ಸುದ್ದಿ

ನಿತ್ಯಾನಂದನ ಆಶ್ರಮದಲ್ಲಿ ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ಫೇಸ್‍ಬುಕ್ ಲೈವಿನಲ್ಲಿ ತಂದೆಗೆ ಮಗಳ ಖಡಕ್ ಉತ್ತರ.

81

ನಿತ್ಯಾನಂದನ ಆಶ್ರಮದಲ್ಲಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಯುವತಿಯೇ ಫೇಸ್ಬುಕ್ ನಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ಎಲ್ಲ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾಳೆ.

ಅಪಹರಣಗೊಂಡಿದ್ದಾಳೆ ಎಂಬ ಆರೋಪ ಕೇಳಿಬಂದ ಯುವತಿ ಫೇಸ್ಪುಕ್ ನಲ್ಲಿ ಪ್ರತ್ಯಕ್ಷವಾಗಿ ತಂದೆಯ ವಿರುದ್ಧವೇ ಕಿಡಿಕಾರಿದ್ದಾಳೆ. ಲೈವ್ ವಿಡಿಯೋ ಮೂಲಕ ತಮ್ಮನ್ನು ಯಾರೂ ಅಪಹರಿಸಿಲ್ಲ. ಆದರೆ ಸುಖಾಸುಮ್ಮನೆ ನಮ್ಮ ಗುರುಗಳಾದ ನಿತ್ಯಾನಂದ ಸ್ವಾಮೀಜಿ ಮೇಲೆ ಆರೋಪಿಸಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಾಗಿದೆ. ಆದರೆ ಸ್ವಾಮೀಜಿ ನಮಗೆ ತಂದೆ ಸಮಾನರು, ಈ ರೀತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ವಿಡಿಯೋದಲ್ಲಿ ತನ್ನ ಹೆಸರನ್ನು ಮಾ ನಿತ್ಯ ತತ್ವಪ್ರಿಯ ಆನಂದ ಎಂದು ಹೇಳಿಕೊಂಡಿದ್ದಾಳೆ.

ನನ್ನನ್ನು ಯಾರೂ ಅಪಹರಿಸಿಲ್ಲ. ನನ್ನ ವೈಯಕ್ತಿಕ ಕಾರಣ, ಕುಟುಂಬದಲ್ಲಿ ವೈಮನಸ್ಸು ಇರುವುದರಿಂದ ಹೆತ್ತವರ ಜೊತೆ ಇರಲಾರದೆ ಆಶ್ರಮದಲ್ಲಿದ್ದೇನೆ. ನಾನು ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ಇದು ನನ್ನ ಬದುಕು, ನಾನು ಇಚ್ಛೆ ಪಟ್ಟು ಈ ಬದುಕನ್ನು ಬದುಕುತ್ತಿದ್ದೇನೆ ಎಂದು ತಿಳಿಸಿದ್ದಾಳೆ. 
ಸ್ವಾಮೀಜಿಯ ಮೇಲೆ ವೈಯಕ್ತಿಕ ಕಾರಣಗಳಿಂದ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರು ಆರೋಪಿಸಿರುವುದು ಸುಳ್ಳು, ದೂರಿನಲ್ಲಿ ಉಲ್ಲೇಖಿಸಿರುವುದು ಸಹ ಸುಳ್ಳು. ನಮ್ಮನ್ನು ಸ್ವಾಮೀಜಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಹಾಗೂ ನನ್ನ ಸಹೋದರಿ ಜೊತೆಗೆ ಇದ್ದೇವೆ. ಹೆತ್ತವರು ಖಾವಿ ಬಿಟ್ಟು ಬನ್ನಿ ಅಂತಿದ್ದಾರೆ. ಆದರೆ ನಾವು ಇದಕ್ಕೆ ತಯಾರಿಲ್ಲ ಎಂದು ಹೇಳಿದ್ದಾಳೆ.

