ಸುದ್ದಿ

ಕಿಚ್ಚನ ನಳಪಾಕ ಸೌಟು ಹಿಡಿದು ಮೊಟ್ಟೆ ದೋಸೆ ಮಾಡಿದ ಸುದೀಪ್…!

26

‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ಟಿನಲ್ಲಿ ಕಿಚ್ಚ ಸುದೀಪ್ ರುಚಿ ರುಚಿ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದ್ದಾರೆ.

ಹೌದು, ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ ಹಲವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅ. 2 ಅಂದರೆ ನಾಳೆಯೇ ಚಿತ್ರ ತೆರೆಯಮೇಲೆ ಸಖತ್ ಸದ್ದು ಮಾಡಲಿದೆ. ಈ ನಡುವೆ ಸುದೀಪ್ ಚಿತ್ರೀಕರಣ ವೇಳೆ ಚಿತ್ರ ತಂಡದ ಜೊತೆ ಕಳೆದ ಸಿಹಿ ನೆನೆಪಿನ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ಟಿನಲ್ಲಿ ತಾವೇ ಕೈಯಾರೇ ತಮ್ಮ ಸಹ ಕಲಾವಿದರಿಗೆ ಹಾಗೂ ಚಿತ್ರ ತಂಡದ ಸದಸ್ಯರಿಗೆ ಮೊಟ್ಟೆ ದೋಸೆ ಮಾಡಿ ಕೊಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ.

ಇನ್‍ಸ್ಟಾ ಪೋಸ್ಟ್‍ನಲ್ಲಿ, ಎಸ್‍ಎನ್‍ಆರ್(ಸೈರಾ ನರಸಿಂಹ ರೆಡ್ಡಿ) ಸಿನಿಮಾ ಶೂಟಿಂಗ್ ಸೆಟ್ಟಿನಲ್ಲಿ ಕಳೆದ ಮೋಜಿನ ಸಮಯ, ಸ್ಪೇಷಲ್ ಆಮ್ಲೆಟ್ ದೋಸೆ ಎಂದು ಬರೆದು ಎಸ್‍ಎನ್‍ಆರ್ ಎಂದು ಹ್ಯಾಷ್‍ಟ್ಯಾಗ್ ಹಾಕಿ, ದೋಸೆ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಸುದೀಪ್ ದೋಸೆ ಮಾಡಿ ಕೊಡುತ್ತಿದ್ದರೆ, ಸಾಲಾಗಿ ಸಿನಿಮಾ ತಂಡದ ಸದಸ್ಯರು, ಕಲಾವಿದರು ಪ್ಲೇಟ್‍ನಲ್ಲಿ ದೋಸೆ ಹಾಕಿಸಿಕೊಂಡು ಸವಿಯುತ್ತಿರುವ ದೃಶ್ಯ ಸೆರೆಯಾಗಿದೆ.

ಈ ವಿಶೇಷ ಪೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಶೂಟಿಂಗ್ ಸೆಟ್ಟಿನಲ್ಲಿ ಸೌಟು ಹಿಡಿದ ಕಿಚ್ಚನ ಸರಳತನಕ್ಕೆ ಮನಸೋತಿದ್ದಾರೆ. ಈವರೆಗೂ ಈ ವಿಡಿಯೋ ಸುಮಾರು 1 ಲಕ್ಷಕ್ಕೂ ಅಧಿಕ ಬಾರಿ ವಿಕ್ಷಣೆಯಾಗಿದ್ದು, ಸಾಕಷ್ಟು ಮಂದಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಸೌತೆಕಾಯಿಯ ಜೂಸ್ ಕುಡಿಯೋದ್ರಿಂದ, ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗಗಳು ಇವೆ ಗೊತ್ತಾ..?

    ದಿನನಿತ್ಯ ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಒ೦ದು ಲೋಟದಷ್ಟು ತಾಜಾ ಸೌತೆಕಾಯಿಯ ರಸವನ್ನು ಕುಡಿಯಲು ಪ್ರಯತ್ನಿಸಿದರೆ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹಾಗು ನಿಮ್ಮ ಶರೀರದ ತೂಕನು ಕಡಿಮೆ ಮಾಡಿಕೊಳ್ಳಬಹುದು.

  • ಜ್ಯೋತಿಷ್ಯ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗ..!

    ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇದಿನಗಳಲ್ಲಿ ಪರಿಹಾರ ಶತಸಿದ್ಧ. ಸಂಪರ್ಕಿಸಿ:-9353957085 ಮೇಷ ನೀವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದಲ್ಲಿ ಖಿನ್ನತೆಗೊಳಗಾಗಬೇಡಿ. ಆಹಾರದ ಸ್ವಾದಕ್ಕೆ ಉಪ್ಪು ಬೇಕಾದ ಹಾಗೆ ಅತೃಪ್ತಿಯಿಂದ ಮಾತ್ರ ನೀವು ಸಂತೋಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಕೆಲವು ಸಾಮಾಜಿಕ ಸಮಾರಂಭಗಳಿಗೆ ಹಾಜರಾಗಿ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಅತಿಥಿಗಳು…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(17 ಏಪ್ರಿಲ್, 2019) ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ…

  • ವಿಧ್ಯಾಭ್ಯಾಸ

    ವಿಧ್ಯಾರ್ಥಿಗಳ ಗಮನಕ್ಕೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 20 ಕಡೆಯ ದಿನಾಂಕ…..!

    ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ (ಎಸ್ಎಸ್ಎಲ್ಸಿ)ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಂತಿಮ ಗಡುವನ್ನು ವಿಸ್ತರಿಸಿದೆ.ಇದರಂತೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಯಸುವವರಿಗೆ ಮೇ 20 ಕಡೆಯ ದಿನವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾ ಅಂತಿಮ ದಿನಾಂಕವನ್ನು ಮುಂದೂಡಿದ್ದಾಗಿ ಹೇಳಲಾಗಿದ್ದು ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಮುಖ್ಯೋಪಾಧ್ಯಾಯರ ಸಮೂಹವು ದಿನಾಂಕ ಮುಂದುಡುವಂತೆ ಇಲಾಖೆಗೆ ಮನವಿ ಸಲ್ಲಿಸಿತ್ತು. “ಹೆಚ್ಚಿನ ವಿದ್ಯಾರ್ಥಿಗಳು ಇದಾಗಲೇ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ ಪೂರಕ ಪರೀಕ್ಷೆಯ ಲ್ಕುರಿತ ಗಡುವಿನ ವಿಚಾರ ನಮಗೆ…

  • ಆರೋಗ್ಯ

    ದಾಳಿಂಬೆ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ದಿನಕ್ಕೆ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರ ಬಹುದು ಎಂಬ ಮಾತು ಅನಾದಿ ಕಾಲದಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ಆ್ಯನ್ ಆ್ಯಪಲ್ ಎ ಡೇ ಕೀಪ್ಸ್ ಯು ಫ್ರಂ ದಿ ಡಾಕ್ಟ್ರರ್ ಎ ಡೇ ಅನ್ನುತ್ತಾರೆ..