ಸುದ್ದಿ

ಶೀಘ್ರವೇ ಸುಮಲತಾ ಕುರಿತಂತೆ ವಿಡಿಯೋ ಸಿಡಿ ರಿಲೀಸ್ ಮಾಡುವುದಾಗಿ JDS ಶಾಸಕನಿಂದ ಹೊಸ ಬಾಂಬ್!ಆ ವಿಡಿಯೋದಲ್ಲಿ ಇರೋದು ಏನು?ಈ ಸುದ್ದಿ ನೋಡಿ…

234

ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಜೆಡಿಎಸ್ ಮುಖಂಡ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಿಡಿ ತಮ್ಮ ಬಳಿ ಇದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಪುಟ್ಟರಾಜು ಅವರು, ‘ಖಾಸಗಿ ಹೋಟೆಲ್​​ವೊಂದರಲ್ಲಿ ಸುಮಲತಾ ಈಗಾಗಲೇ ಬಿಜೆಪಿ ಜತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಸೇರಲು ಕೇಂದ್ರ ಸಚಿವ ಸ್ಥಾನವೂ ಬೇಡಿಕೆ ಇಟ್ಟಿದ್ದಾರೆ. ಈ ವಿಡಿಯೋ ಸಿಡಿ ಕೆಲವೇ  ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇನೆ. ಸುಮಲತಾ ಅವರು ಬಿಜೆಪಿ ಸೇರಲಿದ್ದಾರೆ. ಈ ಬಗ್ಗೆ ಖಾಸಗಿ ಹೋಟೆಲ್ ​​ನಲ್ಲಿ ಮಾತುಕತೆ ನಡೆಸಿರುವ ವಿಡಿಯೋ ನನ್ನ ಬಳಿಯಿದೆ. ಶೀಘ್ರದಲ್ಲಿಯೇ ಅದನ್ನು ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸುಮಲತಾರನ್ನು ಬೆಂಬ​ಲಿಸಿ ಎಂದು ಹೇಳಿದ್ದರು. ಈ ಹೇಳಿಕೆ ಬಳಿಕವೂ ಸುಮಲತಾ ಅವರು ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಹರಿದಾಡಿದ್ದವು.

ಆದರೆ  ಇದ್ಯಾವುದಕ್ಕೂ ಕ್ಯಾರೇ ಎನ್ನದ ಬಂಡಾಯ ಕಾಂಗ್ರೆಸ್​​ ನಾಯಕರು ಸುಮಲತಾ ಪರ ಕೆಲಸ ಮಾಡುತ್ತಲೇ ಇದ್ದಾರೆ. ಇದರಿಂದ ಬೇಸತ್ತ ದಿನೇಶ್​​ ಗುಂಡೂರಾವ್​ ಅವರೇ ಖುದ್ದು, ಪಕ್ಷ ವಿರೋಧಿ ಚಟು​ವ​ಟಿಕೆ ನಡೆ​ಸಿ​ದ ಐವರನ್ನು ಕಾಂಗ್ರೆಸ್​​ನಿಂದ ಉಚ್ಚಾ​ಟಿ​ಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್ ಗೆದ್ದ ಮೇಲೆ ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. 

ಈ ಹಿಂದೆಯೇ ಮಂಡ್ಯದ ಶಂಕರನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನಾನು ಈ ಮೊದಲೇ ಸ್ಪಷ್ಟಪಡಿಸಿದ್ದೀನಿ. ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧಿಗಳು ದಿನಾ ಒಂದೊಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದು ದಿನ ಬಿಜೆಪಿ ಅಭ್ಯರ್ಥಿ, ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಅಂದರು. ಬೇಕಾದರೆ ಜೆಡಿಎಸ್ ಅಭ್ಯರ್ಥಿ ಎಂದೂ ಹೇಳುತ್ತಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ನನಗೆ ಯಾರು ಸಪೋರ್ಟ್ ಮಾಡುತ್ತಾರೋ ಅವರು ಯಾವುದೇ ಷರತ್ತು ಹಾಕದೆ ಬೆಂಬಲ ನೀಡುತ್ತಿದ್ದಾರೆ. ಗೆದ್ದರೆ ನನ್ನ ಕ್ಷೇತ್ರದ ಜನ ಯಾವ ಪಕ್ಷಕ್ಕೆ ಬೆಂಬಲ ನೀಡಿ ಎಂದು ಹೇಳುತ್ತಾರೆಯೋ ಅವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕರಬೂಜ ಹಣ್ಣು ತಿನ್ನೋದ್ರಿಂದ ,ಆಗುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಕರಬೂಜ ಹಣ್ಣಿಗೆ ತನ್ನದೇ ಆದ ಸುಗಂಧವಿದೆ. ತನ್ನದೇ ರುಚಿಯೆದೆ. ಕಳಿತ ಹಣ್ಣು ಮೃದುವಾಗಿರುತ್ತದೆ. ಈ ಹಣ್ಣಿಗೆ ಇಂಗ್ಲಿಷ್ ಹೆಸರು ಮಸ್ಕ್ ಮಿಲನ್, ಸಸ್ಯಶಾಸ್ತ್ರೀಯವಾಗಿ ‘ ಕುಕ್ಕುಮೀಸ್ ಮೆಲೊ’ ಎನ್ನುತ್ತಾರೆ.