ಪೊಲೀಸರು, ಮಾಧ್ಯಮದವರು ಎಲ್ಲರೂ ನಮಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸುಖಾಸುಮ್ಮನೆ ಆಶ್ರಮದಲ್ಲಿರುವವರನ್ನು ಬಂಧಿಸುತ್ತಿದ್ದಾರೆ. ಇದು ಕುಟುಂಬದ ಸಮಸ್ಯೆ, ಇದಕ್ಕೂ ಆಶ್ರಮಕ್ಕೂ ಸಂಬಂಧವಿಲ್ಲ. ನನಗೆ ಖಾವಿ ಬಿಟ್ಟು ಬದುಕು ಇಲ್ಲ. ನಿತ್ಯಾನಂದ ಸ್ವಾಮೀಜಿ ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನೈಜ ಪರಿಸ್ಥಿತಿ ಬಗ್ಗೆ ಎಷ್ಟೇ ಹೇಳಿದದರೂ ಪೊಲೀಸರು ಕೇಳುತ್ತಿಲ್ಲ ಎಂದು ಹೇಳಿದ್ದಾಳೆ.

ಏನಿದು ಪ್ರಕರಣ?
ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಜನಾರ್ದನ ಶರ್ಮಾ ತನ್ನ ಮಕ್ಕಳನ್ನು ನಿತ್ಯಾನಂದನ ಆಶ್ರಮಕ್ಕೆ ಬಿಟ್ಟಿದ್ದರು. ನಿತ್ಯಾನಂದನ ಮಾತಿಗೆ ಮರುಳಾಗಿ ತನ್ನ ನಾಲ್ವರು ಮಕ್ಕಳನ್ನು ಆಶ್ರಮದಲ್ಲಿ ಇಟ್ಟಿದ್ದರು. ಆಶ್ರಮದಲ್ಲಿನ ಅಕ್ರಮಗಳ ಬಗ್ಗೆ ತಿಳಿದು ಶರ್ಮಾ ಆಶ್ರಮದ ಕೆಲಸ ಬಿಟ್ಟು ಹೊರಗೆ ಬಂದಿದ್ದರು. ಬಟ್ಟು ಬರುವ ವೇಳೆ ನಾಲ್ವರು ಮಕ್ಕಳ ಪೈಕಿ 18 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಶರ್ಮಾ ಆರೋಪಿಸಿದ್ದರು. ಇವಳನ್ನು ಅಪಹರಿಸಿ, ನಮಗೆ ತಿಳಿಯದಂತೆ ಬಿಡದಿಯ ನಿತ್ಯಾನಂದ ಆಶ್ರಮದಿಂದ ಅಹಮದಾಬಾದ್ ಆಶ್ರಮಕ್ಕೆ ನನ್ನ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಜನಾರ್ದನ ಶರ್ಮಾ ಆರೋಪಿಸಿದ್ದರು. ಅಲ್ಲದೆ ಮಕ್ಕಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಿತ್ಯಾನಂದನ ವಿರುದ್ಧ ಗುಜರಾತ್ ನಲ್ಲಿ ದೂರು ದಾಖಲಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಹೋಟೆಲ್ ನಿಂದ ಎಸ್ಕೇಪ್ ಹಾಗಿದ್ದೇಕೆ ನಟಿ ಪೂಜಾ ಗಾಂಧಿ!

    ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ. ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.  ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ….

  • ಉಪಯುಕ್ತ ಮಾಹಿತಿ

    ಲಕ್ಷಾಂತರ ಪ್ಯಾನ್ ಕಾರ್ಡ್ ರದ್ದು!ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಿದೆಯಾ,ಇಲ್ಲವಾ ಚೆಕ್ ಮಾಡಲು ಈ ಲೇಖನಿ ಓದಿ…

    ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್‌ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ.

  • ಆರೋಗ್ಯ

    ಶೇ.80 ರಷ್ಟು ಕ್ಯಾನ್ಸರ್‌ಗಳಿಗೆ ಇದೆ ಕಾರಣ..!ತಿಳಿಯಲು ಈ ಲೇಖನ ಓದಿ…

    ‘ನಮ್ಮ ಮುಂದೆ ಇರುವ ಅವಘಡಗಳಿಗೆ, ಹೆಚ್ಚು ಅಪಾಯ ತರುವ ಅಂಶಗಳಿಗೆಯಾವಾಗಲೂ ನಾವೇ ಕಾರಣರಾಗಿರುತ್ತೇವೆ’.ಶೇ.80 ರಷ್ಟು ಕ್ಯಾನ್ಸರ್‌ಗಳಿಗೆ ಕಾರಣ ನಮ್ಮ ಜೀವನಶೈಲಿ (ಧೂಮಪಾನ, ಮದ್ಯಪಾನ, ಆಹಾರಾಭ್ಯಾಸ) ಭಾರತದಲ್ಲಿ ಪುರುಷರಲ್ಲಿ ಶೇ.50ರಷ್ಟು ಮತ್ತು ಮಹಿಳೆಯರಲ್ಲಿ ಶೇ.20 ರಷ್ಟು ಕ್ಯಾನ್ಸರ್‌ಗಳಿಗೆ ತಂಬಾಕು ಬಳಕೆಯೇ ಕಾರಣ.

