inspirational

ಪ್ರಯಾಣಿಕರ ಉಪಯೋಗಕ್ಕಾಗಿ ಆಟೋವನ್ನೇ ಮನೆಯಂತೆ ಮಾಡಿದ ಚಾಲಕ ಸಿಗುತ್ತೆ ಹಲವು ಸೌಲಭ್ಯ..!

47

ಚಾಲಕರೊಬ್ಬರು ತನ್ನ ಆಟೋವನ್ನು ಮನೆಯಂತೆ ಮಾಡಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸತ್ಯವನ್ ಗೈಟ್ ಅವರು ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲಿ ಎಂದು ತಮ್ಮ ಆಟೋದಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸತ್ಯವನ್ ಅವರ ಆಟೋದಲ್ಲಿ ವಾಶ್‍ ಬೇಸಿನ್, ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್, ಗಿಡಗಳು ಇನ್ನಿತರ ಸೌಲಭ್ಯಗಳು ಕಾಣಬಹುದು.

ವಿಶೇಷ ಏನಂದರೆ ಸತ್ಯವನ್ ಅವರು ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ಯಾವುದೇ ಹಣ ಪಡೆಯುವುದಿಲ್ಲ. ಅಲ್ಲದೆ ಸತ್ಯವನ್ ತಮ್ಮ ಆಟೋ ಹಿಂದೆ ‘ಮುಂಬೈನ ಮೊದಲ ಹೋಂ ಸಿಸ್ಟಮ್ ಆಟೋ ರಿಕ್ಷಾ’ ಎಂದು ಬರೆಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸತ್ಯವನ್, ನೀವು ನನ್ನ ಆಟೋದಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಹುದು. ಇಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತೆ. ವಾಶ್ ಬೇಸಿನ್ ಕೂಡ ಇದೆ. ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ನಾನು ಯಾವುದೇ ಹಣ ಪಡೆಯುವುದಿಲ್ಲ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಆಟೋವನ್ನು ಈ ರೀತಿ ಬದಲಾಯಿಸಿದೆ ಎಂದು ತಿಳಿಸಿದ್ದಾರೆ.

ಸತ್ಯವನ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಲವರು, ‘ಒಳ್ಳೆಯ ಕೆಲಸ’, ‘ಉತ್ತಮ ಕಾರ್ಯ ಮಾಡುತ್ತಿದ್ದಿರಿ’, ‘ಕೇವಲ ಮುಂಬೈಯವರು ಈ ರೀತಿ ಮಾಡಬಹುದು’ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಿಚ್ಚನ ನಳಪಾಕ ಸೌಟು ಹಿಡಿದು ಮೊಟ್ಟೆ ದೋಸೆ ಮಾಡಿದ ಸುದೀಪ್…!

    ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ಟಿನಲ್ಲಿ ಕಿಚ್ಚ ಸುದೀಪ್ ರುಚಿ ರುಚಿ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದ್ದಾರೆ. ಹೌದು, ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ ಹಲವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅ. 2 ಅಂದರೆ ನಾಳೆಯೇ ಚಿತ್ರ ತೆರೆಯಮೇಲೆ ಸಖತ್ ಸದ್ದು ಮಾಡಲಿದೆ. ಈ ನಡುವೆ ಸುದೀಪ್ ಚಿತ್ರೀಕರಣ ವೇಳೆ ಚಿತ್ರ ತಂಡದ ಜೊತೆ ಕಳೆದ ಸಿಹಿ ನೆನೆಪಿನ ವಿಡಿಯೋವನ್ನು…

  • ಆರೋಗ್ಯ

    ನಿಂಬೆ ಸಿಪ್ಪೆಯನ್ನ ಬಿಸಾಡ್ತೀದೀರಾ ಇನ್ನು ಮುಂದೆ ಬಿಸಾಡಬೇಡಿ ಇದರಿಂದ ಸಾಕಷ್ಟು ಉಪಯೋಗಗಳಿವೆ.

