ಮನರಂಜನೆ

ಬಿಗ್‍ಬಾಸ್ ಮನೆಯಿಂದ ಹೊರ ಬಂದ ಪ್ರಿಯಾಂಕಾ, ಪ್ರಿಯಾಂಕಾ ತಾಯಿ ಕಣ್ಣೀರು.

38

ಬಿಗ್‍ ಬಾಸ್ ರಿಯಾಲಿಟಿ ಶೋ ಫಿನಾಲೆಗೆ ಒಂದೇ ವಾರ ಉಳಿದಿದೆ. ಈ ವಾರ ಪ್ರಿಯಾಂಕಾ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಪ್ರಿಯಾಂಕಾ ಬಿಗ್‍ಬಾಸ್ ಮನೆಗೆ ಎಂಟ್ರಿ ಪಡೆದ ದಿನ ಮತ್ತು ಹೊರ ಬಂದ ದಿನಕ್ಕಿರುವ ಸಾಮ್ಯತೆಯನ್ನು ಹೇಳಿ ಅವರ ತಾಯಿ ಕಣ್ಣೀರು ಹಾಕಿದ್ದಾರೆ.

ಪ್ರಿಯಾಂಕಾ ಮನೆಯಿಂದ ಹೊರ ಬಂದು ನಟ ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಂಡರು. ಮಗಳು ವೇದಿಕೆಯತ್ತ ಬರುತ್ತಿದ್ದಂತೆ ಪ್ರಿಯಾಂಕಾರ ತಾಯಿ ಕಣ್ಣೀರು ಹಾಕಲಾರಂಭಿಸಿದರು. ಈ ವೇಳೆ ಸುದೀಪ್, ಮಗಳು ಮನೆಯಿಂದ ಹೊರ ಬಂದಿದ್ದಕ್ಕೆ ನೋವಾಯ್ತಾ ಅಥವಾ ಬಹಳ ದಿನಗಳ ನಂತರ ನೋಡಿ ಖುಷಿಗೆ ಕಣ್ಣೀರು ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಸುದೀಪ್ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ತಾಯಿ, ಬಿಗ್‍ಬಾಸ್ ಮನಗೆ ಹೋದ ದಿನವೇ ಅವರ ತಂದೆಯ ಪೂಜೆ ಇತ್ತು. ಇಂದು ಸಹ ತಂದೆಯ ಪೂಜೆಯ ದಿನವೇ ಹೊರ ಬಂದಿದ್ದಾಳೆ ಎಂದು ಹೇಳಿ ಭಾವುಕರಾದರು. ಅಮ್ಮನ ಮಾತು ಕೇಳಿದ ಕೂಡಲೇ ಭಾವುಕರಾದ ಪ್ರಿಯಾಂಕಾ ತಾಯಿ ಬಳಿ ತೆರಳಿ ಸಮಾಧಾನಪಡಿಸಿದರು.

ಈ ಹಿಂದೆಯೂ ಪ್ರಿಯಾಂಕಾ ಹಲವು ಬಾರಿ ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು. ಬಿಗ್‍ಬಾಸ್ ಮನೆಗೂ ಹೋಗುವ ಮೊದಲು ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆಯೂ ಪ್ರಿಯಾಂಕಾ ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು.

ಸದ್ಯ ಮನೆಯಲ್ಲಿ ದೀಪಿಕಾ ದಾಸ್, ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಉಳಿದುಕೊಂಡಿದ್ದರು. ಈ ವಾರದ ಮಧ್ಯೆದಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಬರಲಿದ್ದಾರೆ ಎಂಬುದನ್ನು ಸುದೀಪ್ ಶನಿವಾರದ ಸಂಚಿಕೆಯಲ್ಲಿ ಖಚಿತಪಡಿಸಿದ್ದಾರೆ. ಇತ್ತ ಪ್ರಿಯಾಂಕಾ ಮನೆಯಿಂದ ಹೊರ ಹೋಗುತ್ತಿದ್ದಂತೆ ಎಲ್ಲ ಸದಸ್ಯರು ಭಾವುಕರಾದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಜೀವನದಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬುದು ಸತ್ಯ..ಅದಕ್ಕೆ ಸುನಿತಾ ಮಂಜುನಾಥ್ ರವರೇ ನೈಜ್ಯ ಉದಾಹರಣೆ…

    ಸಾಕಷ್ಟು ಸಮಾಜಸೇವೆಗಳನ್ನು ಮಾಡಿ ಹೆಸರಾಗಿರುವ ಸುನಿತಾ ಮಂಜುನಾಥ್ ರವರ ಬಹು ದೊಡ್ಡ ಕನಸಿನ ಆಂದೋಲನವೇ “ಕಸದಿಂದ ರಸ” ತಮ್ಮದೇ ಶಾಲೆಯ ಮಕ್ಕಳಿಗೆ ಹುರಿದುಂಬಿಸಿ..‌ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚು ಮಾಡುತ್ತಿರುವ ಇವರು ನಿಜಕ್ಕೂ ಗ್ರೇಟ್..