  • ಸುದ್ದಿ

    ಕೊನೆಗೂ ಐಟಿ ಉದ್ಯೋಗಿಗಳಿಗೆ ಎದುರಾದ ಸಂಕಷ್ಟ..! ಯಾಕೆ ಗೊತ್ತಾ?

    ಐಷಾರಾಮಿ ಜೀವನ ನಡೆಸ್ತಿದ್ದ ಟೆಕ್ಕಿಗಳಿಗೆ ಇದೀಗ ಹೆಚ್​ಆರ್​ ಕಡೆಯಿಂದ ಬರ್ತಿರೋ ಪಿಂಕ್ ಸ್ಲಿಪ್ ಆತಂಕಕ್ಕೀಡು ಮಾಡಿದೆ. ಯಾವಾಗ ಯಾರಿಗೆ ಪಿಂಕ್ ಸ್ಲಿಪ್ ಬರುತ್ತೋ ಅನ್ನೋಟೆನ್ಶನ್ ಶುರುವಾಗಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲೂ ಇದೇ ಆತಂಕ ಶುರುವಾಗಿದ್ದು, ಆಯಾಗಿ ನಿದ್ದೆ ಮಾಡ್ತಿದ್ದ ಟೆಕ್ಕಿಗಳು ಈಗ ನಿದ್ದೆಗೆಡುವಂತಾಗಿದೆ. ಆರ್ಥಿಕ ಸಂಕಷ್ಟ ಅನ್ನೋದು ಐಟಿ ಕಂಪನಿಗಳಿಗೆ ತುಂಬಾ ಹೊಡೆತ ಕೊಟ್ಟಿದೆ. ಕಾಸ್ಟ್ಕಟಿಂಗ್​ ಹೆಸರಲ್ಲಿ ಕೆಲಸಕ್ಕೆ ಕತ್ತರಿ ಹಾಕ್ತಿವೆ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಯಾವುದೇ ರೀತಿಯ ಕನಿಕರ ತೋರಿಸದೆ ಪಿಂಕ್ಸ್ಲಿಪ್ ಕೈಗಿಟ್ಟು…

  • ರಾಜಕೀಯ, ಸಿನಿಮಾ

    ರಾತ್ರೋರಾತ್ರಿ ಮಂಡ್ಯದಲ್ಲಿದ್ದ ಮನೆಯನ್ನು ನಟಿ ರಮ್ಯಾ ಖಾಲಿ ಮಾಡಿದ್ದೇಕೆ ಗೊತ್ತಾ..?

    ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ, ತಮ್ಮ ರಾಜಕೀಯ ಕಾರ್ಯಕ್ಷೇತ್ರ ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನು ರಾತ್ರೋ ರಾತ್ರಿ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿದೆ.ಹಾಗೂ ಖಾಲಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ. ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ…

  • inspirational

    ಇಲ್ಲೊಬ್ಬ ವಿಚಿತ್ರ ವ್ಯಕ್ತಿ, ಇವನ ದೇಹದಲ್ಲಿ ಯಾವ ಪಾರ್ಟೂ ಇರಬೇಕಾದ ಜಾಗದಲ್ಲಿ ಇಲ್ಲ! ಆದ್ರೂ ಇವನ ಜೀವಕ್ಕೆ ತೊಂದರೆ ಇಲ್ಲ,.!

    ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್‌ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್‌ಪುರ ಆಸ್ಪತ್ರೆಗೆ ತೆರಳಿದ್ದರು.  ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾ‌ನಿಂಗ್‌ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ. ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್‌’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್‌ ಇನ್‌ವರ್ಸಸ್‌’ ಎಂದು ಕರೆಯಲಾಗುವ ಇದೊಂದು…