ಸುದ್ದಿ

ಮದುವೆಯಾಗೋಲ್ಲ ಎಂದ ಪ್ರಿಯತಮನ ವಿರುದ್ಧ ಕ್ರೂರವಾಗಿ ಸೇಡು ತೀರಿಸಿಕೊಂಡ ಯುವತಿ…!

68

ನವದೆಹಲಿ: ಈ ಯುವಕ-ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅದೇನಾಯಿಯೋ ಯುವಕ ಮದುವೆಯಾಗಲು ನಿರಾಕರಿಸಿದ. ನಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವತಿ ಬಳಿ ಹೇಳಿದ. ಅದನ್ನು ಕೇಳಿದ ಯುವತಿ ಅಳಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಬದಲಿಗೆ ಕ್ರೂರವಾಗಿ ಸೇಡು ತೀರಿಸಿಕೊಂಡಳು.

ಘಟನೆ ನಡೆದಿದ್ದು ದೆಹಲಿಯ ವಿಕಾಸಪುರಿಯಲ್ಲಿ. ಜೂನ್​ 11ರಂದು ಬೈಕ್​ನಲ್ಲಿ ಹೋಗುತ್ತಿದ್ದರು. ಯುವಕ ಅದಾಗಲೇ ಮದುವೆ ಬೇಡ ಎಂದಿದ್ದ. ಬೈಕ್​ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಆತನ ಬಳಿ ಹೆಲ್ಮೆಟ್​ ತೆಗೆಯುವಂತೆ ಕೇಳಿದ್ದಾಳೆ. ಆತ ತೆಗೆದಕೂಡಲೇ ಮುಖಕ್ಕೆ ಆ್ಯಸಿಡ್​ ಎರಚಿದ್ದಾಳೆ. ಯುವಕನ ಮುಖ ಪೂರ್ತಿಯಾಗಿ ಸುಟ್ಟುಹೋಗಿದೆ. ಅಲ್ಲದೆ ಈ ಹುಡುಗಿಯ ಕೈಯ್ಯಿಗೂ ಸುಟ್ಟಗಾಯಗಳಾಗಿವೆ.

ಅದಾದ ಬಳಿಕ ಸ್ಥಳದಲ್ಲಿ ಇದ್ದವರು ಯಾರೋ ಪೊಲೀಸರಿಗೆ ಕರೆ ಮಾಡಿ, ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ಆ್ಯಸಿಡ್​ ದಾಳಿಯಾಗಿದೆ ಎಂದು ವಿಷಯ ತಿಳಿಸಿದ್ದಾರೆ. ಪೊಲೀಸರು ಕೂಡ ಮೊದಲು ಬೇರೆ ಯಾರೋ ಇವರಿಬ್ಬರ ಮೇಲೆ ಆ್ಯಸಿಡ್​ ಹಾಕಿದ್ದಾರೆ ಎಂದುಕೊಂಡಿದ್ದರು.

ಆದರೆ ಆ ಯುವಕ ತನ್ನ ಬಳಿ ಯುವತಿ ಹೆಲ್ಮೆಟ್​ ತೆಗೆಯುವಂತೆ ಹೇಳಿದ್ದಳು ಎಂದು ಹೇಳಿಕೆ ನೀಡಿದ ಬಳಿಕ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಂತರ ಆ ಯುವತಿ ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪರ್ಸ್​ನಲ್ಲಿ ಆ್ಯಸಿಡ್​ ಬಾಟಲಿಯನ್ನು ಅಡಗಿಸಿ ಇಟ್ಟುಕೊಂಡು ಯುವಕನ ಮುಖಕ್ಕೆ ಎರಚಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಕೊಲೆಸ್ಟ್ರಾಲ್ ನಿಯಂತ್ರಿಸವುದು, ಇದರಿಂದ ತುಂಬಾ ಸುಲಭ..!ತಿಳಿಯಲು ಈ ಲೇಖನ ಓದಿ…

    ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ.

  • ವಿಸ್ಮಯ ಜಗತ್ತು

    ಮನಷ್ಯ ಪ್ರಾಣಿ ಮಾಡದ ಕೆಲಸವನ್ನು,10 ವರ್ಷದಿಂದ ಈ ಪ್ರಾಣಿ ಮಾಡಿದೆ..!

    ನಾವು ಮನುಷ್ಯರು ತಾವು ವಾಸವಿರುವ ಮನೆಯನ್ನೇ ಸ್ವಚ್ಚವಾಗಿಡುವುದಕ್ಕೆ, ಸೋಮಾರಿತನ ತೋರುತ್ತಾರೆ. ಇನ್ನು ಅಕ್ಕ ಪಕ್ಕದ ಜಾಗ ಅಥವಾ ಬೇರೆ ಜಾಗಗಳನ್ನು ಸ್ವಚ್ಚವಾಗಿದುವುದರ ಬಗ್ಗೆ ಯೋಚಿಸೋದು ತಂಬಾ ದೂರ ಬಿಡಿ.

  • ದೇಶ-ವಿದೇಶ, ವಿಸ್ಮಯ ಜಗತ್ತು

    ಮಹಿಳೆಯರಿಗೆ ವಾಸಿಸಲು ಅತ್ಯಂತ ಕಷ್ಟಕರವಾದ ದೇಶಗಳು ಯಾವುದು ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ಇದು ಬಹುಶಃ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ ದಾಳಿಯನ್ನು (Acid Attack )ಹೊಂದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ನ್ಯಾಯವನ್ನು ಪಡೆಯುವುದಿಲ್ಲ .ಈ ದೇಶದಲ್ಲಿ 2015 ರಲ್ಲಿ ಸುಮಾರು 45,000 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

  • ರಾಜಕೀಯ

    20ಕ್ಕೂ ಅಧಿಕ ಕೈ ಶಾಸಕರಿಂದ ಬಿಎಸ್‍ವೈಗೆ ಕರೆ!

    ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು,ಮಾಜಿ ಸಿಎಂ ಯಡಿಯೂರಪ್ಪ ಹೇಳಿದಂತೆ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಅಲ್ಲದೆ ಕಾಂಗ್ರೆಸ್ 4 ಕ್ಷೇತ್ರದಲ್ಲಿ ಲೀಡ್‍ನಲ್ಲಿದ್ದರೆ, ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಇತ್ತ ಒಟ್ಟಾರೆಯಾಗಿ ಬಿಜೆಪಿ 340 ಕ್ಷೇತ್ರದಲ್ಲಿ ಲೀಡ್‍ನಲ್ಲಿ ಇದೆ. ದೇಶದ ಬಹುತೇಕ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿಯಾಗಿ ಬಹುಮತ ಪಡೆಯುವ ಮೂಲಕ ಮುನ್ನಡೆ ಸಾಧಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲು ರೆಡಿಯಾಗುತ್ತಿದ್ದಾರ ಎನ್ನುವ ಪ್ರಶ್ನೆ…

  • ಸುದ್ದಿ

    ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 500 ಕೆ ಜಿ ಧಾರವಾಡ ಪೇಡಾ!

    ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ….