ಸುದ್ದಿ

ನ. 25ರ ಕಡೆಯ ಕಾರ್ತೀಕ ಸೋಮರವರದ ಕಡಲೆಕಾಯಿ ಪರಿಷೆಗೆ ವಿನೂತನ ಕಾರ್ಯಕ್ರಮಗಳೊಂದಿಗೆ ಸಜ್ಜಾಗುತ್ತಿರುವ ಬೆಂಗಳೂರಿನ ಬಸವನಗುಡಿ…!

36

ಪ್ರತಿ ವರ್ಷದಂತೆ ಈ ಬಾರಿಯೂ ಹೊಸತನದೊಂದಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಗಾಗಿ ಬಸವನಗುಡಿ ಸಜ್ಜಾಗುತ್ತಿದೆ. ಕಡೇ ಕಾರ್ತೀಕ ಸೋಮವಾರ(ನ.25)ದಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಪರಿಚಯಿಸಲು ಭಿನ್ನರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ.

ಸಾಮಾನ್ಯವಾಗಿ ಪರಿಷೆಗೆ ರಾಮನಗರ, ಮಾಗಡಿ, ಕನಕಪುರ,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಕಡ್ಲೆಕಾಯಿ ಬರುತ್ತದೆ. ಈ ಬಾರಿ ಈ ಭಾಗಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ ಸಾಧ್ಯತೆಯಿದೆ.

ಚುನಾವಣೆ ನೀತಿ ಸಂಹಿತೆಯೇನಾದರೂ ಅಡ್ಡಿಯಾಗುವುದೇ ಎಂಬ ಬಗ್ಗೆ ಪ್ರಶ್ನೆ ಏಳುತ್ತಿದೆ. ಆದರೆ ಆಯೋಜಕರು, ಶತಮಾನಗಳಿಂದಲೂ ನಡೆಯುತ್ತಿರುವ ಸಾಂಪ್ರದಾಯಿಕ ಆಚರಣೆಯಾಗಿರುವುದರಿಂದ ಇದಕ್ಕೆ ಯಾವುದೇ ಅಡ್ಡಿ,ಆತಂಕಗಳು ಎದುರಾಗುವುದಿಲ್ಲ ಎನ್ನುತ್ತಾರೆ.

ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಹಾಗೂ ಬಸವನಿಗೆ ಕಡಲೆ ಕಾಯಿಗಳ ಅಭಿಷೇಕ ಇತ್ಯಾದಿಗಳು ನಡೆಯಲಿವೆ. ಈ ಬಾರಿಯ ಪರಿಷೆಯಲ್ಲಿ ಕನಿಷ್ಠ ಎರಡು ಸಾವಿರ ಮಳಿಗೆಗಳು ತೆರೆಯಲಿವೆ. ಇದಲ್ಲದೆ ಪೀಪಿ ಮತ್ತಿತರ ಸಾಮಗ್ರಿಗಳನ್ನು ಮಾರುವ ಸಂಚಾರಿ ಮಾರಾಟಗಾರರು ನೂರಾರು ಸಂಖ್ಯೆಯಲ್ಲಿರುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಬಳಸುತ್ತೀರಾ.? ಹಾಗಾದರೆ ಇದನೊಮ್ಮೆ ಇಗಲೇ ತಿಳಿದುಕೊಳ್ಳಿ.!

    ನಿಮ್ಮ ಕುಟುಂಬದ ಸದಸ್ಯರ ಸುರಕ್ಷತೆಯ ಬಗ್ಗೆ ಯೋಚಿಸಿದ್ದೀರಾ ? ನಿಮ್ಮ ಮನೆಯಲ್ಲಿ , ನಿಮ್ಮ ಅಮ್ಮ , ಅಕ್ಕ, ಹೆಂಡತಿ ಅಡುಗೆಮನೆಯಲ್ಲಿ ವರ್ಷದ 365 ದಿನಗಳು ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ ಲೀಕ್ ನಿಂದ ಆಗುವ ಭಾರಿ ದುರಂತವನ್ನು ನಾವುಗಳು ಪೇಪರಿನಲ್ಲಿ, ನ್ಯೂಸ್ ಚಾನೆಲ್ಸ್ ಗಳಲ್ಲಿ ನೋಡ್ತಾ ಇರುತೇವೆ , ಆದರೆ ಗ್ಯಾಸ್ ಲೀಕ್ , ಅಥವಾ ಸ್ಪೋಟದಿಂದ ಆಗುವ ಅನಾಹುತ ಭಾರಿ ದೊಡ್ಡದು, ಅದರಿಂದ ನಮ್ಮ ಕುಟುಂಭದ ರಕ್ಷಣೆ ಕೊಡ ನಮ್ಮ ದೊಡ್ಡ…