    ಲಿಂಬೆಯನ್ನು ಅಡುಗೆಯ ರುಚಿಗೆ ಮತ್ತು ಔಷಧಿಗೆ ಬಳಸುತ್ತಾರೆ, ನಮ್ಮ ಆರೋಗ್ಯಕ್ಕೂ ಸಹ ಲಿಂಬೆ ಉತ್ತಮ ಆರೈಕೆ. ಸಾಮಾನ್ಯವಾಗಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲರೂ ಸಿಪ್ಪೆಯನ್ನು ಬಿಸಾಡುತ್ತಾರೆ ಆದರೆ ನಮಗೆ ತಿಳಿದಿಲ್ಲ ಲಿಂಬೆ ರಸಕ್ಕಿಂತ ಹತ್ತು ಪಟ್ಟು ಸಿಪ್ಪೆಯಲ್ಲಿ ಹತ್ತಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು. ಲಿಂಬೆಯ ಸಿಪ್ಪೆಯಲ್ಲಿ ಮಿಟಮಿನ್ಸ್ , ಖನಿಜ, ಕರಗದೇ ಇರುವಂತಹ ನಾರುಗಳು ಹಾಗೂ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಹಾಗೂ ಮಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸುತ್ತದೆ. ಹಾಗಾಗಿ…

  • ಗ್ಯಾಜೆಟ್

    ಹಣದ ಬದಲು ಎಟಿಎಂನಲ್ಲಿ ಬಂತು ಪೇಪರ್…! ತಿಳಿಯಲು ಈ ಲೇಖನವನ್ನು ಓದಿ …

    ಬಳ್ಳಾರಿ ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇಲ್ಲಿನ ಟ್ಯಾಂಕ್‌ 1 ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ನೋಟಿನ ಬದಲು ಪೇಪರ್‌ ಬಂದ ಘಟನೆ ನಡೆದಿದೆ. ರಮೇಶ್‌ ಎನ್ನುವವರು 8000 ರೂಪಾಯಿ ಡ್ರಾ ಮಾಡಿದ್ದು 500 ರೂಪಾಯಿ ಮುಖಬೆಲೆಯ 15 ನೋಟುಗಳ ನಡುವೆ ಅದೇ ಗಾತ್ರದ ಚಲನ್‌ ಮಾದರಿಯ ಪೇಪರ್‌ವೊಂದು ಬಂದಿದೆ. ಹಣವನ್ನು ಎಣಿಸಿ ನೋಡುವಾಗ ಪೇಪರ್‌ ಕಂಡಿದ್ದು  ಬ್ಯಾಂಕ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಂದೋ ಹಣದ…

  • ಮನರಂಜನೆ

    ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕಾಲಿಗೆ ಬಿದ್ದು ಕೈ ಮುಗಿದು ತಪ್ಪಾಯಿತೆಂದು ಕೇಳಿಕೊಂಡ ಅಕ್ಷತಾ..!

    ಕನ್ನಡದ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಶೋ ಆರರಲ್ಲಿ ಸದಾ ಸುದ್ದಿಯಲ್ಲೇ ಇರುವ ಅಕ್ಷತಾ ಮತ್ತು ರಾಕೇಶ್ ಸ್ಪರ್ಧಿಗಳು ಮತ್ತೆ ಈಗ ಬಿಸಿ ಬಿಸಿ ಸುದ್ದಿಯಲ್ಲಿದ್ದಾರೆ.. ಬಿಗ್ ಮನೆಯ ಮಂದಿಗೆ ಬಿಗ್‍ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಹೆಸರು ‘ಮಡಿಕೆ ಒಡಿ, ಲಕ್ಷುರಿ ಪಡಿ’. ಇದರ ಅರ್ಥ ಮಡಿಕೆಯನ್ನು ಒಡೆದು ಬಜೆಟ್ ಗಳಿಸುವುದಾಗಿದೆ. ಈ ಟಾಸ್ಕ್ ನಲ್ಲಿ ಮಡಿಕೆ ಒಡೆಯುವ ಜವಾಬ್ದಾರಿಯನ್ನು ರಶ್ಮಿ ಪಡೆದಿದ್ದು, ಮಡಿಕೆ ಒಡೆದ ಬಳಿಕ ಅದರಲ್ಲಿರುವ ಚೀಟಿಗಳನ್ನು ಓದಿ…

  • ಆರೋಗ್ಯ

    ನಿಂಬೆಹಣ್ಣಿನ ಈ ಉಪಯೋಗಗಳನ್ನು ಕೇಳಿದ್ರೆ, ನೀವ್ ಉಪಯೋಗಿಸದೆ ಸುಮ್ನೆ ಇರಲ್ಲ..!

    ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು.ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ಮಾಡಲಿಕ್ಕೆ, ಇಲ್ಲವೇ ಮಾಟ ಮಂತ್ರ ಮಾಡಲಿಕ್ಕೆ ಮಾತ್ರ ಸೀಮಿತವಲ್ಲ.