ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
 
            ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಮಧ್ಯೆ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ತಮಗೆ ಬಂದಿದ್ದ ಆಫರ್ ರನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ಸಿನಿಮಾವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ದೇವರಕೊಂಡ ಅವರನ್ನ ಪರಿಚಯಿಸಲು ಇಷ್ಟಪಟ್ಟಿದ್ದರು. ಅದರಂತೆಯೇ ರೀಮೇಕ್ ಸಿನಿಮಾಗಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲ್ಯಾನ್ ಮಾಡಿದ್ದರು.

ಅದಕ್ಕಾಗಿ ಕರಣ್ ಜೋಹರ್ ಅವರು ವಿಜಯ್ಗೆ ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದ್ದರು. ಆದರೆ ನಟ ವಿಜಯ್ ದೇವರಕೊಂಡ 40 ಕೋಟಿ ರೂ. ಆಫರ್ ರನ್ನು ಬೇಡ ಎಂದು ನಿರಾಕರಿಸಿದ್ದಾರೆ. ಈ ಹಿಂದೆ ಕೂಡ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಕರಣ್ ಜೋಹರ್ ಹಿಂದಿಗೆ ರೀಮೇಕ್ ಮಾಡಲು ಪ್ರಯತ್ನ ಮಾಡಿದ್ದರು. ಆಗಲೂ ವಿಜಯ್ಗೆ ಮುಂಬೈನಲ್ಲಿ ದುಬಾರಿ ಅಪಾರ್ಟ್ ಮೆಂಟ್ ಆಫರ್ ನೀಡಲಾಗಿತ್ತು. ಆದರೆ ಅಂದು ಕೂಡ ಕರಣ್ ಅವರ ಆಫರ್ ರನ್ನು ನಿರಾಕರಿಸಿದ್ದರು.

ನಟ ವಿಜಯ್ ಸಂದರ್ಶನವೊಂದರಲ್ಲಿ “ಒಂದೇ ಸಿನಿಮಾವನ್ನು ಮತ್ತೆ ಮಾಡುವುದು ಕಷ್ಟದ ಕೆಲಸ. ಏಕಕಾಲದಲ್ಲಿ ಎರಡು ಭಾಷೆಯಲ್ಲಿ ಅಭಿನಯಸುತ್ತೇನೆ. ಆದರೆ ತೆಲುಗಿನಲ್ಲಿ ಮಾಡಿದ ಸಿನಿಮಾವನ್ನೇ ಹಿಂದಿಯಲ್ಲಿ ನಾನೇ ಮಾಡುವುದು ನನಗೆ ಸರಿ ಎನ್ನಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಜಿಫ್ ಸ್ಟಾರ್ ಯಶ್ ಅವರು 34ನೇ ವರ್ಷಕ್ಕೆ ಕಾಲಿಟ್ಟು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಯಶ್ ಮುದ್ದಿನ ಮಗಳು ಐರಾ ತನ್ನ ಅಪ್ಪನ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದಾಳೆ. ರಾಧಿಕಾ ತನ್ನ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ರಾಧಿಕಾ ಅವರು ಸರ್ಪ್ರೈಸ್ ಹಾಗಿ ಯಶ್ ಗೆ ನಿಮ್ಮ ಜೀವನವನ್ನು ನಾವು ಪಡೆದುಕೊಂಡಂತೆ, ನಿಮ್ಮ ಖಾತೆಯನ್ನು ಸಹ ಪಡೆದುಕೊಂಡಿದ್ದೇವೆ ಎಂದು ನಿಮ್ಮ ದೊಡ್ಡ ಅಭಿಮಾನಿಯಾಗಿ ನಮ್ಮ…
ನಮ್ಮ ಭಾರತದ 125 ಕೋಟಿ ಜನರಲ್ಲಿ ಕೇವಲ ಶೇ.10ರಷ್ಟು
ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಾತೃಪೂರ್ಣ ಯೋಜನೆಯು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಮಾತೃಪೂರ್ಣ ಯೋಜನೆಯ ಪ್ರಮುಖ ಅಂಶಗಳು :- ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ…
ಬಹುಶಃ ಮಾನವನಿಗೆ ಕಾಲಿಡೋಕೆ ಸಾಧ್ಯವಾಗದೇ ಇರುವ ಕೆಲವು ವಿಸ್ಮಯ ಪ್ರದೇಶಗಳು ನಮ್ಮ ಪ್ರಪಂಚದಲ್ಲಿದ್ದು, ನಾನಾ ನಿಗೂಢತೆಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದೆ!! ಹೀಗಿರಬೇಕಾದರೆ ಮುಖ್ಯ ಭೂಭಾಗದೊಂದಿಗೆ ಸಂಪರ್ಕವನ್ನು ಕಡಿದುಕೊಂಡು, ಪ್ರತ್ಯೇಕ ದ್ವೀಪವಾಗಿದ್ದರೂ ಕೂಡ ಅದು ಮಾನವನಿಂದ ಇನ್ನೂ ಮುಟ್ಟಲು ಅಸಾದ್ಯ!! ದ್ವೀಪದೊಳಗೆ ಒಂದು ಬಾರಿ ಕಾಲಿಟ್ಟರೆ ಹಿಂತಿರುಗುವ ಯಾವ ಗ್ಯಾರೆಂಟಿಯೂ ಇಲ್ಲ. ಯಾಕೆಂದರೆ ಪ್ರತಿ ಹೆಜ್ಜೆಯಲ್ಲೂ ಕೂಡ ಸಾವೇ ಹಿಂಬಾಲಿಸುತ್ತದೆ!! ಜಗತ್ತಿನಲ್ಲಿ ತಿಳಿಯದಿರದ ಅದೆಷ್ಟೋ ವಿಷಯಗಳು ಇರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಸಂಗತಿಗಳು ಸಾಕಷ್ಟಿದ್ದು, ಕುತೂಹಲಕ್ಕೂ ಕಾರಣವಾಗುತ್ತಲೇ ಇದೆ!! ಈ…
ಎಲ್ಲರು ಶ್ರೀಮಂತರಾಗಬೇಕು, ಇನ್ನಷ್ಟು ಹೆಚ್ಚು ಹಣ ಗಳಿಸಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿಯೇ ಶ್ರಮ ಪಡುವವರೇ, ಶ್ರಮದ ಹೊರತಾಗಿಯೂ, ಎಷ್ಟೇ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ನೀವು ಪಡೆದ ಹಣ ನೀರಿನಂತೆ ಕರಗಿ ಹೋಗಬಹುದು. ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿಯೂ ಮನುಷ್ಯನನ್ನು ಆರ್ಥಿಕವಾಗಿ ಜರ್ಝರಿತಗೊಳಿಸಬಹುದು. ಇದನ್ನು ಜಗದ ನಿಯಮದಿಂದಲೂ ಬಗೆಹರಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಗುರುವಾರವನ್ನು ದೇವಗುರುವಿನ ದಿನವೆಂದು ಕರೆಯಲಾಗಿದೆ. ಗುರುವು…
ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಾಸಿತವಾಗುತ್ತದೆ. ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.