  • ಕರ್ನಾಟಕ

    ಇಂದು ವೈದ್ಯರ ಮುಷ್ಕರ, ರೋಗಿಗಳ ಪರದಾಟ..!ತಿಳಿಯಲು ಇದನ್ನು ಓದಿ..

    ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶ ಕೈಬಿಡುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 8ರ
    ವರೆಗೆ 24 ತಾಸು ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿವೆ.

  • inspirational

    ರೈತರ ಬೆಳೆ‌ ಸಮಿಕ್ಷೆ ನೊಂದಣಿ ದಿನಾಂಕ ವಿಸ್ತರಣೆ

    ಬೆಂಗಳೂರು: ಅಗಷ್ಟ್  ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ 24  ತನಕ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕೃಷಿ ಬೆಳೆ ಸಮೀಕ್ಷೆ ಕುರಿತಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಒಂದು ತಿಂಗಳು ಅವಧಿ ವಿಸ್ತರಿಸುವ ತೀರ್ಮಾನ ಕೈಗೊಂಡಿದೆ. ಬೆಳೆ ಸಮೀಕ್ಷೆ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು .  .ಕಳೆದ ವರ್ಷ ಕೇವಲ 3,500 ಮಂದಿ ರೈತರು ಮಾತ್ರ ನೋಂದಣಿ ಮಾಡಿದ್ದರು, ಈ ವರ್ಷ ಅಲ್ಪ ಅವಧಿಯಲ್ಲೇ…

  • ಸಂಬಂಧ

    ಮೊದಲ ಬಾರಿಗೆ ಹುಡುಗ ಹುಡುಗಿಯ ಕೈ ಹಿಡಿದ್ರೆ :ಆಕೆಯ ಮನಸ್ಸು ಏನನ್ನುತ್ತೆ?ತಿಳಿಯಲು ಈ ಲೇಖನ ಓದಿ..

    ಪ್ರೀತಿಸುವ ಹುಡುಗ ಹುಡುಗಿಯ ಕೈಯನ್ನು ತನ್ನ ಕೈಗಳಲ್ಲಿ ಬಂಧಿಸಿದಾಗ ಉಂಟಾಗುವ ಅನುಭವವೇ ಮಧುರವಾಗಿರುತ್ತದೆ. ಆ ಒಂದು ಹಿಡಿತದಲ್ಲಿ ಹುಡುಗನ ಹೃದಯದ ಮಾತು ಅರ್ಥವಾಗುತ್ತದೆ. ಪ್ರೀತಿಯ ಮಹತ್ವ ಏನು ಎಂಬುದು ಆ ಹಿಡಿತವು ತಿಳಿಸುತ್ತದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದೊಂದಿಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 30 ಜನವರಿ, 2019 ನಿಮ್ಮ ಪ್ರಮುಖ ಆತಂಕ ಮತ್ತು ಒತ್ತಡದ ಒಂದು ಕಾರಣವೆಂದರೆ ಕೆಲವೊಮ್ಮೆಯಾದರೂ ನೀವು…

  • ಸುದ್ದಿ

    ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕಾಗಿ ಬೈಕ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು…!

    ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. 6 ಬಾರಿ ಶಾಸಕರಾಗಿರುವ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬೈಕ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ತಿಪ್ಪಾರೆಡ್ಡಿ ಅಭಿಮಾನಿ ಮಧು ಎಂಬುವವರ ಸ್ಕೂಟಿ ಟೈಯರ್​ಗೆ ಬೆಂಕಿ ಹಚ್ಚಲು ಪೊಲೀಸರು ಬಿಡದ ಕಾರಣ,…