  • ಮನರಂಜನೆ

    ಬಿಗ್ ಬಾಸ್ ಕಿರೀಟ ಧರಿಸಿದ ಆಧುನಿಕ ರೈತ..!ಬಿಗ್ ಬಾಸ್ ನಲ್ಲಿ ಅನ್ಯಾಯ ಆಗಿದೆ ಎಂದ ವೀಕ್ಷಕರು…

    ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಮಾಡರ್ನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನ ಪಡೆದಿದ್ದಾರೆ. ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ…

  • ಸೌಂದರ್ಯ

    ಭಾರತದಲ್ಲಿ ಹಲವು ಸ್ಥಳಗಳಿವೆ. ಅವು ಸ್ವರ್ಗವನ್ನು ನೆನಪಿಗೆ ತರುಸುತ್ತದೆ ಗೊತ್ತಾ..? ತಿಳಿಯಲು ಇದನ್ನು ಓದಿ..

    ಭಾರತದಲ್ಲಿ ಹಲವು ಸ್ಥಳಗಳಿವೆ. ಅವು ಸ್ವರ್ಗವನ್ನು ನೆನಪಿಗೆ ತರುಸುತ್ತದೆ. ಇದು ಪ್ರತಿಭಾನ್ವಿತ ಜನರು ಮತ್ತು ಈ ರೀತಿಯ ಸುಂದರವಾದ ಸ್ಥಳಗಳನ್ನು ಹೊಂದಿರುವ ದೇಶವಾಗಿದೆ.

  • ಸುದ್ದಿ

    ಹೋಟೆಲ್‍ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್.

    ಹೋಟೆಲ್‍ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಹೋಟೆಲ್‍ನ್ನು ಸೀಲ್‍ಡೌನ್ ಮಾಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಹೋಟೆಲ್ ಮಾಲೀಕನ ಮಗ ಗ್ರಾಹಕರಿಗೆ ನೀಡುವ ಆಹಾರವನ್ನು ಎಂಜಲು ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹೋಟೆಲ್ ಬಾಗಿಲು ಹಾಕಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ. ಓರ್ವ ವ್ಯಕ್ತಿ…

  • ಸುದ್ದಿ

    ಭಾರೀ ಮಳೆ ಗುಡುಗು, ಸಿಡಿಲು ಬಡಿದು ಪ್ರೇಮ ಸೌಧ ತಾಜ್ ಮಹಲ್‍ಗೆ ಹಾನಿ.

    ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ವರುಣ ದೇವ ವಿಜೃಂಭಿಸಿದ ಕಾರಣ ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ…

  • ಉಪಯುಕ್ತ ಮಾಹಿತಿ, ಸುದ್ದಿ

    ಸಿಗರೇಟ್ ಸೇದಿ ಬಿಸಾಕಿದ ಪೀಸ್ ಗಳಿಂದ ಕೋಟಿ ಕೋಟಿ ಗಳಿಸಿದ ಯುವಕರು, ನೀವು ಕೂಡ ಮಾಡಬಹುದು.

    ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ ಕಮ್ಮಿ ಇಲ್ಲ, ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಸಿಗರೇಟ್ ಸೇದುತ್ತಾರೆ, ಇನ್ನು ಹಿಂದಿನ ಕಾಲದಲ್ಲಿ ಕೇವಲ ವಯಸ್ಸಾದವರು ಮಾತ್ರ ಸಿಗರ್ಟ್ ಸೇದುತ್ತಿದ್ದರು ಆದರೆ ಈಗ ಶಾಲೆಗೆ ಹೋಗುವ ಮಕ್ಕಳು ಕೂಡ ಸಿಗರೇಟ್ ಗಳನ್ನ ಸೇದುತ್ತಿದ್ದಾರೆ ಮತ್ತು ಅದನ್ನ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 31 ಲಕ್ಷ ಸಿಗರೇಟ್ ಸೇದುತ್ತಿದ್ದಾರೆ ಜನರು, ಇನ್ನು ಜನರು ಸಿಗರೇಟ್ ಸೇದಿದ ಮೇಲೆ ಅದರ ತುದಿಯನ್ನ ಎಸೆಯುತ್ತಾರೆ ಮತ್ತು ಇನ್ನು ಕೆಲವರು ಅದನ್ನ…