ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮಾತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಧಾನ ಹೊರಹಾಕಿದ್ದ ಶಾಸಕರಿಗೆ ಸಚಿ ಸ್ಥಾನ ಕೊಡುವುದಾಗಿ ಮೈತ್ರಿ ಸರ್ಕಾರ ಭರವಸೆ ನೀಡಿದ್ದು ಅದರಂತೆ ಈಗ ಸಚಿವ ಸಂಪುಟದ ವಿಸ್ತರಣೆ ಶುರುವಾಗಿದೆ.

ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯಂತೆಯೇ ಡಿಸೆಂಬರ್ 22 ರಂದು ಅಂದರೇ ಇಂದು ಸಂಪುಟ ವಿಸ್ತರಣೆಯಾಗಲಿದೆ, ಇಬ್ಬರು ಹಾಲಿ ಸಚಿವರಿಗೆ ಕೊಕ್ ನೀಡಿದ್ದು, 8 ಮಂದಿ ನೂತನ ಸಚಿವರಾಗಿ ಇಂದು ಸಂಜೆ 5.30 ಕ್ಕೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆಯಲ್ಲಿ ಉತ್ತರ ಕರ್ನಾಟಕದ ರಮೇಶ್ ಜಾರಕಿಹೊಳಿ ಅವರಿಗೆ ಕೊಕ್ ಕೊಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಅದೇ ರೀತಿ ಅರಣ್ಯ ಸಚಿವ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈಬಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಮೇಶ್ ಜಾರಕಿಹೊಳಿ ಮತ್ತು ಆರ್.ಶಂಕರ್ ಅವರನ್ನು ಕೈಬಿಟ್ಟು ಸತೀಶ್ ಜಾರಕಿಹೊಳಿ, ಎಂಎಲ್ ಸಿ ಆರ್.ಬಿ.ತಿಮ್ಮಾಪುರ್, ಸಿಎಸ್ ಶಿವಳ್ಳಿ, ಎಂಟಿಬಿ ನಾಗರಾಜ್, ಪಿಟಿ ಪರಮೇಶ್ವರ್ ನಾಯ್ಕ್, ಎಂಬಿ ಪಾಟೀಲ್, ರಹೀಂ ಖಾನ್, ತುಕಾರಾಂ ಸೇರಿದಂತೆ ಎಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನೂ ಸಮ್ಮಿಶ್ರ ಸರ್ಕಾರ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೂ ಮುಂದಾಗಿದೆ. ಮಾಜಿ ಸಿಎಂ ಧರಂ ಸಿಂಗ್ ಪುತ್ರ ಅಜಯ್ ಸಿಂಗ್, ದೆಹಲಿಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಲವಿದ್ದಾರೆ, ವಿ. ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…
ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ. ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ…
ಜನರ ತೆರಿಗೆ ಹೊರೆ ತಪ್ಪಿಸಲು ಗ್ರಾಹಕರ ಉತ್ಪನ್ನಗಳು ಹಾಗೂ ದಿನ ಬಳಕೆ ವಸ್ತುಗಳ ಮೇಲಿನ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟ) ಕಡಿಮೆ ಮಾಡಿರುವ ಕೇಂದ್ರ ಸರ್ಕಾರ ಈಗ ವಾಷಿಂಗ್‍ಮೆಷಿನ್, ಫ್ರಿಜ್‍ನಂಥ ಗೃಹೋಪಯೋಗಿ ಸಾಧನಗಳ ಸುಂಕ ಕಡಿಮೆ ಮಾಡಲು ಚಿಂತನೆ ನಡೆಸಿದೆ.
ಗತಿಸಿದ ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಈ ಮಾಸಾಂತ್ಯದವರೆಗೆ ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಪಿತೃಪಕ್ಷದ ಪರಂಪರೆ ನಡೆದುಕೊಂಡು ಬಂದಿದೆ. ಮಹಾಭಾರತದಲ್ಲಿ ತನ್ನ ಕರ್ಣಕುಂಡಲವನ್ನು ಕೊಟ್ಟು ಮರಣವನ್ನಪ್ಪಿದ ಕರ್ಣ, ಸ್ವರ್ಗ ಲೋಕಕ್ಕೆ ಹೋದ ವೇಳೆ ಆಹಾರವಾಗಿ ವಜ್ರ, ವೈಢೂರ್ಯಗಳನ್ನು ನೀಡಲಾಗುತ್ತದೆ. ಆಗ ಕರ್ಣ ಈ ಕುರಿತು ಪ್ರಶ್ನಿಸಿದಾಗ, ಹಿರಿಯರಿಗೆ ಶ್ರಾದ್ದ ಮಾಡದ ಹಿನ್ನಲೆಯಲ್ಲಿ ಕರ್ಣ ಮಾಡಿದ ದಾನಕ್ಕೆ ಅನುಸಾರವಾಗಿ ಇದನ್ನು ನೀಡಲಾಗುತ್ತದೆ ಎನ್ನಲಾಗುತ್ತದೆ….
ಈ ಸಾಮಾಜಿಕ ಯುಗದಲ್ಲಿ PAN CARD ಬಳಸದೆ ಇರುವ ವ್ಯಕ್ತಿಯನ್ನು ಹುಡುಕಲು ಕಷ್ಟ ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಮತ್ತು ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number (PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ. ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೀಗಾಗಿ, ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಇ-ಪ್ಯಾನ್…
ಜಗತ್ತಿನ ದೇವರುಗಳಿಗಿಂತ ಭಾರತೀಯ ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಒಟ್ಟು ಸುಮಾರು 54 ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುಳ್ಳ ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಂಗತಿ.