ಸುದ್ದಿ

ಮರದಲ್ಲೇ ಕುರ್ಚಿ ಬೆಳೆಯುವ ಪದ್ಧತಿ ಬಗ್ಗೆ ನಿಮಗೆಷ್ಟು ಗೊತ್ತು.?? ಇದರಿಂದಾಗುವ ಲಾಭಗಳೇನು ಗೊತ್ತೇ….

118

ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನ ಸೆಳೆದಿದೆ.

ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ ಕುರ್ಚಿ ಗಿಡಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿದೆ. ಗಿಡಗಳ ಮೂಲಕ ಇಲ್ಲಿ 250 ಚೇರ್‍ಗಳು, 100 ಲ್ಯಾಂಪ್‍ಗಳು ಮತ್ತು 50 ಟೇಬಲ್‍ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.ಕುರ್ಚಿ ಗಿಡ ಬೆಳೆಯಲು ಗೋವಿನ್‍ಗೆ ಬಾಲ್ಯವೇ ಪ್ರೇರಣೆ. ಬೋನ್ಸಾಯಿ ಗಿಡಗಳು ಬೆಳೆದು ಕುರ್ಚಿಯಂತೆ ಕಾಣುತ್ತಿತ್ತು. ಅಲ್ಲದೇ ಗೋವಿನ್‍ಗೆ ಬೆನ್ನುಲುಬು ಸಮಸ್ಯೆ ಇತ್ತು. ಬಾಲ್ಯದಲ್ಲಿ ಅವರ ಬೆನ್ನು ಮೂಳೆ ಸೊಟ್ಟವಾಗಿತ್ತು. ಅದನ್ನು ಸರಿಪಡಿಸಲು ಹಲವು ವರ್ಷಗಳ ಕಾಲ ಮೆಟಲ್ ಫ್ರೇಮ್ ಧರಿಸಿದ್ದರು. ಕುರ್ಚಿ ಗಿಡ ಬೆಳೆಯಲು ಗೋವಿನ್ 2006ರಲ್ಲಿ ಯತ್ನಿಸಿದರು. ಇಂಗ್ಲೆಂಡ್‍ನ ಪೀಕ್ ಜಿಲ್ಲೆಯಲ್ಲಿ ಎರಡು ತುಂಡು ನೆಲದಲ್ಲಿ ಅವರು ಮರದ ಕುರ್ಚಿಗಳನ್ನು ಸ್ವಾಭಾವಿಕವಾಗಿ ಬೆಳೆಸಲು ಮುಂದಾದರು.

2012ರಲ್ಲಿ ತಮ್ಮ ಯೋಜನೆಯನ್ನು ವಿಸ್ತರಿಸಿದರು. ಅದೇ ವರ್ಷ ಅಲೈಸ್ ಜೊತೆ ಗೋವಿನ್ ವಿವಾಹವಾಯಿತು. ದೊಡ್ಡ ಮಟ್ಟದಲ್ಲಿ ಮರದ ಕುರ್ಚಿಗಳನ್ನು ಬೆಳೆಯಬೇಕೆಂಬ ಅಭಿಲಾಷೆ ದುರಂತದಲ್ಲಿ ಅಂತ್ಯವಾಯಿತು. ಈ ಗಿಡಗಳನ್ನು ಹಸುಗಳು ಮತ್ತು ಮೊಲಗಳು ತಿಂದು ಹಾಕಿದವು. ಇದರಿಂದ ದೃತಿಗಡೆದ ದಂಪತಿ ಬೆಳವಣಿಗೆಯನ್ನು ಕುಂಠಿತ ಗೊಳಿಸದೆ ಮರವನ್ನು ಕುರ್ಚಿ ಆಕಾರದಲ್ಲಿ ಬೆಳೆಸಲು ಪರಿಣಾಮಕಾರಿ ಮಾರ್ಗ ಕಂಡುಕೊಂಡರು.

