ಸುದ್ದಿ

‘ಗುರು ಪೂರ್ಣಿಮೆ’ಯ ವಿಷೆಶತೆ ಏನು ಗೊತ್ತಾ…?

262

ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂದು ಕರೆಯಲ್ಪಡುವ ಆಶಾಢ ಮಾಸದ ಹುಣ್ಣಿಮೆಯೊಂದಿಗೆ ದಕ್ಷಿಣಾಯಣ ಪ್ರಾರಂಭವಾಗುತ್ತದೆ. ಆಶಾಢ ತಿಂಗಳ ಶುಕ್ಲ ಹುಣ್ಣಿಮೆಯನ್ನು ಗುರುಗಳಿಗೆ ಗೌರವ ರೂಪದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಗುರು ಪೂರ್ಣಿಮಾ ಜುಲೈ 16 ರಂದು ಅಂದರೆ ಮಂಗಳವಾರ ಬಂದಿದೆ. ಗುರುವನ್ನು ಯಾವಾಗಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ಪರಿಗಣಿಸಲಾಗುತ್ತದೆ.

ಈ ಹಬ್ಬವನ್ನು ವೇದ ಮಹರ್ಷಿಗೆ ಅರ್ಪಿಸಲಾಗುತ್ತದೆ. ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ಪಠಿಸುವ ವೇದ ವ್ಯಾಸ್ ಜಿ ಅವರನ್ನು ಮಾನವಕುಲದ ಮೂಲ ಗುರು ಎಂದು ಪರಿಗಣಿಸಲಾಗುತ್ತದೆ.

ವೇದ ಮಹರ್ಷಿ ಕ್ರಿ.ಪೂ 3000 ರಲ್ಲಿ ಆಶಾದ್ ಹುಣ್ಣಿಮೆಯಂದು ಜನಿಸಿದರು. ಅವರ ಗೌರವಾರ್ಥವಾಗಿ, ಪ್ರತಿವರ್ಷ ಆಶಾಢ ಶುಕ್ಲ ಪೂರ್ಣಿಮವನ್ನು ಗುರು ಹುಣ್ಣಿಮೆಯೆಂದು ಆಚರಿಸಲಾಗುತ್ತದೆ. ಇದೇ ದಿನ ವೇದವ್ಯಾಸರು ಬ್ರಹ್ಮಸೂತ್ರ ಬರೆಯಲು ಪ್ರಾರಂಭಿಸಿದ್ದು ಮತ್ತು ಏಕಲವ್ಯ ತಮ್ಮ ಗುರುಗಳೆಂದು ನಂಬಿದ್ದ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನ್ನು ನೀಡಿದ್ದು.

ಗುರು ಪೂರ್ಣಿಮೆ ದಿನದಂದು ಅನೇಕ ಜನರು ತಮ್ಮ ದೈವಾಧಿನರಾದ ಗುರು ಅಥವಾ ಬ್ರಾಹ್ಮಣ ಸಂತರ ಪುಣ್ಯಭೂಮಿ, ಪಾದುಕೆಗೆ ಧೂಪ, ದೀಪ, ಹೂವು, ಚಂದನ, ನೈವೇದ್ಯ ಇತ್ಯಾದಿಗಳಿಂದ ವಿಧಿವತ್ತಾಗಿ ಪೂಜಿಸುತ್ತಾರೆ. ಗುರುವನ್ನು ಬ್ರಹ್ಮನಿಗೆ ಹೋಲಿಸಲಾಗುತ್ತೆ.

ಬ್ರಹ್ಮನು ಒಂದು ಜೀವಿಯನ್ನು ಸೃಷ್ಟಿಸಿದ್ರೆ, ಅದೇ ರೀತಿ ಗುರು ತನ್ನ ಶಿಷ್ಯನನ್ನು ತಿದ್ದಿ ಒಬ್ಬ ಸಜ್ಜನನಾಗಿ ಮಾಡುತ್ತಾನೆ. ನಮ್ಮಲ್ಲಿನ ಅಜ್ಞಾನವನ್ನು ಹೋಗಲಾಡಿಸುವ ಗುರುವಿಗೆ ತಂದೆ-ತಾಯಿರಷ್ಟೇ ಪವಿತ್ರ ಸ್ಥಾನ ನೀಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