inspirational, ಸುದ್ದಿ

ನಿವೃತ್ತಿ ಬಳಿಕ ಮಾಡೋದೇನು? ಎಂಬ ಪ್ರಶ್ನೆಗೆ ಕೊಹ್ಲಿ ಕೊಟ್ಟ ಉತ್ತರ ತಿಳಿದರೆ ಶಾಕ್ ಆಗುತ್ತೀರಾ…!

43

ಪಂಜಾಬಿ ಕುಟುಂಬದಲ್ಲಿ ಜನಿಸಿದ ವಿರಾಟ್‌ ಕೊಹ್ಲಿ, ಹುಟ್ಟಿದ್ದು-ಬೆಳೆದದ್ದು ಎಲ್ಲವೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ. ಅಂದಹಾಗೆ ಕೊಹ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ಭಾರಿ ತಿಂಡಿ ಪೋತರಾಗಿದ್ದರು. ಬಾಯಲ್ಲಿ ನೀರು ತರುವಂತಹ ರುಚಿಕರ ತಿಂಡಿ ತಿನಿಸುಗಳೆಂದರೆ ಕೊಹ್ಲಿಗೆ ಅಚ್ಚುಮೆಚ್ಚು.

ಇತ್ತೀಚೆಗೆ 31ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿರಾಟ್‌ ಕೊಹ್ಲಿ ಇನ್ನು ಹೆಚ್ಚೆಂದರೆ 5-6 ವರ್ಷ ಟೀಮ್‌ ಇಂಡಿಯಾದಲ್ಲಿ ಆಡಬಹುದು. ಈ ಅವಧಿಯಲ್ಲಿ ಅವರು ಸಾಧಿಸುವುದು ಬಹಳಷ್ಟಿದೆ. ಆದರೆ, ಇವೆಲ್ಲವೂ ಮುಗಿದನಂತರ ಅವರು ಮಾಡುವುದಾದದರೂ ಏನು? ಕೊಹ್ಲಿ ನಿವೃತ್ತಿ ನಂತರದ ದಿನಗಳ ಕುರಿತಾಗಿ ಏನಾದರೂ ಆಲೋಚಿಸಿದ್ದಾರ? ಈ ಪ್ರಶಸ್ನೆಗಳಿಗೆ ಖುದ್ದಾಗಿ ಕೊಹ್ಲಿಯೇ ಉತ್ತರ ನೀಡಿದ್ದಾರೆ.

ಎನ್‌ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿರಾಟ್‌, ಹೊಸ ಹೊಸ ಆಹಾರ ಪದಾರ್ಥಗಳನ್ನು ನಿನ್ನುವ ಹವ್ಯಾಸ ತಮಗಿರುವುದಾಗಿ ಹೇಳಿಕೊಂಡಿದ್ದಾರೆ. “ಬಾಲ್ಯದಿಂದಲೇ ನಾನು ತಿಂಡಿಪೋತ. ಹೊಸ ತಿನಿಸುಗಳನ್ನು ತಿನ್ನುವುದು ನನ್ನ ಹವ್ಯಾಸ. ಹಿಂದೆಲ್ಲಾ ಬಹಳಷ್ಟು ಜಂಕ್‌ ಫುಡ್‌ ತಿನ್ನುತ್ತಿದ್ದೆ. ಅತ್ಯುತ್ತಮ ಆಹಾರ ಪದಾರ್ಥಗಳು ನನಗಿಷ್ಟ,”ಎಂದು ಹೇಳಿದ್ದಾರೆ.

“ನನಗೆ ಅಡುಗೆ ಮಾಡಲು ಬರುವುದಿಲ್ಲ. ಆದರೆ ಅದರ ರುಚಿ ಗುರುತಿಸಬಲ್ಲ. ಆಹಾರ ಪದಾರ್ಥ ಎಷ್ಟು ಅದ್ಭುತವಾಗಿ ತಯಾರಾಗಿದೆ ಎಂಬುದನ್ನು ತಿಳಿಸಬಲ್ಲೆ. ಅಂದಹಾಗೆ ನನ್ನ ನಿವೃತ್ತಿ ಬಳಿಕ ಖಂಡಿತವಾಗಿಯೂ ಅಡುಗೆ ಮಾಡುವುದು ನನ್ನಆಸಕ್ತಿಯ ಮೊದಲ ವಿಷಯವಾಗಿರಲಿದೆ,” ಎಂದು ತಮ್ಮ ನಿವೃತ್ತಿ ನಂತರದ ಯೋಜನೆ ಕುರಿತಾಗಿ ವಿರಾಟ್‌ ಬಾಯ್ಬಿಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