ಸುದ್ದಿ

ಮಾತು ಮಾತಿಗೂ ಹೆಚ್ಚು ಕೋಪ ಬರುತ್ತಿದೆಯೇ ಇಲ್ಲಿದೆ ನೋಡಿ ಅದಕ್ಕೆ ಮದ್ದು..!

249

ಕೆಲವರು  ಮಾತು ಮಾತಿಗೆ ಕೋಪಗೊಳ್ತಾರೆ. ಈ ಕೋಪ ಸಂಬಂಧವನ್ನು ಹಾಳು ಮಾಡುವ ಜೊತೆಗೆ ಅವ್ರ ಆರೋಗ್ಯದ ಮೇಲೂ ಪ್ರಭಾವಬೀರುತ್ತದೆ. ಕೋಪ ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ.ಕೋಪವನ್ನು ನಿಯಂತ್ರಿಸಿಕೊಳ್ಳಲು ಕೆಲವರು ಅನೇಕ ಪ್ರಯತ್ನಗಳನ್ನು ಮಾಡ್ತಾರೆ. ಆದ್ರೆ ಯಾವುದೂ ಫಲ ನೀಡುವುದಿಲ್ಲ. ಕೆಲವೊಂದುವಾಸ್ತು ಉಪಾಯಗಳು ನಿಮ್ಮ ಕೋಪ ನಿವಾರಣೆಗೆ ಸಹಾಯಕವಾಗಲಿದೆ.

ವಾಸ್ತು ಶಾಸ್ತ್ರದ ಪ್ರಕಾರ,ಯಾರಿಗೆ ಹೆಚ್ಚು ಕೋಪ ಬರುತ್ತದೆಯೋ ಅವ್ರು ಕೆಂಪು ಬಣ್ಣ ಬಳಕೆಯನ್ನು ಕಡಿಮೆ ಮಾಡಬೇಕು. ಮನೆಗೋಡೆ, ಬಾಗಿಲಿಗೆ ಬಣ್ಣ ಹಾಗೂ ಕಿಟಕಿ, ಬಾಗಿಲಿನ ಪರದೆ, ಕುಷನ್ ಗಳು ಕೆಂಪು ಬಣ್ಣದಲ್ಲಿರದಂತೆ ನೋಡಿಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ ಕೊಳಕು ಕೂಡ ಕೋಪಕ್ಕೆ ಕಾರಣವಾಗುತ್ತದೆ. ಮನೆಯಪ್ರತಿಯೊಂದು ಭಾಗ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿರದಂತೆ ಎಚ್ಚರಿಕೆ ವಹಿಸಿ.ಮನೆಯ ಪೂರ್ವ ದಿಕ್ಕಿಗೆ ಪ್ರತಿ ದಿನ ಬೆಳಗ್ಗೆ ಹಾಗೂಸಂಜೆ ದೀಪವನ್ನು ಬೆಳಗಬೇಕು. ಇದು ಕೋಪವನ್ನು ನಿಯಂತ್ರಿಸಲು ನೆರವಾಗುತ್ತದೆಯಂತೆ.

ಹೆಚ್ಚು ಕೋಪ ಬರ್ತಿದ್ದಂತೆನಿಯಮಿತ ರೂಪದಲ್ಲಿ ಸೂರ್ಯನಿಗೆ ಜಲವನ್ನು ಅರ್ಪಿಸಿ. ಇದ್ರಿಂದ ಮನಸ್ಸು ಶಾಂತಗೊಳ್ಳುತ್ತದೆ.ಪ್ರತಿ ದಿನ ಹೀಗೆ ಮಾಡಿದ್ರೆ ಕೋಪ ಕಡಿಮೆಯಾಗುತ್ತದೆ. ಪದೇ ಪದೇ ಕೋಪ ಬರ್ತಿದ್ದರೆ ಸೋಮವಾರ ವೃತಮಾಡಿ. ಸೋಮವಾರ ಒಂದು ಸಮಯ ಮಾತ್ರ ಆಹಾರ ಸೇವನೆ ಮಾಡಿ. ಚಂದ್ರನಿಗೆ ಅರ್ಘ್ಯ ನೀಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