  • ಕರ್ನಾಟಕ

    ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಾಲಾ ಕಿಟ್ ವಿತರಣೆ

    ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್‌ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ‍್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್…

  • ಸ್ಪೂರ್ತಿ

    ಬದುಕನ್ನು ವ್ಯರ್ಥ ಮಾಡಬೇಡಿ, ಸಮಯವನ್ನು ಅರ್ಥ ಮಾಡಿಕೊಂಡು ಬದುಕಿ ರವಿ ಚನ್ನಣ್ಣನವರ್.

    ಗವಿಮಠದ ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ರವಿ ಚನ್ನಣ್ಣನವರ್, ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಕೊಪ್ಪಳ ಅಂದು ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಜಾತ್ರೆಯಿಂದ ದಕ್ಷಿಣ ಕಾಶಿ ಎಂದೆನಿಸಿದೆ. ಈ ಹಿಂದೆ ಯಾಗಗಳು ನಡೆಯುತ್ತಿದ್ದವಂತೆ, ಅದರ ಮೂಲ ಉದ್ದೇಶ ಜನರ ಹಿತವಾಗಿತ್ತಂತೆ. ಈಗ ಲಕ್ಷ ದೀಪೋತ್ಸವದ ಮೂಲಕ ದೈವದ ಸಾಕ್ಷಾತ್ಕಾರ, ಲಕ್ಷ ವೃಕ್ಷ ನೆಡುವ ಮೂಲಕ ಪ್ರಕೃತಿ ಸಾಕ್ಷಾತ್ಕಾರವಾಗುತ್ತಿದೆ….

  • ವ್ಯಕ್ತಿ ವಿಶೇಷಣ

    ಈಗ 5 ರೂಪಾಯಿಗೆ ವೈದ್ಯಕೀಯ ಸೇವೆ ಸಿಗುತ್ತೆ …!ತಿಳಿಯಲು ಇದನ್ನು ಓದಿ..

    ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ಸಾವಿರಾರು ವೈದ್ಯರುಗಳು ತಮ್ಮ ಕರ್ತವ್ಯ ನಿಷ್ಟೆಯನ್ನು ಮರೆತು ಆಸ್ಪತ್ರೆ ಓಪಿಡಿ ಸೇವೆಗಳನ್ನು ನಿಲ್ಲಿಸಿದ ಪರಿಣಾಮ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

  • ರಾಜಕೀಯ

    ಈ ಸಮೀಕ್ಷೆಯ ಪ್ರಖಾರ ದೇಶದ ಅತ್ಯಂತ ಜನಪ್ರಿಯ ವ್ಯಕ್ತಿ ಮತ್ತು ರಾಜಕಾರಣಿ ಯಾರು ಗೊತ್ತಾ..?

    ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ.   ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು…

  • ಸುದ್ದಿ

    ಎಲ್ಐಸಿ ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ…!ಇದನ್ನೊಮ್ಮೆ ಓದಿ..,

    ಭಾರತೀಯ ಜೀವ ವಿಮಾ ನಿಗಮ ಪಾಲಿಸಿ ಹೂಡಿಕೆದಾರರ  ಹಣ ಭದ್ರವಾಗಿದೆ.ಸುಳ್ಳು ವದಂತಿಗಳನ್ನು  ನಂಬಬೇಡಿ ಎಂದು ನಿಗಮದಿಂದ ಸ್ಪಷ್ಟನೆ ನೀಡಲಾಗಿದೆ. ಭಾರತೀಯ ವಿಜಯ ವಿಮಾ ನಿಗಮ(ಎಲ್ಐಸಿ) ನಷ್ಟದಲ್ಲಿದೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದರ  ಕುರಿತಾಗಿ ಸ್ಪಷ್ಟನೆ ನೀಡಿರುವ ಎಲ್ಐಸಿ ಇದು ಸಂಪೂರ್ಣ ಸುಳ್ಳು ಎಂದು ಹೇಳಿಕೆ ನೀಡಿದೆ. ಎಲ್ಐಸಿ ಭಾರಿ ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದೆ.ಪಾಲಿಸಿದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಂಸ್ಥೆಯ ಆರ್ಥಿಕ ಶಕ್ತಿ ಉತ್ತಮವಾಗಿದೆ ಎಂದುಹೇಳಲಾಗಿದೆ,ಸುಳ್ಳು…