ಸುದ್ದಿ

ಹೊಟ್ಟೆಯ ಬೊಜ್ಜು ಕರಗಿಸುವಂತಹ ಸುಲಭ ಉಪಾಯಗಳು,.ಇದನ್ನೊಮ್ಮೆ ಅನುಸರಿಸಿ ನೋಡಿ,.!

92

ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಪದ್ಧತಿ, ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯಲ್ಲಿ ಕಡಿಮೆ ದೇಹದಂಡನೆ ಹಾಗೂ ತಪ್ಪಾದ ಆಹಾರಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದುದು ಹೊಟ್ಟೆಯ ಬೊಜ್ಜು. ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕಾಣಬಹುದು. ಸಬ್​ಕ್ಯುಟೆನಿಯಸ್ ಫ್ಯಾಟ್ – ಇದು ಸಾಮಾನ್ಯವಾಗಿ ಕೈ-ಕಾಲುಗಳ ಮೇಲ್ಭಾಗದಲ್ಲಿರುವ ಕೊಬ್ಬಿನಂಶ.

ಇದು ಹೊಟ್ಟೆಯ ಚರ್ಮದ ಒಳಭಾಗದಲ್ಲಿ ಬಂದಲ್ಲಿ ಅಷ್ಟೆಲ್ಲ ತೊಂದರೆ ಆಗುವುದಿಲ್ಲ. ಶೇ. 80ರಷ್ಟು ಜನರಲ್ಲಿ ಇದಕ್ಕಿಂತ ಜಾಸ್ತಿ ಹೊಟ್ಟೆಯ ಬೊಜ್ಜಿಗೆ ಮುಖ್ಯ ಕಾರಣ ವಿಸರಲ್ ಫ್ಯಾಟ್. ಇದು ಹೊಟ್ಟೆಯ ಅಂಗಗಳು, ಲಿವರ್, ಜೀರ್ಣಾಂಗವ್ಯೂಹ, ಕರುಳು ಹಾಗೂ ಅದರ ಸುತ್ತ ಹಾಗೂ ಒಳಭಾಗದಲ್ಲೂ ಸಂಗ್ರಹವಾಗಿರುವ ಕೊಬ್ಬು. ಇದನ್ನು ತಿಳಿದುಕೊಳ್ಳಲು ಸರಳ ಪರೀಕ್ಷೆ ಎಂದರೆ ಸೊಂಟದ ಸುತ್ತಳತೆಯ ಪರೀಕ್ಷೆ. ಗಂಡಸರಲ್ಲಿ ಸಾಮಾನ್ಯವಾಗಿ 40 ಇಂಚಿಗಿಂತ ಜಾಸ್ತಿ ಹೊಟ್ಟೆಯ ಸುತ್ತಳತೆ ಇದ್ದಲ್ಲಿ ಇವರಿಗೆ ವಿಸರಲ್ ಫ್ಯಾಟ್ ಇದೆ ಎನ್ನಬಹುದು. ಇನ್ನು ಹೆಂಗಸರಲ್ಲಿ ಹೊಟ್ಟೆಯ ಸುತ್ತಳತೆ 30 ಇಂಚಿಗಿಂತ ಹೆಚ್ಚಿದ್ದರೆ ಹೊಟ್ಟೆಯ ಒಳ ಅಂಗಗಳಲ್ಲಿರುವ ಕೊಬ್ಬಿನ ಮಟ್ಟ ಹೆಚ್ಚಿದೆ ಎನ್ನಬಹುದು. ಇದನ್ನು ಕಡಿಮೆ ಮಾಡುವ ಪರಿಹಾರಗಳನ್ನು ತಿಳಿಯೋಣ.

