ಸುದ್ದಿ

ಫ್ರೆಂಡ್​ಶಿಪ್ ಡೇಗೆ ಸ್ನೇಹಿತರೊಂದಿಗೆ ಪವರ್ ​ಸ್ಟಾರ್ ಪುನೀತ್ ಜಾಲಿ ಟ್ರಿಪ್…!

38

ಪವರ್​ ಫುಲ್ ಆ್ಯಕ್ಟಿಂಗ್, ಪವರ್ ಫುಲ್ ಡ್ಯಾನ್ಸ್, ಪವರ್ ಫುಲ್ ವಾಯ್ಸ್, ಫುಲ್ ಪವರ್​ನಲ್ಲೇ ಆ್ಯಕ್ಷನ್. ಪವರ್​ ಸ್ಟಾರ್ ಎನ್ನಲು ಇನ್ನೇನು ಬೇಕು ಅಲ್ಲವೇ, ಹೌದು ಕನ್ನಡದ ‘ರಾಜರತ್ನ’ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹೋದಲ್ಲಿ ಬಂದಲ್ಲಿ ಗೆಳೆಯರಿರುವುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ.

ಅದರಲ್ಲೂ ಬಿಡುವು ಸಿಕ್ಕಾಗೆಲ್ಲಾ ಅಪ್ಪು ಗೆಳೆಯರೊಂದಿಗೆ ಟ್ರಿಪ್ ಹೋಗುತ್ತಾರೆ ಎಂಬ ಮಾತಿದೆ. ಹಾಗಿದ್ರೆ ಸ್ನೇಹಿತರ ದಿನ ಬುಟ್​ ಬಿಡ್ತಾರಾ ಇಲ್ಲ ಎಂಬುದಕ್ಕೆ ನಟ ಪುನೀತ್ ರಾಜ್​ಕುಮಾರ್ ಅವರು ಹಾಕಿರುವ ಈ ವಿಡಿಯೋ ಸಾಕ್ಷಿ. ಫ್ರೆಂಡ್​ಶಿಪ್ ದಿನವಾದ ಭಾನುವಾರ ಪ್ರೇಮಿಗಳ ಪಾಲಿನ ಸ್ವರ್ಗದಂತಿರೋ ‘ನಂದಿಬೆಟ್ಟ’ಕ್ಕೆ ಅಪ್ಪು ಅ್ಯಂಡ್ ಟೀಮ್ ಭೇಟಿ ಕೊಟ್ಟಿದೆ. ‘ಯುವರತ್ನ’ ಚಿತ್ತೀಕರಣದಿಂದ ಬಿಡುವು ಮಾಡಿಕೊಂಡಿರುವ ಅಪ್ಪು ತಮ್ಮದೇ ಕಾರಿನಲ್ಲಿ ಫುಲ್ ಜೋಷ್​ನಲ್ಲೇ ಜಾಲಿ ರೈಡ್ ಹೋಗಿದ್ದಾರೆ.

ಇಬ್ಬರು ಗೆಳೆಯರೊಂದಿಗೆ ಮಿನಿ ಕೂಪರ್​ನಲ್ಲಿನ ಒಂದು ಸುಂದರ ಪ್ರಯಾಣದ ವಿಡಿಯೋ ತುಣುಕನ್ನು ಅಪ್ಪು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಕೃತಿ ರಮಣೀಯ ತಾಣಗಳಲ್ಲಿನ ಸುತ್ತಾಟದ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಕರುನಾಡ ‘ಯುವರತ್ನ’ನಿಗೆ ಅಭಿಮಾನಿಗಳು ಗೆಳೆಯರ ದಿನದ ಶುಭಾಶಯ ತಿಳಿಸಿದ್ದಾರೆ.

ಸದ್ಯ ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಅಪ್ಪು ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿ ಅಪ್ಪು ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್​ ಆನಂದ್​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಸಾಯೆಷಾ ಸೈಗಲ್ ಬಣ್ಣ ಹಚ್ಚುತ್ತಿದ್ದಾರೆ. ಹಾಗೆಯೇ ಚಿತ್ರದ ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್, ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