ಬೆಳೆಯುತ್ತಿರುವ ಕಾಂಡಗಳನ್ನು ಸರಿಯಾದ ದಿಕ್ಕಿನಲ್ಲಿ ಹಬ್ಬಿ ಕುರ್ಚಿಯ ಆಕಾರ ಪಡೆಯುವಂತೆ ಮಾಡಿದರು. ರೆಂಬೆಗಳು ಒಂದಕ್ಕೊಂದು ಬೆಸೆದುಕೊಳ್ಳಲು ಕಸಿ ವಿಧಾನ ಅನುಸರಿಸಿದರು. ಇವರ ಶ್ರಮ ಫಲ ನೀಡಿತು. ಕುರ್ಚಿಗಳು 12,480 ಡಾಲರ್, ಲ್ಯಾಂಪ್‍ಗಳು 2,870 ಡಾಲರ್ ಹಾಗೂ ಮೇಜುಗಳು 15,600 ಡಾಲರ್ ಮೌಲ್ಯ ಹೊಂದಿವೆ.ತೋಟದಲ್ಲೇ ಬೆಳೆಯುವ ಈ ಗಿಡ ಪೂರ್ಣಪ್ರಮಾಣದಲ್ಲಿ ಕುರ್ಚಿಯ ರೂಪ ಪಡೆಯಲು ಆರರಿಂದ ಒಂಭತ್ತು ವರ್ಷಗಳು ಬೇಕು. ಅಲ್ಲದೇ ಇದು ಸಂಪೂರ್ಣ ಒಣಗಲು ತೆಗೆದುಕೊಳ್ಳುವ ಅವಧಿ ಒಂದು ವರ್ಷ. 2030ರ ವೇಳೆಗೆ ಈ ಫರ್ನಿಚರ್ ಫಾರಂನನ್ನು ಮತ್ತಷ್ಟು ವಿಸ್ತರಿಸಲು ದಂಪತಿ ಬಯಸಿದ್ದಾರೆ. ಇದು ನಿವೃತ್ತರಾಗಿ ವಿಶ್ರಾಂತಿ ಪಡೆಯುವ ಮಂದಿಗೆ ಸೂಕ್ತವಾದ ಕುರ್ಚಿ ಎನಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಎಲ್ಐಸಿ ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ…!ಇದನ್ನೊಮ್ಮೆ ಓದಿ..,

    ಭಾರತೀಯ ಜೀವ ವಿಮಾ ನಿಗಮ ಪಾಲಿಸಿ ಹೂಡಿಕೆದಾರರ  ಹಣ ಭದ್ರವಾಗಿದೆ.ಸುಳ್ಳು ವದಂತಿಗಳನ್ನು  ನಂಬಬೇಡಿ ಎಂದು ನಿಗಮದಿಂದ ಸ್ಪಷ್ಟನೆ ನೀಡಲಾಗಿದೆ. ಭಾರತೀಯ ವಿಜಯ ವಿಮಾ ನಿಗಮ(ಎಲ್ಐಸಿ) ನಷ್ಟದಲ್ಲಿದೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದರ  ಕುರಿತಾಗಿ ಸ್ಪಷ್ಟನೆ ನೀಡಿರುವ ಎಲ್ಐಸಿ ಇದು ಸಂಪೂರ್ಣ ಸುಳ್ಳು ಎಂದು ಹೇಳಿಕೆ ನೀಡಿದೆ. ಎಲ್ಐಸಿ ಭಾರಿ ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದೆ.ಪಾಲಿಸಿದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಂಸ್ಥೆಯ ಆರ್ಥಿಕ ಶಕ್ತಿ ಉತ್ತಮವಾಗಿದೆ ಎಂದುಹೇಳಲಾಗಿದೆ,ಸುಳ್ಳು…

  • ಆಧ್ಯಾತ್ಮ

    ಶಿವನ ಆಭರಣಗಳಲ್ಲಿ ಅಡಗಿರುವ ಸತ್ಯವೇನು ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

  • ಗ್ಯಾಜೆಟ್

    ಗ್ರಾಹಕರಿಗೊಂದು ಖುಷಿಯ ಸುದ್ದಿ ‘ಜಿಯೋ 4ಜಿ ಫೀಚರ್ ಫೋನ್ ‘ ..!ತಿಳಿಯಲು ಈ ಲೇಖನ ಓದಿ ..

    ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.

  • ಜ್ಯೋತಿಷ್ಯ

    ರಾಘವೇಂದ್ರ ಸ್ವಾಮಿಯ ಕೃಪೆಯಿಂದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಮಾರ್ಚ್, 2019) ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು…

  • ಹಣ

    ಸ್ಲಮ್ ಮಕ್ಕಳಿಗೆ ಆದ ಅವಮಾನ…! ತಿಳಿಯಲು ಈ ಲೇಖನ ಓದಿ…

    ಮೆರಿನಾ ಗಾರ್ಡನ್‌ ದಕ್ಷಿಣ ಮುಂಬಯಿಯ ಶ್ರೀಮಂತರ ದುರಹಂಕಾರದ ವರ್ತನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಗಾರ್ಡನ್‌ಗೆ ಸ್ಲಮ್‌ ಮಕ್ಕಳು ಆಡಲು ಬರಬಾರದೆಂದು ಕಫ್ ಪರೇಡ್ ಪ್ರದೇಶದ ನಿವಾಸಿಗಳು ಪೊಲೀಸ್‌ ಕಂಪ್ಲೇಂಟ್‌ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

  • ದೇಶ-ವಿದೇಶ

    “ಭಾರತೀಯ ಸೇನೆ”ಗೆ ಶೀಘ್ರವೇ ಬರಲಿದೆ “ಸ್ವದೇಶಿ ಬುಲೆಟ್‌ ಪ್ರೂಫ್‌ ಜಾಕೆಟ್‌”………

    ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್‌ ಇನ್‌ ಇಂಡಿಯಾ’ ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