ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ.
ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ ಭಕ್ತಾದಿಗಳಿಗೆ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ.ಈ ವರ್ಷ ಮತ್ತೆ ಆ ವಿಶೇಷ ಅವಧಿ ಬಂದಿದೆ. ಜುಲೈ 1ರ ಸೋಮವಾರದಿಂದ 48 ದಿನಗಳ ಕಾಲ ಅಂದರೆ ಆಗಸ್ಟ್ 17ರವರೆಗೆ ಭಕ್ತಾದಿಗಳಿಗೆ ದರ್ಶನದ ಅವಕಾಶ ಸಿಗಲಿದೆ. ಪ್ರತಿ ದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಬಹುದು.
ಮೊದಲ 40 ದಿನಗಳ ಕಾಲ ಅಂದರೆ ಜುಲೈ 1ರಿಂದ ಆಗಸ್ಟ್ 9ರವರೆಗೆ ಮಲಗಿಸಿದ ರೀತಿಯಲ್ಲಿ ದೇವರ ವಿಗ್ರಹವನ್ನು ಇರಿಸಲಾಗುತ್ತದೆ. ಬಳಿಕ ಕೊನೆಯ ಎಂಟು ದಿನಗಳು ಆಗಸ್ಟ್ 10ರಿಂದ 17ರವರೆಗೆ ನಿಂತಿರುವ ಭಂಗಿಯಲ್ಲಿ ವಿಗ್ರಹವನ್ನು ನಿಲ್ಲಿಸಲಾಗುತ್ತದೆ.
ಹಿನ್ನೆಲೆ ಏನು?
16ನೇ ಶತಮಾನದಲ್ಲಿ ಶ್ರೀ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಅಥಿ ವರದಾರ್ ಮೂರ್ತಿಗೆ ಮೂಜೆ ಮಾಡಲಾಗುತಿತ್ತು. ಆಗ ದೇವಸ್ಥಾನದ ಮೇಲೆ ದಾಳಿ ನಡೆದಾಗ ದೇವಿಯ ವಿಗ್ರಹವನ್ನು ದೇಗುಲದ ಕಲ್ಯಾಣಿಯಲ್ಲಿ ಬಚ್ಚಿಡಲಾಗಿತ್ತು. ಆದರೆ ದಾಳಿಯ ಬಳಿಕ ಬಂದ ದೇವಸ್ಥಾನದ ಸಿಬ್ಬಂದಿಗೆ ಅಥಿ ವರದಾರ್ ದೇವರ ಮೂಲ ವಿಗ್ರಹ ಎಲ್ಲಿದೆ ಎನ್ನುವ ವಿಚಾರ ತಿಳಿದಿರಲಿಲ್ಲ. ಆ ನಂತರ ಅಥಿ ವರದಾರ್ ದೇವರ ಇನ್ನೊಂದು ವಿಗ್ರಹ ಮಾಡಿಸಿ ಪೂಜೆ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು.
ಆದರೆ 40 ವರ್ಷದ ಬಳಿಕ 17ಂ9ರಲ್ಲಿ ದೇವಸ್ಥಾನದ ಕಲ್ಯಾಣಿ ಕಾರಣಾಂತರಗಳಿಂದ ಖಾಲಿಯಾಗಿತ್ತು. ಆ ವೇಳೆ ಕಲ್ಯಾಣಿಯಲ್ಲಿ ಬಚ್ಚಿಟ್ಟಿದ್ದ ಅಥಿ ವರದಾರ್ ದೇವರ ಮೂಲ ವಿಗ್ರಹ ಪತ್ತೆಯಾಗಿತ್ತು. ಆ ಬಳಿಕ 40 ವರ್ಷಕ್ಕೊಮ್ಮೆ 48 ದಿನಗಳ ಕಾಲ ದೇವಿಯನ್ನು ನೀರಿನಿಂದ ಹೊರತೆಗೆದು ಪೂಜಿಸುವ ಸಂಪ್ರದಾಯ ಹುಟ್ಟಿಕೊಂಡಿತು.
