ಸುದ್ದಿ

ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!

38

ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ! ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು.

ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್ ಬಂದಿರಲಿಲ್ಲ. ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹಲವರನ್ನು ವಿಚಾರಿಸಿದರೂ ಸುರೇಶ್ ಅವರ ಸುಳಿವು ಸಿಕ್ಕಿರಲಿಲ್ಲ. ಕೂಡಲೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಸುರೇಶ್ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.

ಇದಾಗಿ ಮೂರು ವರ್ಷಗಳ ನಂತರ ಜಯಪ್ರಧಾ ಅವರ ಸಂಬಂಧಿಯೊಬ್ಬರು ಟಿಕ್ ಟಾಕ್ ವಿಡೀಯೋ ನೋಡುತ್ತಿದ್ದಾಗ, ಜಯಪ್ರಧಅ ಅವರ ಪತಿ ಸುರೇಶ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರನ್ನು ಅವರು ಕಂಡರು. ಕೂಡಲೇ ಈ ಬಗ್ಗೆ ಜಯಪ್ರಧಾ ಅವರಿಗೆ ತಿಳಿಸಿದಾಗ ಜಯಪ್ರಧಾ ವಿಡಿಯೋವನ್ನು ನೋಡಿ ಅವರು ಸುರೇಶ್ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಿಲ್ಲುಪುರಂ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದರು. ಈ ವಿಡಿಯೋ ಮುಲಕ ಪೊಲೀಸರು ಸುರೇಶ್ ನನ್ನು ಪಯ್ತೆ ಮಾಡಲು ಸಮರ್ಥರಾದರು.

ಕೆಲವು ಕೌಟುಂಬಿಕ ಕಾರಣಗಳಿಂದ ಬೇಸರಗೊಂಡು ಹೊಸೂರಿನ ತಮ್ಮ ತಾಯಿಯ ಮನೆಯಲ್ಲಿ ಸುರೇಶ್ ವಾಸವಿದ್ದರು ಎಂಬುದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿತ್ತು. ನಂತರ ಪತ್ನಿ ಮತ್ತು ಮಕ್ಕಳ ಜೊತೆ ವಾಸವಿರಲು ಸುರೇಶ್ ಒಪ್ಪಿದ ಕಾರಣ ಅವರನ್ನು ವಿಲ್ಲುಪುರಂ ಗೆ ಕಳಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕ್ರೀಡೆ

    RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ..!

    ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದು ಆದರೆ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿರುವ ಆರ್‍ಸಿಬಿಗೆ ಶಾಕಿಂಗ್ ಸುದ್ದಿ ಲಭಿಸಿದೆ. 360 ಡಿಗ್ರಿ ಶಾಟ್ ಖ್ಯಾತಿಯ ಎಬಿ ಡಿವಿಲಿಯರ್ಸ್ ಪಾಕಿಸ್ತಾನದ ಸೂಪರ್ ಲೀಗ್‍ನಲ್ಲಿ ಕಳೆದ 2 ದಿನಗಳ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಎಬಿಡಿ ಐಪಿಎಲ್ ವೇಳೆಗೆ ಫಿಟ್ ಆಗುತ್ತಾರ ಎಂಬ ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದೆ. ಐಪಿಎಲ್ ಆರಂಭಕ್ಕೆ ಇನ್ನು 3 ವಾರಗಳಷ್ಟೇ…

  • ವಿಚಿತ್ರ ಆದರೂ ಸತ್ಯ

    ನೆರೆಹೊರೆಯ ಜಗಳದಲ್ಲಿ ಜೈಲು ಪಾರಾದ ನಾಯಿ..!ತಿಳಿಯಲು ಈ ಲೇಖನ ಓದಿ…

    ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.

  • ಸಿನಿಮಾ

    ನವರಸನಾಯಕನ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ!ಕಾರಣ ಏನು ಗೊತ್ತಾ?

    ಕನ್ನಡ ಚಿತ್ರ ರಂಗದ ನವರಸನಾಯಕ ನಟ ಮತ್ತು ರಾಜಕಾರಣಿ ಜಗ್ಗೇಶ್’ರವರು ಮಾಡಿದ ಒಂದು ಟ್ವೀಟ್ ಕಾರಣದಿಂದಾಗಿ ವಿವಾದದಲ್ಲಿ ಸಿಲುಕಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ದಿನ ನಿತ್ಯ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..!ತಿಳಿಯಲು ಈ ಮಾಹಿತಿಯನ್ನು ನೋಡಿ…

    ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್‌ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ…

  • ಸುದ್ದಿ

    ಭಾರತದ ಸೋಲಿನ ರಹಸ್ಯ ಬಯಲು…!

    ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೋಲು ಕಂಡಿದೆ. ವಿಶ್ವಕಪ್ ನಲ್ಲಿ ಸತತ ಗೆಲುವಿನೊಂದಿಗೆ ಮುನ್ನಡೆದಿದ್ದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದ್ದು, ಈ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಸೋತಿದೆ. ಸೋಲಿನ ಕಾರಣ ಕುರಿತಾಗಿ ಭಾರಿ ಚರ್ಚೆಗಳು ನಡೆದಿವೆ. ಹೀಗಿರುವಾಗ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾರತದ ಸೋಲಿಗೆ ಜೆರ್ಸಿ ಕಾರಣ ಎಂದು ಹೇಳಿದ್ದಾರೆ. ಟೀಂ ಇಂಡಿಯಾ ಆಟಗಾರರು ಕೇಸರಿ ಜೆರ್ಸಿ ಧರಿಸಿ ಆಟವಾಡಿದ್ದು, ಸೋಲಿಗೆ…