ಸುದ್ದಿ

ಸರ್ಕಾರಿ ಬಸ್‌ಗಳಲ್ಲಿ ಇಂದಿನಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸ್ಟಾರ್ಟ್ …!

56

‘ಭಾಯ್ ದೂಜ್’ ಹಬ್ಬದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಮಹಿಳೆಯರಿಗೆ ಉಡುಗೊರೆ ನೀಡಿದ್ದಾರೆ. ಇಂದಿನಿಂದ ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ದೆಹಲಿಯಲ್ಲಿ ಸಂಚರಿಸುವ 55 ಸಾವಿರ ಸರ್ಕಾರಿ ಬಸ್‌(ಡಿಟಿಸಿ)ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಅವರಿಗೆ ಪಿಂಕ್ ಟಿಕೆಟ್ ನೀಡಲಾಗುತ್ತಿದೆ.

ಅದರಲ್ಲಿ ಭಾಯ್ ದೂಜ್ ಪ್ರಯುಕ್ತ ನನ್ನ ಸಹೋದರಿಯರಿಗೆ ಈ ಅಣ್ಣನಿಂದ ಪ್ರೀತಿಯ ಉಡುಗೊರೆ ಎಂದು ಬರೆಯಲಾಗಿದೆ.ಮಹಿಳೆ ಬಸ್ಸಿನಲ್ಲಿ ಪಿಂಕ್ ಟಿಕಟ್ ಹಿಡಿದು ಕುಳಿತಿರುವ ಫೋಟೊವನ್ನು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರ ಭದ್ರತೆಗಾಗಿ 13 ಸಾವಿರ ಬಸ್‌ ಮಾರ್ಷಲ್‌ಗಳನ್ನು ನೇಮಿಸಲಾಗಿದೆ.

ಈ ಹಿಂದೆಯೇ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸುವ ಕುರಿತು ಭರವಸೆ ನೀಡಿದ್ದರು. ಆಗಸ್ಟ್ 29ರಂದು ದೆಹಲಿ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮತಿಯೂ ದೊರೆತಿತ್ತು. ಸಾರಿಗೆ ಇಲಾಖೆಗೆ 479 ಕೋಟಿ ರೂ ನೀಡಲು ಸಂಪುಟ ಒಪ್ಪಿಗೆ ನೀಡಿತ್ತು.

ದೆಹಲಿ ಸಂಪುಟವು ಅಕ್ಟೋಬರ್29ರಿಂದ ದೆಹಲಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಒಪ್ಪಿಗೆ ಸೂಚಿಸಿದೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಅರವಿಂದ್ ಕೇಜ್ರಿವಾಲ್ ಈ ನೂತನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ಕೇವಲ ಬಸ್‌ಗಳಷ್ಟೇ ಅಲ್ಲದೆ ಮೆಟ್ರೋದಲ್ಲೂ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