ಸದ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂರು ತಾತ್ಕಾಲಿಕ ಬಸ್ ನಿಲ್ದಾಣವನ್ನು ಪಟ್ಟಣದ ಹೊರಗಡೆ ನಿರ್ಮಿಸಲಾಗಿದೆ. ಹಾಗೆಯೇ ಕಾರುಗಳು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಅಷ್ಟೇ ಅಲ್ಲದೆ ಭಕ್ತಾದಿಗಳನ್ನು ಶ್ರೀ ವರದರಾಜ ಪೆರುಮಾಳ್ ದೇವಸ್ಥಾನಕ್ಕೆ ಕರೆತರಲು ದೋಣಿಯ ವ್ಯವಸ್ಥೆ ಕೂಡ ಇದೆ ಎಂದು ದೇವಾಲಯದ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಎಲ್ಲರಿಗೂ ಅವರ ಜೀವನದಲ್ಲಿ ಅವರದೇ ಆದ ಕೆಲವು ಬಿಟ್ಟುಕೊಡದ ರಹಸ್ಯಗಳಿರುತ್ತವೆ. ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು ಇಟ್ಟುಕೊಂಡಿರುತ್ತಾರೆ. ತಮ್ಮ ಪರಮಾಪ್ತರಲ್ಲಿ ಕೂಡ ಕೆಲವೊಂದನ್ನು ಹಂಚಿಕೊಳ್ಳುತ್ತಾರಷ್ಟೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಕೊನೆ ಬಡ್ಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವರ ಪಿಯೂಶ್ ಗೋಯಲ್ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ. ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ…
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ದರ ಮತ್ತು ಉತ್ತಮ ಫೀಚರ್ಸ್ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ ಕಂಪೆನಿ ಸೆಪ್ಟೆಂಬರ್ನಲ್ಲಿ ಮತ್ತೊಂದು ಹೊಸ ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಲಿದೆ. ಶಿಯೋಮಿ ಮಿಕ್ಸ್ ಸಿರೀಸ್ನ ಈ ನೂತನ ಸ್ಮಾರ್ಟ್ಫೋನ್ಗೆ ಮಿ ಮಿಕ್ಸ್ 4 ಎಂದು ಹೆಸರಿಡಲಾಗಿದೆ. ಇವೆಲ್ಲಕ್ಕಿಂತ ಈ ಹೊಸ ಫೋನ್ ಎಲ್ಲರ ಗಮನ ಸೆಳೆಯುತ್ತಿರುವುದು ನೂತನ ಮೊಬೈಲ್ಗೆ ನೀಡಲಾಗಿರುವ ಕ್ಯಾಮೆರಾ. ಹೌದು, ಮಿ ಮಿಕ್ಸ್ 4ನಲ್ಲಿ 108 ಮೆಗಾಪಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆಯಂತೆ. ಚೀನಾದ ವೆಬ್‍ಸೈಟ್ ವೀಬೊದಲ್ಲಿ ನೀಡಿರುವ ಮಾಹಿತಿಯ ಪ್ರಕಾರ,…
ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ. ಈಗ…
ರೇಲ್ವೆ ಪ್ರಯಾಣ ಎಂದರೆ ಎಂತಹವರಿಗೂ ಒಂದು ರೀತಿ ರೋಮಾಂಚನ.ಅದರಲ್ಲೂ ಬೆಟ್ಟ ಗುಡ್ಡಗಳ ನಡುವೆ,ದಟ್ಟವಾದ ಕಾಡುಗಳ ನಡುವೆ ಹೊರಟಾಗ ರೈಲಿನ ಕಿಟಕಿಯಿಂದ,ಬಾಗಿಲಿನಲ್ಲಿ ಕುಳಿತು ಆ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಎಂತಹವರಿಗೂ ಮೈ ಮನ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ನಮ್ಮ ದೇಹದ ಸೂಕ್ಷ್ಮ ಭಾಗವಾಗಿರುವ ಕಣ್ಣಿನ ಬಗೆಗಿನ ಈ 10 ವಿಷಯಗಳು ನಮ್ಮ ಕಣ್ಣನ್ನ ನಾವೇ ನಂಬದ ಹಾಗೆ ಮಾಡ್ತವೆ