ಒಳಗಾಗುವುದೂ ತಪ್ಪುತ್ತದೆ ಎಂದು ಮನೆಯಲ್ಲಿ ಹಿರಿಯರು, ಪಾಲಕರು ಹೇಳುವುದನ್ನು ಕೇಳಿದ್ದೇವೆ.
ಆದರೆ ತಜ್ಞರು ಹೇಳುವ ಪ್ರಕಾರ, ಹೀಗೆ ಪದೇಪದೆ ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆ ಹೊರತು ಬೇರೇನೂ ಉಪಯೋಗ ಆಗುವುದಿಲ್ಲ. ಅದರ ಬದಲಾಗಿದೆ ಚಳಿಗಾಲದಲ್ಲಿ ಸರಿಯಾದ ಕ್ರಮದಲ್ಲಿ ಡಯಟ್ ಮಾಡುವ ಮೂಲಕ ಕಾಯಿಲೆ ಬರುವುದನ್ನು ತಡೆಗಟ್ಟಬಹುದು. ಹಾಗಾಗಿ ಆಗಾಗ ಏನಾದರೂ ಆಹಾರ ಸೇವನೆ ಮಾಡುವುದರಿಂದ ಏನೂ ಉಪಯೋಗವಿಲ್ಲ.
2. ಮಸಾಲೆಯುಕ್ತ ಆಹಾರ ಸೇವನೆ ದೇಹವನ್ನು ಬೆಚ್ಚಗಿಡುತ್ತದೆ.
ಮಸಾಲೆಯುಕ್ತ, ಖಾರ, ಸ್ಪೈಸಿ ಆಹಾರಗಳ ಸೇವನೆಯಿಂದ ಖಂಡಿತ ಮೈ ಬೆವರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮೆಣಸಿನಕಾಯಿ ಪ್ರಮಾಣ ಹೆಚ್ಚಾಗಿರುವ ಆಹಾರ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗಿ ನಾವು ಚಳಿಯಿಂದ ಪಾರಾಗಬಹುದು ಎಂದುಕೊಂಡಿದ್ದರೆ ಅದು ದೊಡ್ಡ ತಪ್ಪು.
ಆಹಾರ ತಜ್ಞರ ಪ್ರಕಾರ, ಮಸಾಲೆಯುಕ್ತ ಸ್ಪೈಸಿ ಆಹಾರಗಳು ನಮ್ಮ ದೇಹದ ಉಷ್ಣತೆಯ ಮೇಲೆ ಯಾವುದೇ ಗುರುತರ ಪ್ರಭಾವವನ್ನೂ ಬೀರುವುದಿಲ್ಲ. ಅದನ್ನು ತಿಂದ ಕ್ಷಣಕ್ಕೆ ಖಾರದಿಂದ ಮೈ ಬಿಸಿಯಾಗಬಹುದು. ಬೆವರಬಹುದು. ಆದರೆ ನಂತರ ಏನೂ ಪ್ರಯೋಜನವಿಲ್ಲ.
3. ನೀವು ಶೀತ, ಕೆಮ್ಮಿನಿಂದ ಬಳಲುತ್ತಿದ್ದರೆ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು
ಯಾರಾದರೂ ಹೀಗೆ ಹೇಳಿದರೆ ಅದನ್ನು ಕೇಳಲೇಬೇಡಿ ಎನ್ನುತ್ತಾರೆ ತಜ್ಞರು.
ಕಿತ್ತಳೆ, ಲಿಂಬುವಿನಂತಹ ಸಿಟ್ರಸ್ ಹಣ್ಣುಗಳು ಚಳಿಗಾಲದಲ್ಲಿ ದೇಹಕ್ಕೆ ಅತ್ಯವಶ್ಯಕ. ವಿಟಮಿನ್ ಸಿಯನ್ನು ಹೇರಳವಾಗಿ ಹೊಂದಿರುವ ಈ ಹಣ್ಣುಗಳಲ್ಲಿ ನೀರಿನ ಅಂಶವೂ ಹೆಚ್ಚಾಗಿರುತ್ತದೆ.
ಕಿತ್ತಳೆಗಳು ಚಳಿಗಾಲದ ಹಣ್ಣುಗಳು. ಅವು ಚಳಿಗಾದಲ್ಲಿ ಸಿಗುತ್ತವೆ ಎಂದರೆ ಆ ಸಮಯದಲ್ಲಿಯೇ ನಮ್ಮ ದೇಹಕ್ಕೆ ಬೇಕು ಎಂದರ್ಥ. ಕೆಮ್ಮು, ನೆಗಡಿಯಾದಾಗ ಕಿತ್ತಳೆ, ಲಿಂಬು ಹಣ್ಣುಗಳ ಸೇವನೆ ಮಾಡಬೇಕು. ನಮ್ಮೊಳಗಿನ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಅಲ್ಲದೆ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಕಟ್ಟಿಕೊಂಡ ಕಫವನ್ನು ಸಡಿಲಗೊಳಿಸುತ್ತವೆ ಹಾಗೂ ಶೀತವನ್ನು ತೊಡೆದುಹಾಕುತ್ತದೆ ಎಂದು ನ್ಯೂಟ್ರಿಷಿಯನಿಸ್ಟ್ ಹೇಳುತ್ತಾರೆ.
4. ಡೇರಿ ಉತ್ಪನ್ನಗಳಿಂದ ದೂರವಿರಿ
ಈ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಮೊದಲೇ ಚಳಿ ಇರುತ್ತದೆ. ಶೀತ, ಕೆಮ್ಮು, ಜ್ವರ, ಕಫ ಇರುತ್ತದೆ. ಹೀಗಿರುವಾಗ ಡೇರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪಗಳ ಸೇವನೆಯಿಂದ ಮತ್ತಷ್ಟು ಕಫ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಬಹುತೇಕರ ನಂಬಿಕೆ. ಆದರೆ ನಿಜಕ್ಕೂ ಹಾಗೇನೂ ಆಗುವುದಿಲ್ಲ ಎಂಬುದನ್ನು ಆಹಾರತಜ್ಞರು ಪತ್ತೆಹಚ್ಚಿದ್ದಾರೆ.
ಚಳಿಗಾಲದಲ್ಲಿ ರಾತ್ರಿ ವೇಳೆ ಬಿಸಿ ಹಾಲಿಗೆ ಸ್ವಲ್ಪ ಕೇಸರಿ ಬೆರಸಿ ಕುಡಿಯುವುದು ತುಂಬ ಉತ್ತಮ. ಹಾಲಿನ ಉತ್ಪನ್ನಗಳನ್ನು ಹಿತಮಿತವಾಗಿ ಸೇವಿಸುವುದರಿಂದ ಪೋಷಕಾಂಶ ಸಿಗುತ್ತದೆ ಎಂದು ಹೇಳಿದ್ದಾರೆ.
5.ಚಳಿಗಾಲದಲ್ಲಿ ವಿಟಮಿನ್ ಸಪ್ಲಿಮೆಂಟ್ಸ್ ತೀರ ಅಗತ್ಯ
ವಿಟಮಿನ್ಗಳನ್ನು ತೆಗೆದುಕೊಳ್ಳುವುದು ಒಳ್ಳೆಯದೇ. ಆದರೆ ಉಳಿದ ಕಾಲಗಳಿಗಿಂತ ಚಳಿಗಾಲದಲ್ಲೇ ತೆಗೆದುಕೊಳ್ಳಬೇಕು ಎಂಬುದು ತಪ್ಪು ಅಭಿಪ್ರಾಯ.
ಒಬ್ಬ ಮನುಷ್ಯ ತನ್ನ ದೇಹಕ್ಕೆ ಬೇಕಾದ ವಿಟಮಿನ್ಗಳನ್ನು ಪಡೆಯಲು ಸಮತೋಲನಯುಕ್ತ ಡಯಟ್ ಮಾಡುವುದು ಉತ್ತಮ. ಸುಮ್ಮನೆ ತೆಗೆದುಕೊಳ್ಳುವ ಅನಗತ್ಯ ಸಪ್ಲಿಮೆಂಟ್ಸ್ಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ.
ಪ್ರಸ್ತುತ ದಿನಗಳಲ್ಲಿ ಮತದಾನ ಮಾಡಲು ಹಿಂದೆ ಮುಂದೆ ನೋಡುವ ಜನರ ಮುಂದೆ ಇವರು ಎಲ್ಲರಿಗಿಂತ ಮೊದಲೇ ಮತ ಹಾಕಲು ಬಯಸುತ್ತಾರೆ.ಆದರೆ ಶಿಮ್ಲಾದ ಶ್ಯಾಮ್ ಶರಣ್ ನೇಗಿ ಯವರು ಸ್ವತಂತ್ರ ಭಾರತದ ಮೊದಲ ಮತದಾರ ಎಂದು ಪ್ರಸಿದ್ಧರಾಗಿದ್ದಾರೆ.
ಹೌದು ಆಯುರ್ವೇದದಲ್ಲಿ ಹೇಳಿರುವಂತೆ ಹಲವು ರೋಗಗಳಿಗೆ ಹಲವು ರೀತಿಯ ಮದ್ದುಗಳನ್ನು ನೀಡಲಾಗಿದೆ. ಆದ್ರೆ ರೀತಿಯಾಗಿ ಡೆಂಘಿ ಜ್ವರಕ್ಕೆ ಒಂದು ರಾಮಭಾಣವಾಗಿ ಈ ಬೆಲ್ಲ ಮತ್ತು ಈರುಳ್ಳಿ ಸಹಾಯವಾಗಿದೆ. ಇದಕ್ಕೆ ಉದಾಹರಣೆಯಾಗಿ ಅರೋಗ್ಯ ಇಲಾಖೆಯ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ವೇಳೆ ನೀಡಲಾದ ಭರವಸೆಗಳನ್ನು ಈಡೇರಿಸೋದರಲ್ಲೇ ನಿರತರಾಗಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಒಂದೇ ದಿನಕ್ಕೆ 1 ಲಕ್ಷದ 26 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಈ ವೇಳೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚುನಾವಣೆ ವೇಳೆ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಜಗನ್ ಇದೀಗ ಒಂದೇ ಭಾರಿಗೆ 1 ಲಕ್ಷದ 26 ಸಾವಿರ ಸರ್ಕಾರಿ ಉದ್ಯೋಗಕ್ಕೆ ನೇಮಕ ನಡೆಸಿದ್ದು ನಿನ್ನೇ ನಡೆದ ಸಮಾರಂಭದಲ್ಲಿ ಸ್ವತಃ ತಾವೇ ಅಭ್ಯರ್ಥಿಗಳಿಗೆ…
ಆ ಊರಿನಲ್ಲಿ ಅಂದ ಅನ್ನೋಅಂದಕ್ಕೇನೆ ಹಂಗಿದಂಗಂಗೆ ಉಂಡೆನಾಮ ತಿಕ್ಕಿದಂತೆ ಬೆಳ್ಳಗಾಗಿಸಿ ಮಿರಿಮಿರಿ ಮಿಂಚಿಸಿದಂತಹಾ ಹುಡುಗಿಯರಿದ್ದಾರಂತೆ, ಅದರಲ್ಲೂ ಅವರ ಮೇಲೆ ನಲವತ್ತು ಹಿಡಿ ಮರಳು ಅವರ ಮೇಲೆಸೆದರೂ ಕೆಳಕ್ಕಿಳಿಯದಷ್ಟು ಹುಡುಗಿಯರ ರಾಶಿ ರಾಶಿ ಇದ್ದಾರೆ !
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…