ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
18 ವರ್ಷಆಗಿರುವಯುವಕ-ಯುವತಿಯರೇ… ನೀವು ಇನ್ನೂ ಮತದಾನದ ಹಕ್ಕು ಪಡೆದುಕೊಂಡಿಲ್ಲವೇ?,ಪಡೆದಿದ್ದರೂ ಏನಾದ್ರೂ ತಿದ್ದುಪಡಿಮಾಡಬೇಕೆ?ಚಿಂತೆಮಾಡ್ಬೇಡಿ.ಅಗತ್ಯ ದಾಖಲೆಗಳೊಂದಿಗೆ ರೆಡಿಯಾಗಿರಿ.ನಿಮ್ಮಮನೆಗೆ ಬಂದು ಮತದಾರರ ಪಟ್ಟಿಗೆ ಹೆಸರು ಬರೆದುಕೊಂಡುಹೋಗುತ್ತಾರೆ.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇದು ಉತ್ತಮ ಅವಕಾಶವಾಗಿದೆ.ಮಿಸ್ಮಾಡ್ಕೋಬೇಡಿ.ಹಾಗಿದ್ರೆ ಇದಕ್ಕೆ ದಾಖಲಾತಿಗಳೇನುಬೇಕು ಅಂತೀರಾ?ಮುಂದೆ ಓದಿ ಎಲ್ಲಾ ಮಾಹಿತಿ ಇದೆ.
ಬೆಂಗಳೂರು, ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಚುನಾವಣಾ ಆಯೋಗ ಜನರಿಗೆ ಮನವಿ ಮಾಡಿದೆ. ಸೆಪ್ಟೆಂಬರ್ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು ಸೆಪ್ಟೆಂಬರ್ 30ರ ತನಕ ಇದು ನಡೆಯಲಿದೆ. ಬೂತ್ ಲೆವಲ್ ಅಫೀಸರ್ (ಬಿ.ಎಲ್.ಓ) ಮನೆ-ಮನೆಗೆ ಭೇಟಿ ಮಾಡಲಿದ್ದು, ಮತದಾರರು ಸಂಬಂಧಿಸಿದ ದಾಖಲೆಗಳೊಂದಿಗೆ ಸಿದ್ಧರಾಗಿರಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿಕೊಂಡಿದೆ.
ಸಿದ್ಧವಿರಬೇಕಾದ ದಾಖಲಾತಿಗಳು: ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, ಸರ್ಕಾರಿ/ ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ರೈತರ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಚುನಾವಣಾ ಆಯೋಗ ಅನುಮೋದಿಸಿದ ಯಾವುದಾದರೂ ಇತರ ದಾಖಲೆ.
ಯಾವುದಕ್ಕೆ ಯಾವ-ಯಾವ ಅರ್ಜಿ: ಹೆಸರು/ತಂದೆಯ ಹೆಸರು/ಲಿಂಗ/ಹುಟ್ಟಿದ ದಿನಾಂಕ/ವಿಳಾಸ/ಫೋಟೋ ತಿದ್ದುಪಡಿಗಾಗಿ ನಮೂನೆ 8 ಅರ್ಜಿ ತುಂಬಬೇಕು. ನಮೂನೆ 7ರಲ್ಲಿ ಸ್ಥಳ ಬದಲಾವಣೆ/ಮರಣ. ನಮೂನೆ 6ರಲ್ಲಿ ಸೇರ್ಪಡೆಗಾಗಿ ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ/ವಿಳಾಸ ದೃಢೀಕರಣ/2 ಪಾಸ್ ಪೋರ್ಟ್ ಅಳತೆಯ ಪೋಟೋಗಳು ಅಗತ್ಯವಾಗಿದೆ.
ಹಾಗಿದ್ದರೇ ಇನ್ನೇಕೆ ತಡ ಸೆ.1ರಿಂದ ಸೆ30ರೊಳಿಗೆ ಬಿ. ಎಲ್. ಓಗಳು ನಿಮ್ಮ ಮನೆಗೆ ಬರಹುದು. ಹಾಗಾಗಿ ಮೇಲೆ ತಿಳಿಸಲಾದ ದಾಖಲಾತಿಗಳನ್ನು ರೆಡಿಮಾಡಿ ಇಟ್ಟುಕೊಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ನಿಯತಕಾಲಿಕೆಯ ಲೇಖಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.ಮ್ಯಾನ್ಹಟನ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ತನ್ನ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 75 ವರ್ಷದ ಇ ಜೀನ್ ಕ್ಯಾರೋಲ್ 1995-96 ರಲ್ಲಿ ಮ್ಯಾನ್ಹಟನ್ನ ಬರ್ಗ್ಡ್ರಾಫ್ ಅಂಗಡಿಯಲ್ಲಿ ನಡೆದಿರುವ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಗ ಟ್ರಂಪ್ಗೆ 40-50 ವರ್ಷ ಆಗಿರಬಹುದು. 49-50 ವಯಸ್ಸಿನ ನನ್ನನ್ನು, ತನ್ನ ಸ್ನೇಹಿತೆಗೆ ಯಾವ ಉಡುಗೊರೆ ನೀಡಬಹುದು ಎಂದು ಕೇಳಿದ್ದರು. ಅದಕ್ಕೆ ನಾನು ಬೂದು ಬಣ್ಣದ…
ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್! ಫೇಸ್ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್ನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಫೆಬ್ರವರಿ 1, 2020ರ ಬಳಿಕ ಕೆಲ ಮೊಬೈಲ್ಗಳಿಗೆ ತನ್ನ ಸೌಲಭ್ಯವನ್ನು ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ. ಪ್ರಪಂಚದ ಜನಪ್ರಿಯ ಸಂದೇಶ ರವಾನೆ ಮಾಡುವ ವೇದಿಕೆಗಳಲ್ಲಿ ವಾಟ್ಸಾಪ್ ಹೆಚ್ಚು ಜನಮೆಚ್ಚುಗೆ ಪಡೆದುಕೊಂಡಿದೆ. ಇದೀಗ ವಾಟ್ಸಾಪ್ ಪ್ರಿಯರಿಗೆ ಒಂದ ಕಹಿ ಸುದ್ದಿ ಬಂದಿದ್ದು ಕೆಲ ಮೊಬೈಲ್ಗಳಲ್ಲಿ ವಾಟ್ಸಾಪ್ ಸೇವೆ ಬಂದ್ ಆಗಲಿದೆ ಎಂದು ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದ ದೈತ್ಯ ಮಾದ್ಯಮವಾಗಿ ಬೆಳೆದಿರುವ…
ನವದೆಹಲಿ, ಆರ್ಥಿಕತೆಯು ಸಹಜ ಸ್ಥಿತಿಗೆ ಬರಲು ಸರ್ಕಾರವು ಮೊದಲು ಜಿಎಸ್ಟಿಯನ್ನು ಸರಳ ಹಾಗೂ ಸುಧಾರಣೆ ಮಾಡಬೇಕು. ಗ್ರಾಮೀಣ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಂಡವಾಳ ಸೃಷ್ಟಿಯ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ. ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ವಲಯವಾರು ಚೂರು ಚೂರು ಗಮನ ನೀಡುವಂತಹ ರಾಜಕೀಯ ಬಂಡವಾಳವನ್ನು ವ್ಯರ್ಥ ಮಾಡುವ ಬದಲು ಅಥವಾ ಅಪನಗದೀಕರಣದಂತಹ ಶಾಶ್ವತ ಬ್ಲಂಡರ್ಗಳನ್ನು…
ವಯಸ್ಸಾದ ಅಜ್ಜಿಯನ್ನು ಪೊಲೀಸರು ಅರೆಸ್ಟ್ ಮಾಡಲು ಕಾರಣವೇನು ಈ ಮಹಿಳೆ ಯಾರು ಎಂಬುದನ್ನು ತಿಳಿಯೋಣ? ಈ ನ್ಯೂಸ್ ಪ್ರಚಾರವಾಗಿರುವುದು ಗ್ರೇಟರ್ ನೋಯಿಡಾದಿಂದ. ಉತ್ತರ ಪ್ರದೇಶದ ಸರ್ಕಾರ ಅಲ್ಲಿ ಬಿಕ್ಷೆ ಬೇಡುತ್ತಿದ್ದ ಪ್ರತಿಯೊಬ್ಬರನ್ನು ವಶಕ್ಕೆ ಪಡೆದು ಕೈ ಕಾಲು ಗಟ್ಟಿ ಇರುವವರಿಗೆ ಚಿಕ್ಕ ಪುಟ್ಟ ಕೆಲಸಕ್ಕೆ ನಿರ್ಧಾರ ಹಾಗೂ ವಯಸ್ಸಾದವರನ್ನು ವೃದ್ರಾಶ್ರಮಗಳಿಗೆ ಒದಗಿಸುವ ನಿರ್ಧಾರವನ್ನು ಕೈಗೊಂಡಿತ್ತು ಅದಕ್ಕಾಗಿ ಅಲ್ಲಿ ಪ್ರತಿಯೊಬ್ಬರನ್ನು ತಮ್ಮ ವಶಕ್ಕೆ ಪಡೆಯಲು ಪೊಲೀಸರು ಮುಂದಾಗುತ್ತಾರೆ. ಅಲ್ಲಿ ಇದ್ದ ಭಿಕ್ಷುಕರ ನಡುವೆ ಒಬ್ಬ 86 ವರ್ಷದ ಅಜ್ಜಿ…
ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ. ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು…
ಒಂದೊಂದು ಬಗೆಯ ಆಹಾರಗಳು ಒಂದೊಂದು ಸೀಸನ್ ಗೆ ಸೀಮಿತವಾಗಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳು ಒಂದು ಕಾಲಮಾನದಲ್ಲಿ ಬೆಳೆಯಲ್ಪಟ್ಟು ಜನರಿಗೆ ಸಹಾಯಕವಾದರೆ, ಕೆಲವೊಂದು ಪದಾರ್ಥಗಳು ನಿರ್ದಿಷ್ಟ ಕಾಲಮಾನದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ಮನೆ ಮಾಡಿದೆ. ನಾವು ಇತ್ತೀಚಿನ ದಿನಗಳಲ್ಲಿ ಸೀಸನಲ್ ಫ್ರೋಟ್ ಹಾಗೂ ತರಕಾರಿಗಳಿಗೆ ಮಾರು ಹೋಗುತ್ತೇವೆ. ಅಂದರೇ ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಗಳನ್ನು ಬಿರು ಬಿಸಿಲಿನ ಬೇಸಿಗೆಯ ಕಾಲದಲ್ಲಿ ಸೇವಿಸುತ್ತವೆ. ಅದಕ್ಕೆ ಕಾರಣ ಇದರಲ್ಲಿ ಹೆಚ್ಚಿನ ನೀರಿನ ಮಟ್ಟವಿದ್ದು ಅದು ನಮ್ಮ ದೇಹವನ್ನು…