ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ.

ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ ಈರುಳ್ಳಿ ಕಣ್ಣೀರು ತರಿಸಿದೆ.

ಸದ್ಯ ದೇಶದಾದ್ಯಂತ ದಾಸ್ತಾನು ಇರುವ ಈರುಳ್ಳಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಹೊಸ ಬೆಳೆ ನವೆಂಬರ್ ಬಳಿಕ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ದಾಸ್ತಾನು ಇರುವ ಕಳೆದ ವರ್ಷದ ಬೆಳೆ ಬೇಡಿಕೆಗೆ ತಕ್ಕಷ್ಟಿದೆ. ಆದರೆ ದೇಶದ ವಿವಿದೆಡೆ ಮಳೆಯಿಂದಾಗಿ ಸಾಗಣೆಗೆ ಅಡಚಣೆ ಉಂಟಾಗಿದೆ. ಅಲ್ಲದೇ ವ್ಯಾಪರಿಗಳು ಹೆಚ್ಚು ದಾಸ್ತಾನು ಮಾಡಿಕೊಂಡಿದ್ದರಿಂದ ಕೃತಕ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ವರ್ಷ ಇದೇ ವೇಳೆ ಕೆ.ಜಿ ಈರುಳ್ಳಿಗೆ 10 ರು. ಇತ್ತು.

ಇದೇ ವೇಳೆ ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, 2-3 ದಿನಗಳಲ್ಲಿ ಬೆಲೆ ನಿಯಂತ್ರಣಕ್ಕೆ ಬಾರದಿದ್ದರೆ ವ್ಯಾಪಾರಿಗಳಿಗೆ ದಾಸ್ತಾನು ಮಿತಿ ಹೇರಲು ಚಿಂತನೆ ನಡೆಸಿದೆ. ಅಲ್ಲದೇ ತುರ್ತು ದಾಸ್ತಾನಿನಿಂದ 16000 ಟನ್ಗಳಷ್ಟುಈರುಳ್ಳಿ ಬಿಡುಗಡೆ ಮಾಡಲಾಗಿದ್ದು. ರಾಷ್ಟ್ರೀಯ ಗ್ರಾಹಕ ಒಕ್ಕೂಟ ಹಾಗೂ ನಾಫೆಡ್ ಮೂಲಕ ಕೆ.ಜಿಗೆ 22ರು. ನಂತೆ ದೆಹಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಅಲ್ಲದೇ ಕೆಲ ರಾಜ್ಯಸರ್ಕಾರಗಳಿಗೂ ತುರ್ತು ದಾಸ್ತಾನಿಂದ ಈರುಳ್ಳಿ ಬಿಡುಗಡೆಗೆ ಸೂಚನೆ ನೀಡಲಾಗಿದ್ದು, ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಇದೇ ವೇಳೆ ರಫ್ತು ಕಡಿವಾಣಕ್ಕೆ ಕೇಂದ್ರ ಮುಂದಾಗಿದ್ದು, ಕನಿಷ್ಠ ರಫ್ತು ದರ ನಿಗದಿ ಪಡಿಸಿ ರಿಯಾಯಿತಿಯನ್ನು ರದ್ದು ಮಾಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಧರ್ಮಸ್ಥಳದ ಪರಮ ಪೂಜ್ಯ ಧರ್ಮಾದಿಕಾರಿಗಳಾದ ಡಾ.ವೀರೇಂದ್ರ ಹೆಗಡೆರವರು, ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಮನೆ ಗೃಹಪ್ರವೇಶದ ಅದ್ಭುತ ಫೋಟೋಗಳು ನಿಮಗಾಗಿ…
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಖಂಡಿಸುವ ಬರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೋದಿಯವರೇ ನಿಮಗೆ ಸೌಟ್ನಿಂದ ಹೊಡಿಬೇಕಾ? ಅಥವಾ ಗ್ಯಾಸ್ನಿಂದ ಹೊಡಿಬೇಕಾ? ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ? ಗ್ಯಾಸ್ ಬೆಲೆ ಏರಿಕೆಯಾಯಿತು. ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರ…
ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ. ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ…
ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಜ್ಞರ ಮಾಹಿತಿ ಕೇಳಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಮಯೂನ್.ಎನ್ Published On – 25 May 2021 ಸಾಂದರ್ಭಿಕ ಚಿತ್ರ ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವವನ್ನೆ ಕಂಗಾಲಾಗಿಸಿದೆ. ಈಗಾಗಲೇ ಅದೆಷ್ಟೋ ಬಡ ಜೀವಿಗಳನ್ನು ಬಲಿ ಪಡೆದಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಎಲ್ಲವೂ ಮೊದಲಿನಂತೆ…
ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಪುಟ್ಟ ದೇಶ ಇಸ್ರೇಲ್, ಎಷ್ಟೇ ತೊಂದರೆಗಳು ಬಂದ್ರೂ ಕೂಡ ಎದೆಗುಂದದೆ, ಬಂದ ತೊಂದರೆಗಳನ್ನು ಎದುರಿಸಿ ಹೇಗೆ ಬೆಳೆದಿದೆ ಎಂದರೆ….ಆ ಇಸ್ರೇಲಿನ ಅದೆಷ್ಟೋ ಪಟ್ಟು ದೊಡ್ಡದಾಗಿರೋ ನಮ್ಮ ಭಾರತಕ್ಕೇನು ಆ ರೀತಿ ಬೆಳೆಯೋ ಅವಕಾಶಗಳೇ ಸಿಕ್ಕಿರಲಿಲ್ಲವಾ ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ !