ಸುದ್ದಿ

ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

71

ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ.

ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ ಬಿಟ್ಟು ಬಿಟ್ಟು ಸುರಿಯುತ್ತಲೇ ಇದ್ದಾನೆ. ಕಳೆದ ಬಾರಿ ಭೂ ಕುಸಿತವುಂಟಾಗಿದ್ದ ಪ್ರದೇಶಗಳ ಜನರು ಸ್ವಲ್ಪವೇ ಜೋರಾಗಿ ಮಳೆ ಬಿದ್ದರೂ ಆತಂಕಪಡುವಂತಾಗಿದ್ದು, ಜೀವ ಕೈಯಲ್ಲಿಯೇ ಹಿಡಿದು ಬದುಕುತ್ತಿದ್ದಾರೆ.ಇದೇ 20ರಿಂದ ಪ್ರತಿ ವರ್ಷದಂತೆ ಮಾನ್ಸೂನ್ ಮಳೆ ಬೀಳಲಿದ್ದು, ಅಪಾಯದ ಸ್ಥಿತಿಯಲ್ಲಿರುವ ಪ್ರದೇಶಗಳಲ್ಲಿ ಮನೆಗಳ ಖಾಲಿ ಮಾಡುವಂತೆ ಮಡಿಕೇರಿ ನಗರದಲ್ಲೇ ಇರುವ ಚಾಮುಂಡೇಶ್ವರಿ ನಗರ,

ಇಂದಿರಾನಗರ ಮತ್ತು ಮಂಗಳಾದೇವಿ ನಗರಗಳ ಜನರಿಗೆ ನಗರಸಭೆ ನೋಟಿಸ್ ಜಾರಿ ಮಾಡಿದೆ. ಇದು ಈ ಪ್ರದೇಶಗಳ ಜನರನ್ನು ಆತಂಕಕ್ಕೆ ದೂಡಿದ್ದು, ಜೀವ ಬಿಗಿ ಹಿಡಿದು ಬದುಕುತ್ತಿದ್ದಾರೆ.ಕಳೆದ ಬಾರಿ ಭೂಕುಸಿತದಿಂದ ಕೆಲವು ಮನೆಗಳು ಬಿರುಕು ಬಿಟ್ಟಿದ್ದರೆ, ಕೆಲವು ಮನೆಗಳು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ. 20ರಿಂದ ಮಾನ್ಸೂನ್ ಮಳೆ ಮತ್ತೆ ಜೋರಾಗುವ ಸಾಧ್ಯತೆ ಇರುವುದರಿಂದ ಯಾವುದೇ ಅಪಾಯ ಎದುರಾಗದಂತೆ ಮುನ್ನೇಚ್ಚರಿಕೆ ಕ್ರಮವಾಗಿ ನೋಟಿಸ್ ನೀಡಿದ್ದೇವೆ ಅಷ್ಟೇ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ.

ಆದರೆ ನಮಗೆ ಯಾವುದೇ ಪೂರ್ವ ವ್ಯವಸ್ಥೆ ಮಾಡಿಕೊಡದೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ನಾವು ಮನೆಗಳನ್ನು ಖಾಲಿ ಮಾಡಿ ಎಲ್ಲಿಗೆ ಹೋಗೋದು, ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ, ಸಿಕ್ಕರೂ ಅತ್ಯಂತ ದುಬಾರಿ ಬಾಡಿಗೆ ಇದೆ. ನಾವು ಇಲ್ಲಿಯೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಸಾಧ್ಯವಾದರೆ ಮತ್ತೆ ಪರಿಹಾರ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ ಕೃಷ್ಣ ಜನ್ಮಾಷ್ಟಮಿಯ ಈ ದಿನದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9663218892,  ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9663218892 call/ whatsapp/ mail raghavendrastrology@gmail.com ಮೇಷ ರಾಶಿ ಬಿಡುವಿಲ್ಲದ ಕೆಲಸಗಳ…

  • ಸಾಧನೆ, ಸ್ಪೂರ್ತಿ

    ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ.

    ರಾಯಚೂರಿನ ವೆಂಕಟೇಶ್, ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು. ಇಂದು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ್, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ…

  • ವಿಚಿತ್ರ ಆದರೂ ಸತ್ಯ

    ನೆರೆಹೊರೆಯ ಜಗಳದಲ್ಲಿ ಜೈಲು ಪಾರಾದ ನಾಯಿ..!ತಿಳಿಯಲು ಈ ಲೇಖನ ಓದಿ…

    ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.

  • ಸುದ್ದಿ

    ನಗರಕ್ಕೆ ಬಂದಿದೆ ಲೂಸಿಯಾ ಮಾತ್ರೆ! ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್​​!!

    ಸ್ಯಾಂಡಲವುಡ್​ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….

  • ಸೌಂದರ್ಯ

    ವಯಸ್ಸು 50 ವರ್ಷವಾದರೂ, 20 ವರ್ಷದ ಹುಡುಗನಂತೆ ಕಾಣಿಸುತ್ತಾನೆ..!ತಿಳಿಯಲು ಈ ಲೇಖನ ಓದಿ..

    ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.

  • ಸುದ್ದಿ

    ಧೋನಿ ದಾಖಲೆಯನ್ನು ಮುರಿಯಲಿದ್ದಾರೆ ‘ಹಿಟ್ ಮ್ಯಾನ್’ ರೋಹಿತ್ ಶರ್ಮ…!

    ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು. ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ…