ಸುದ್ದಿ

ಕಾಡಿನ ನಾಶವಾಗುತ್ತಿರುವ ಹಿನ್ನೆಲೆ ಬಗ್ಗೆ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದೇನು..?

121

ನೀರಿನ  ಸಂರಕ್ಷಣೆಗಾಗಿ ನ್ಯೂಸ್ ​18 ಹಮ್ಮಿಕೊಂಡಿರುವ  #Mission Paani ಆಂದೋಲನ  ಸಾಕಷ್ಟು ಪರಿಣಾಮಕಾರಿಯಾಗಿದೆ. ಇಶಾ ಫೌಂಡೇಶನ್​ ಸಂಸ್ಥಾಪಕ ಸದ್ಗುರು ನೀರಿನ ಸಂರಕ್ಷಣೆ ಕುರಿತು ನ್ಯೂಸ್​ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀರನ್ನು ಸಂರಕ್ಷಿಸುವುದು ಹೇಗೆ? ಬರಗಾಲದಿಂದ ತತ್ತರಿಸಿ ಹೋಗಿರುವ ಭೂಮಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಿನ ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು.

ತಮಿಳುನಾಡಿನಲ್ಲಿ ಈ ವರ್ಷ ಬರಗಾಲ ಸೃಷ್ಟಿಯಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. 2016ರಲ್ಲಿಯೂ ಸಹ ತಮಿಳುನಾಡಿನಲ್ಲಿ ಬರಗಾಲ ಬಂದಿತ್ತು. ಇದು ಹೀಗೆಯೇ ಮುಂದುವರೆದರೆ ನಮ್ಮ ವಿನಾಶ ನಿಶ್ಚಿತ. ಹಾಗಾಗಿ ನೀರನ್ನು ಉಳಿಸುವ ಕೆಲವೊಂದು ಕಾರ್ಯಗಳನ್ನು ಮಾಡಬೇಕಿದೆ ಎಂದರು.

ಮಳೆ ನೀರು ಕೊಯ್ಲು: ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದೆ. ನದಿ, ಕೊಳ, ಕೆರೆ, ಬಾವಿಯ ನೀರನ್ನು ಸಂರಕ್ಷಿಸುವುದರ ಜೊತೆಗೆ ಮುಖ್ಯವಾಗಿ ನೀರಿನ ಮೂಲವಾದ ಮಳೆ ನೀರನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಳೆನೀರು ಕೊಯ್ಲು ಮೂಲಕ ಮಳೆ ನೀರನ್ನು ವರ್ಷಪೂರ್ತಿ ನಮ್ಮ ಬಳಕೆಗೆ ಹಿಡಿದಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಸದ್ಗುರು ಅವರು ಮಾತನಾಡುತ್ತಾ ತಮಿಳಿನ ಗಾದೆಯೊಂದನ್ನು ಹೇಳಿದರು. ‘ಕಾವೇರಿ ನಡೆದುಕೊಂಡು ಬಂದರೆ ಮಾತ್ರ ಅವಳು ಅದೃಷ್ಟಲಕ್ಷ್ಮಿ. ಅವಳೇನಾದರೂ ಧಾವಿಸಿ ಬಂದರೆ ಭದ್ರಕಾಳಿ’ ಎಂದು ಹೇಳಿದರು. ಕಾಡು ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು.