  • ಒಂದು ಲೋಟ ನೀರಿಗೆ ಒಂದು ಚಮಚ ಆಪಲ್​ಸಿಡರ್ ವಿನೆಗರ್ ಹಾಕಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟದ ಮೊದಲು ಮೂರು ತಿಂಗಳ ಕಾಲ ಕುಡಿಯಬೇಕು.
  • ಒಂದು ಕಪ್ ಮೊಸರಿಗೆ ಕಾಮಕಸ್ತೂರಿ ಬೀಜ ಹಾಕಿ ಪ್ರತಿನಿತ್ಯ ಸೇವಿಸಬೇಕು.
  • 250 ಮಿ.ಲೀ. ನೀರನ್ನು ಕುದಿಸಬೇಕು. ನಂತರ ಸ್ಟವ್​ನ್ನು ಆಪ್ ಮಾಡಿ ಪಾತ್ರೆಯನ್ನು ಕೆಳಗಡೆ ಇಳಿಸಿ ಗ್ರೀನ್ ಟೀ ಎಲೆ ಹಾಕಬೇಕು. 3 ನಿಮಿಷದ ನಂತರ ಅದಕ್ಕೆ ಲಿಂಬು ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದನ್ನು ದಿನಕ್ಕೆ ಎರಡು ಬಾರಿ ಬೆಳಗ್ಗೆ, ಮಧ್ಯಾಹ್ನ ಆಹಾರದ ಮೊದಲು ಸೇವಿಸಬೇಕು.
  • ಪ್ರತಿನಿತ್ಯ ಆಹಾರದ ಮೊದಲು 3 ಬಾರಿ 2 ಚಮಚ ವರ್ಜಿನ್ ಕೊಕೊನಟ್ ಆಯಿಲ್ ಸೇವಿಸಬೇಕು.
  • ಆಹಾರದಲ್ಲಿ ಪ್ರೋಟೀನ್ ಅಂಶ, ಬೇಯಿಸಿದ ಮೊಳಕೆಕಾಳಿನ ಸೇವನೆ ಹೆಚ್ಚಿಸಬೇಕು. ಪನ್ನೀರ್ ಪ್ರೋಟೀನ್​ನ ಆಗರ. ಪ್ರೋಟೀನ್ ಪುಡಿ, ಬಾಳೆಹಣ್ಣು, ಹಾಲಿನ ಕೆನೆ, ಬಾದಾಮಿ ಇವನ್ನು ಹಾಕಿ ಮಾಡಿದ ಮಿಲ್ಕ್ ಶೇಕ್ ಆಹಾರದ ಮೊದಲು ಕುಡಿಯುವುದು ಅನುಕೂಲ.ಒಂದು ಲೋಟ ಬೆಚ್ಚಗಿನ ನೀರಿಗೆ ಲಿಂಬೆರಸ, ಜೇನುತುಪ್ಪ ಬೆರೆಸಿ ಒಂದು ಚಮಚ ಕಾಳುಮೆಣಸಿನ ಪುಡಿ, ಒಣ ಶುಂಠಿ, ಕಾಮಕಸ್ತೂರಿ ಬೀಜ, ಪುದಿನ ಎಲೆ ಹಾಕಿ ಸೇವಿಸಬೇಕು.
  • ಬಾಳೆದಿಂಡಿನ ರಸದ ಜೊತೆ ಜ್ಯೇಷ್ಠಮಧುವಿನ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ್ಝ ಆಹಾರದಲ್ಲಿ ಸೊಪ್ಪು, ನಟ್ಸ್, ಬೆಣ್ಣೆಹಣ್ಣು, ತೆಂಗಿನ ತುರಿ, ನಾರಿನಂಶವಿರುವ ಪದಾರ್ಥ, ಮಾಂಸಹಾರಿಗಳಾಗಿದ್ದಲ್ಲಿ ಬೇಯಿಸಿದ ಮೊಟ್ಟೆ ಮುಂತಾದ ಪದಾರ್ಥ ಹೆಚ್ಚು ಸೇವಿಸಬಹುದು.
  • ಪ್ರತಿನಿತ್ಯ ಕಾರ್ಡಿಯೋ ವ್ಯಾಯಾಮ ಮಾಡುವುದು ಒಳ್ಳೆಯದು. ಆಹಾರದಲ್ಲಿ ಕಾಬೋಹೈಡ್ರೇಟ್ ಅಂಶ ಕಡಿಮೆ ಮಾಡಿ ಒಳ್ಳೆಯ ಕೊಬ್ಬಿನ ಅಂಶ ಹೆಚ್ಚಿಸುವುದು ಮುಖ್ಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ರಾಕಿಂಗ್ ಸ್ಟಾರ್ ಮತ್ತು ಆಕ್ಷನ್ ಪ್ರಿನ್ಸ್ ಗೇ ಖಡಕ್ ವಾರ್ನಿಂಗ್ ಕೊಟ್ಟಿದ್ದ ರೆಬೆಲ್ ಸ್ಟಾರ್!ಏನು ಗೊತ್ತಾ?

    ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್‍ವುಡ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು.ಯಶ್ ‘ಕೆಜಿಎಫ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆಗ ಅಂಬರೀಶ್ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಶ್ ವಾರ್ನ್ ಮಾಡಿದ್ದರು. ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು. ಆದರೆ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಶ್‍ಗೆ ಬೇಜಾರಾಗಿ ಹೋದಲ್ಲಿ ಬಂದಲ್ಲಿ ಯಶ್‍ಗೆ…

  • karnataka

    ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

    ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.

  • ಸುದ್ದಿ

    ಹಿರಿಯ ಸಾಹಿತಿ ,ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಡ್ ಇನ್ನಿಲ್ಲ….

    ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ [81]ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿ ಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು…

  • ಸುದ್ದಿ

    ವಿಶೇಷ ರೀತಿಯಲ್ಲಿ ಗಣೇಶನ ವಿಸರ್ಜನೆ ಮಾಡಿದ ಕೋಲಾರದ ಜನ..ಕಣ್ಮನ ಸೆಳೆದ ಆ ಮೆರವಣಿಗೆ ಹೇಗಿತ್ತು ಗೊತ್ತ.?

    ನಗರದ ಪ್ರವಾಸಿ ಮಂದಿರದ ಮುಂಭಾಗ ಅಖಂಡ ಭಾರತ ವಿನಾಯಕ ಮಹಾಸಭಾ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗಳನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ಬೃಹತ್ ವೇದಿಕೆಯಲ್ಲಿ ವೆಂಕಟರಮಣಸ್ವಾಮಿ ರೂಪಿ ಸಿದ್ಧಿ-ಬುದ್ಧಿ ಸಮೇತ ಗಣಪನ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಮಹಾಸಭಾ ಒಂದು ವಾರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಭಾನುವಾರ ಮಧ್ಯಾಹ್ನ ಬೃಹತ್ ಕೇಸರಿ ಧ್ವಜ ಹಾರಾಡಿಸುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.ಕೇರಳದ ಚಂಡೆ ವಾದನ, ಷಣ್ಮುಖ, ಉಗ್ರನರಸಿಂಹ, ಕಾಳಿ, ವಿಷ್ಣು, ಈಶ್ವರ, ಶ್ರೀಕೃಷ್ಣ, ತಿರುಪತಿ ತಿರುಮಲ ವೆಂಕಟೇಶ್ವರ ಸೇರಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ..ಈ ರಾಶಿಗಳಿಗೆ ವಿಪರೀತ ಧನಲಾಭ..ನಿಮ್ಮ ರಾಶಿಯೂ ಇದೆಯಾ ನೋಡ..

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಏಪ್ರಿಲ್, 2019) ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ…

  • ಜ್ಯೋತಿಷ್ಯ

    ಮಕರ ಸಂಕ್ರಾಂತಿ ಹಬ್ಬದ ನಂತರ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!

    ಹೊಸ ವರ್ಷ ಶುರುವಾಗಿದೆ. ಹೊಸ ವರ್ಷ ಒಳ್ಳೆಯದನ್ನು ನೀಡಲಿ ಎಂದು ಎಲ್ಲರೂ ಬಯಸ್ತಾರೆ. ಹೊಸ ವರ್ಷ ಕೆಲವರ ಅದೃಷ್ಟ ಬದಲಿಸಿದ್ರೆ ಮತ್ತೆ ಕೆಲವರ ದುರಾದೃಷ್ಟಕ್ಕೆ ಕಾರಣವಾಗಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಹೊಸ ವರ್ಷ ಯಾವ ರಾಶಿಗೆ ಯಾವ ಫಲ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಮಕರ ಸಂಕ್ರಾಂತಿ ನಂತ್ರ ವೃಶ್ಚಿಕ ರಾಶಿಯವರ ಅದೃಷ್ಟ ಬದಲಾಗಲಿದ್ದು ಏನೆಲ್ಲಾ ಬದಲಾವಣೆಗಳು ಆಗಲಿದೆ ನೋಡಿ… ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ಬದಲಾಗ್ತಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಅರ್ಧಕ್ಕೆ ನಿಂತ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಈ…