ಸುದ್ದಿ

ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ…!

43

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ  ಅವರ ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಭಾರತ ತಂಡದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ. 

ವೆಸ್ಟ್‌ಇಂಡೀಸ್ ಪ್ರವಾಸದ ವೇಳೆಯಲ್ಲಿ ಜಮೈಕಾದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಯಲ್ಲಿರುವಾಗ ಅಚಾನಕ್ ಆಗಿ ಬಾಲಕನ ಭೇಟಿಯಾದರು. ಈ ಸಂದರ್ಭದಲ್ಲಿ ಬಾಲಕನೇ ನನ್ನ ಆಟೋಗ್ರಾಫ್ ಪಡೆಯುವೀರಾ ಎಂದು ವಿರಾಟ್ ಕೊಹ್ಲಿರನ್ನು ಪ್ರಶ್ನಿಸಿದರು. 

ಬಾಲಕನ ಪ್ರಶ್ನೆಯಿಂದ ಅಚ್ಚರಿಗೊಂಡರೂ ನಗುಮುಖದಿಂದಲೇ ಬಹಳ ತಾಳ್ಮೆಯಿಂದ ಆಟೋಗ್ರಾಫ್ ಪಡೆಯುವ ಮೂಲಕ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದಾರೆ. 

ಇದಕ್ಕೂ ಮೊದಲು ವೆಸ್ಟ್‌ಇಂಡೀಸ್ ಸರಣಿ ನಡುವೆ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುವ ಮೂಲಕ ವಿರಾಟ್ ಕೊಹ್ಲಿ ಹೃದಯ ಗೆದ್ದಿದ್ದರು. ಅಂದ ಹಾಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ2-0 ಅಂತರದಲ್ಲಿ ವೈಟ್‌ವಾಶ್ ಮಾಡಿಕೊಂಡಿದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಚುನಾವಣೆ

    ಕೋಲಾರ ಜಿಲ್ಲಾಪಂಚಾಯಿತ್,ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ವಿವರ ಪ್ರಕಟ

    ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಜ.2 ರ ಗೆಜೆಟಿಯರ್‌ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್‌ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6,…

  • ಆಟೋಮೊಬೈಲ್ಸ್

    ಕೇವಲ 15 ನಿಮಿಷಗಳಲ್ಲಿ ಹೋಂಡಾ ಕಂಪನಿಯ ಎಲೆಕ್ಟ್ರಿಕ್ ಕಾರು ಚಾರ್ಜ್ ಆಗುತ್ತೆ..!ತಿಳಿಯಲು ಈ ಲೇಖನ ಓದಿ ..

    ಜಪಾನ್ ವಾಹನ ತಯಾರಕ ಹೋಂಡಾ ತನ್ನ ಕ್ರೀಡಾ ಆವೃತಿಯ ಇ.ವಿ ಪರಿಕಲ್ಪನೆಯನ್ನು ಟೊಕಿಯೊ ಮೋಟಾರ್ ಪ್ರದರ್ಶನದಲ್ಲಿ ಬಹಿರಂಗಪಡಿಸಿದೆ. ಈ ವಾಹನವು ನಗರ ಇ.ವಿ ಪರಿಕಲ್ಪನೆಯನ್ನು ಆಧರಿಸಿದೆ

  • ಸುದ್ದಿ

    ಆದಿವಾಸಿಗಳ ಪಾಲಿಗೆ ಮರಣ ಶಾಸನವಾದ ನೂತನ ಅರಣ್ಯ ಕಾಯ್ದೆ,.ಇದನ್ನೊಮ್ಮೆ ಓದಿ …!

    ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ…

  • ಸಿನಿಮಾ

    ಶಾಕಿಂಗ್ ಸುದ್ದಿ.!ನಟನನ್ನು ನೋಡಲಾಗದೇ ಆತ್ಮಹತ್ಯೆ ಯತ್ನಿಸಿದ್ದ ಅಭಿಮಾನಿ ಸಾವು..!

    ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ಬಂದಿದ್ದ ಅಭಿಮಾನಿಯೊಬ್ಬ ಯಶ್ ಭೇಟಿ ಸಾಧ್ಯವಾಗದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ರವಿ ಮಧ್ಯರಾತ್ರಿಯೇ ಸಾವನ್ನಪ್ಪಿದ್ದಾನೆ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಮಂಗಳವಾರ ತನ್ನ ನೆಚ್ಚಿನ ನಟ ಯಶ್ ಅವರ ಹುಟ್ಟುಹಬ್ಬವಿದ್ದ ಕಾರಣ ಅವರನ್ನು ಭೇಟಿ ಮಾಡಲು ಬೆಂಗಳೂರಿನ…

  • ಸುದ್ದಿ

    ರಾಜಸ್ಥಾನದ ಈ ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದರೆ 111 ಗಿಡ ನೆಡುವ ಪದ್ದತಿ…ಯಾಕೆ ಗೊತ್ತ?

    ರಾಜಸ್ಥಾನದ ರಾಜ್‍ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ. ಈ ಯಶೋಗಾಥೆಯ…

  • ಸಿನಿಮಾ

    ನನ್ ಎಕ್ಕಡ ಎಂಬ ಡೈಲಾಗ್ ನಿಂದಲೇ ಪ್ರಸಿದ್ಧಿಯಾಗಿದ್ದ ನಟ ಹುಚ್ಚ ವೆಂಕಟ್ ಈಗ ಕಾಲಿಗೆ ಚಪ್ಪಲಿ ಇಲ್ಲದೇ ಬರಿಗಾಲಿನಲ್ಲಿ ತಿರುಗುವುತ್ತಿರುವುದೇಕೆ?

    ಹುಚ್ಚ ವೆಂಕಟ್‍…..ತಮ್ಮ ಯಡವಟ್ಟುಗಳಿಂದಲೇ ಫೇಮಸ್‍ ಆದವರು. ಜೊತೆಗೆ ಬಿಗ್‍ ಬಾಸ್‍ಗೆ ಹೋಗಿ ಮತ್ತಷ್ಟು ಹೆಸರು ಮಾಡಿದ್ರು. ಕಾವೇರಿ ನೀರು, ಕನ್ನಡ ಭಾಷೆ ಬಗ್ಗೆ ಹೇಳುತ್ತಾ, ಒಂದೆರಡು ಚಿತ್ರಗಳನ್ನೂ ಮಾಡಿ, ಮಾತ್‍ ಮಾತಿಗೂ ನನ್ನ ಎಕ್ಕಡ ಎಂದು ಡೈಲಾಗ್‍ ಡೆಲವರಿ ಮಾಡುತ್ತಿದ್ದವರು ಹುಚ್ಚಾ ವೆಂಕಟ್‍. ಒಂದಿಲ್ಲೊಂದು ಗಲಾಟೆ ಮಾಡಿಕೊಳ್ತಾ, ಸುದ್ದಿಯಲ್ಲಿದ್ದ ಹುಚ್ಚ ವೆಂಕಟ್‍ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಚೆನ್ನೈನ ಬೀದಿಗಳಲ್ಲಿ ಹುಚ್ಚ ವೆಂಕಟ್‍ ಬರಿಗಾಲಲ್ಲಿ ಓಡಾಡ್ತಿರೋ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ ಆಗಿವೆ. ಅವರ ಕಾಲಲ್ಲಿ…