 ರಾಷ್ಟ್ರ ರಾಜಧಾನಿಯಲ್ಲೇ ನೀರಿನ ಬವಣೆ ಹೆಚ್ಚು; ಬಡವರ ಗೋಳು ಕೇಳುವವರಿಲ್ಲ, ನೀರಿನ ಕೊರತೆ ಬೇಸಿಗೆಯಲ್ಲಿ ಮಾತ್ರ ಗಮನಹರಿಸಬೇಕಾದ ವಿಷಯವಲ್ಲ. ಮಳೆಗಾಲದಲ್ಲಿಯೇ ಹರಿದು ಹೋಗುವ ನೀರನ್ನು ಸಂರಕ್ಷಿಸಿ, ಮುಂದಿನ ದಿನಗಳಿಗೆ ಹಿಡಿದಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇದಕ್ಕೆ ಚೆನ್ನೈ ನಗರವನ್ನು ಉದಾಹರಣೆಯನ್ನಾಗಿ ನೀಡಿದ ಅವರು, ಒಂದಾನೊಂದು ಕಾಲದಲ್ಲಿ ಚೆನ್ನೈನಲ್ಲಿ 1500 ಕೆರೆಗಳಿದ್ದವು. ಆದರೆ ಈಗ ಒಂದು ಕೆರೆಯೂ ಸಹ ಇಲ್ಲ. ಇದಕ್ಕೆ ಕಾರಣ ಕೆರೆಗಳಿದ್ದ ಜಾಗದಲ್ಲಿ ನಗರಗಳನ್ನು ನಿರ್ಮಿಸಿರುವುದು ಎಂದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.

  • ಜ್ಯೋತಿಷ್ಯ

    ತುಂಬಾ ಅದೃಷ್ಟವಂತರಾಗಿರುತ್ತಾರೆ ಇಂಥ ಹುಡುಗಿಯರು!ಇವರು ಮನೆಗೆ ಬಂದ್ರೆ ಬದಲಾಗುತ್ತೆ ಅದೃಷ್ಟ…

    ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ ಭಿನ್ನ ಗುಣಗಳನ್ನು ಹೊಂದಿರುತ್ತಾಳೆ. ಶಾಸ್ತ್ರಗಳ ಪ್ರಕಾರ ಕೆಲ ಮುಖ್ಯ ಗುಣಗಳನ್ನು ಹೊಂದಿರುವ ಹುಡುಗಿಯರನ್ನು ಕಣ್ಣು ಮುಚ್ಚಿಕೊಂಡು ಮದುವೆಯಾಗಬಹುದು. ಅವ್ರು ಇಡೀ ಕುಟುಂಬದ ಯಶಸ್ಸಿಗೆ ಕಾರಣವಾಗ್ತಾರೆ. ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಅನುಸರಿಸುವ, ಅದಕ್ಕೆ ಮಹತ್ವ ನೀಡುವ ಹುಡುಗಿಯರನ್ನು ಮದುವೆಯಾಗಿ ಬಂದ್ರೆ ಕುಟುಂಬದಲ್ಲಿ ಸಂತೋಷ ಮನೆ ಮಾಡಿರಲಿದೆ. ಕುಟುಂಬದ ಯಶಸ್ಸಿಗೆ…

  • ಸೌಂದರ್ಯ

    ಮೊಣಕೈ ಕಪ್ಪು ಕಲೆ ಹೋಗಲಾಡಿಸಲು ಏನು ಮಾಡಬೇಕು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ.

  • ರಾಜಕೀಯ

    ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ  ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು 24 ಗಂಟೆಗಳಲ್ಲಿಯೇ ಎರಡನೇ ಪಟ್ಬಿ ಬಿಡುಗಡೆ ಮಾಡಿದೆ. ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌, ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್‌, ಗುರಮಿಠಕಲ್-‌ ಲಲಿತಾ ಅನಾಪುರ್‌, ಬೀದರ್-‌ ಈಶ್ವರ್‌ ಸಿಂಗ್‌ ಠಾಕೂರ್‌, ಭಾಲ್ಕಿ- ಪ್ರಕಾಶ್‌ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ-…

  • ಆಧ್ಯಾತ್ಮ

    ಬ್ರಹ್ಮ ಬರೆದ ಹಣೆಯ ಬರಹವನ್ನು ಬದಲಾಯಿಸುವ ಮಾಹಾ ಮಂತ್ರವಿದು.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಕಮಲಾಸನ ಪಾಣಿನಂ ಲಾಲಾಟೆ…