ಸುದ್ದಿ

ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ವಿಜಯವನ್ನು ಸಾಧಿಸಿದ ಎಂ,ಟೆಕ್ ಪದವೀಧರ,..ಇದನ್ನೊಮ್ಮೆ ಓದಿ..?

46

ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ಯೋ ಗೊತ್ತಿಲ್ಲ. ಆದರೆ ಸಿಎಂಗೂ ಮೊದಲೇ ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ ಈ ಗುಲಾಬಿ ತೋಟಗಾರಿಕೆ ಮಾಡುತ್ತಿದ್ದಾರೆ. 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್‍ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಗಿರೀಶ್ ಮೊದಲಿಗೆ ಕೃಷಿ ಮಾಡುತ್ತೇನೆ ಅಂದಾಗ ಕುಟುಂಬದವರು ಒಪ್ಪಿರಲಿಲ್ಲ. ಅದರಲ್ಲೂ 40 ಬೊರ್‍ವೆಲ್ ಕೊರೆಸಿದ್ರೂ ನೀರು ಸಿಗ್ಲಿಲ್ಲ. ಇಂಥ ಹೊತ್ತಲ್ಲಿ ಮಗನಿಗೆ ಧೈರ್ಯ ತುಂಬಿದ್ದು ಕೆಇಬಿ ನಿವೃತ್ತ ಎಂಜಿನಿಯರ್ ತಂದೆ ರಾಮಸ್ವಾಮಿ. ನನ್ನ ಸಲಹೆಯಂತೆ ಪೌಲಿಹೌಸ್‍ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಿದ ಬಳಿಕ ಈಗ ನೀರಿನ ಸಮಸ್ಯೆಯೇ ಇಲ್ಲ ಎಂದು ಗಿರೀಶ್ ತಂದೆ ರಾಮಸ್ವಾಮಿ ಹೇಳುತ್ತಾರೆ.

ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ತಾಯಿ ಲಲಿತಮ್ಮ, ಎಂಟೆಕ್ ಪದವೀಧರೆಯಾಗಿರೋ ಪತ್ನಿ ಅಕ್ಷತಾ ಸಹ ಗಿರೀಶ್‍ಗೆ ಸಾಥ್ ನೀಡುತ್ತಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಕಿಶನ್ ಕಣ್ಣೀರು ಹಾಕ್ತಿದ್ದಂತೆ, ವೇದಿಕೆ ಮೇಲೆ ಸ್ಪೆಷಲ್ ಗಿಫ್ಟ್ ನೀಡಿದ ಕಿಚ್ಚ.

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್‍ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ….

  • ಉಪಯುಕ್ತ ಮಾಹಿತಿ

    ಜೇನು ತುಪ್ಪದಲ್ಲಿದೆ ಔಷದಕಾರಿ ಗುಣಗಳು..!ತಿಳಿಯಲು ಈ ಲೇಖನ ಓದಿ ..

    ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.

  • ಆರೋಗ್ಯ

    10 ಸಾವಿರ ಮಂದಿಯಿಂದ ಗಿನ್ನೀಸ್ ದಾಖಲೆಯ ಬೃಹತ್ ಯೋಗ ಪ್ರದರ್ಶನ

    ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ,ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಗಿನ್ನೀಸ್ ದಾಖಲೆಯ ಯೋಗಾಥಾನ್ ಅಂಗವಾಗಿ ನಡೆದ 10 ಸಾವಿರಕ್ಕೂ ಹೆಚ್ಚು ಮಂದಿಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದರು. ನಡುಗುವ ಚಳಿಯಲ್ಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಜನರು ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೇರಿದರು. ವಿವಿಧ ಶಾಲೆ,ಕಾಲೇಜುಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಗಮನ ಸೆಳೆದರು.ನಗರ ಮಾತ್ರವಲ್ಲದೇ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಯೋಗ ಪ್ರದರ್ಶನಕ್ಕೆ 1100 ಮಕ್ಕಳನ್ನು ಕರೆತಂದಿದ್ದ…

  • ಸುದ್ದಿ

    ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೊಂದು ಸಿಹಿ ಸುದ್ದಿ….!

    ನೆರೆ ಸಂತ್ರಸ್ತ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಮನೆ ಬಾಡಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 5 ತಿಂಗಳ ಮನೆಯ ಬಾಡಿಗೆಯನ್ನು ಒಂದೇ ಕಂತಿನಲ್ಲಿ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗಾಗಿ ಮನೆ ಬಾಡಿಗೆಗೆ ಮಾಸಿಕ 5000 ರೂ. ನೀಡಲಾಗಿದೆ. ಮಾಲೀಕರು ಮುಂಗಡ ಹಣ ಕೊಡುವಂತೆ ಕೇಳುವುದರಿಂದ 5 ತಿಂಗಳ ಬಾಡಿಗೆ 25 ಸಾವಿರ ರೂ.ಗಳನ್ನು ಒಂದೇ ಕಂತಿನಲ್ಲಿ ನೀಡಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಪ್ರವಾಹಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ…

  • ಸುದ್ದಿ

    ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು?..ಮಾನವನ ಆಯಸ್ಸು ಎಷ್ಟು ಗೊತ್ತಾ….?

    ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120…

  • ಆರೋಗ್ಯ

    ನಿಮ್ಗೆ ಈ 5 ತಿಂಡಿ ತಿನಿಸುಗಳು ಬಹಳ ನಿದ್ದೆ ತರಿಸುತ್ತವೆ..!ತಿಳಿಯಲು ಈ ಲೇಖನ ಓದಿ..

    ನಾವು ಸಿಟಿಯ ಒಂದಿಲ್ಲೊಂದು ರೀತಿಯಾಗಿ ಈ ಡೇರಿ ಪ್ರಾಡಕ್ಟ್ಸ್ ನ ಬಳಸುತ್ತಲೇ ಇರುತ್ತೇವೆ, ಅದು ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.