ಸುದ್ದಿ

ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ಸುಮಲತಾ ಅವರ ಮುಂದಿನ ಪ್ಲಾನ್ ಏನು?

23

ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ.

200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ ಮಾಡುವಾಗ ಬಹುತೇಕ ಎಲ್ಲ ಹಳ್ಳಿಗಳಿಗೂ ದರ್ಶನ್ ಮತ್ತು ಯಶ್ ಹೋಗಿದ್ದರು. ಈಗ ಮತ್ತೊಮ್ಮೆ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲು ನಿರ್ಧರಿಸಿದ್ದಾರೆ. ಮಂಡ್ಯ ಜಿಲ್ಲೆಯ 8 ವಿಧಾನಸಭೆಯ ಸುಮಾರು 200 ಹಳ್ಳಿಗಳಿಗೆ ದರ್ಶನ್-ಯಶ್ ಮತ್ತು ಸುಮಲತಾ ಭೇಟಿ ನೀಡಿ ಕೃತಜ್ಞತೆ ಸಲ್ಲಿಸುವ ಯೋಜನೆ ಹಾಕಿಕೊಂಡಿದ್ದಾರಂತೆ.

ನಾವು ಮಂಡ್ಯದಲ್ಲೇ ಇರುತ್ತೇವೆ ಗೆದ್ದು ಸಂಭ್ರಮಿಸಿ ಸುಮ್ಮನಾಗದ ಸುಮಲತಾ ಮತ್ತು ಜೋಡೆತ್ತುಗಳು, ಮಂಡ್ಯ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಲು ಮುಂದಾಗಿದ್ದಾರೆ. ‘ನಾವು ಮಂಡ್ಯದಲ್ಲೇ ಇರುತ್ತೇವೆ, ಮಂಡ್ಯ ಜನರ ಜೊತೆಯಲ್ಲೇ ಇರುತ್ತೇವೆ. ಮಂಡ್ಯ ಅಭಿವೃದ್ದಿಗಾಗಿ ನಾವು ಇರುತ್ತೇವೆ’ ಎಂದು ಸಾರಲು ವಿಜಯಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯಿಂದ ಸುಮಲತಾ ಅವರಿಗೆ ಮತ್ತಷ್ಟು ಜನಬೆಂಬಲ ಸಿಗುವುದು ಪಕ್ಕಾ.

ಯಾವ ಪಕ್ಷಕ್ಕೂ ಹೋಗಲ್ಲ ಅಂಬಿ ಪತ್ನಿ ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಗೆದ್ದ ಬಳಿಕ ಸುಮಲತಾ ಬಿಜೆಪಿಗೆ ಹೋಗ್ತಾರೆ ಎನ್ನಲಾಗುತ್ತಿತ್ತು. ಅದೇ ರೀತಿ ಮಂಡ್ಯದ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಸುಮಲತಾ ಗೆಲುವಿಗೆ ಶ್ರಮಿಸಿದ್ದರು. ನಂತರ ಕಾಂಗ್ರೆಸ್ ಗೆ ಸುಮಲತಾ ಅವರನ್ನ ಕರೆತರುವ ಪ್ರಯತ್ನ ಸಾಗುತ್ತಿದೆ ಎಂಬ ಮಾತು ಚರ್ಚೆಯಾಯಿತು. ಈ ನಡುವೆ ಯಾವ ಪಕ್ಷಕ್ಕೂ ಹೋಗದಿರಲು ಸುಮಲತಾ ನಿರ್ಧರಿಸಿದ್ದಾರಂತೆ. ‘ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದು, ಹಾಗೆ ಕೆಲಸ ಮಾಡುತ್ತೇನೆ’ ಎಂಬ ಮಾತು ಹೇಳಿದ್ದಾರಂತೆ.

ಸುಮಲತಾ ಪ್ಲಾನ್ ಏನು? ಯಾವುದೇ ರಾಜಕೀಯ ಪಕ್ಷದ ಮುಖ ನೋಡಿ ಸುಮಲತಾಗೆ ಮಂಡ್ಯ ಜನ ವೋಟ್ ಹಾಕಿಲ್ಲ. ಅಂಬರೀಶ್ ಪತ್ನಿ, ಪಕ್ಷೇತರ ಅಭ್ಯರ್ಥಿ ಎಂದು ಗೆಲ್ಲಿಸಿದ್ದಾರೆ. ಈಗ ಯಾವುದಾದರೂ ಪಕ್ಷಕ್ಕೆ ಹೋದರೇ ಮುಂದಿನ ದಿನದಲ್ಲಿ ಕಷ್ಟವಾಗುತ್ತೆ. ಹಾಗಾಗಿ, ಪಕ್ಷೇತರವಾಗಿ ಉಳಿದು, ಜೋಡೆತ್ತುಗಳ ಜೊತೆಯಲ್ಲಿ ಮಂಡ್ಯ ಸಂಸದೆಯಾಗಿ ಮುಂದುವರಿಯಲು ಸುಮಲತಾ ಪ್ಲಾನ್ ಮಾಡಿದ್ದಾರೆ. ಇದನ್ನ ಮತ್ತೊಮ್ಮೆ ಮಂಡ್ಯ ಜನರಿಗೆ ಸಾರಿ ಹೇಳಲು ವಿಜಯಯಾತ್ರೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ರಾಕಿಂಗ್ ಸ್ಟಾರ್ ಮತ್ತು ಆಕ್ಷನ್ ಪ್ರಿನ್ಸ್ ಗೇ ಖಡಕ್ ವಾರ್ನಿಂಗ್ ಕೊಟ್ಟಿದ್ದ ರೆಬೆಲ್ ಸ್ಟಾರ್!ಏನು ಗೊತ್ತಾ?

    ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್‍ವುಡ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು.ಯಶ್ ‘ಕೆಜಿಎಫ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆಗ ಅಂಬರೀಶ್ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಶ್ ವಾರ್ನ್ ಮಾಡಿದ್ದರು. ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು. ಆದರೆ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಶ್‍ಗೆ ಬೇಜಾರಾಗಿ ಹೋದಲ್ಲಿ ಬಂದಲ್ಲಿ ಯಶ್‍ಗೆ…

  • ಆರೋಗ್ಯ

    ಈ ಹಣ್ಣು ಯಾವುದು? ತಿಂದರೆ ಏನಾಗುತ್ತೆ? ಈ ಉಪಯುಕ್ತ ಮಾಹಿತಿ ನೋಡಿ.

    ನಿಮ್ಮಲ್ಲಿ ಬಹಳಷ್ಟು ಜನ ಈ ಹಣ್ಣನ್ನ ತಿಂದೇ ಇರುವುದಿಲ್ಲ. ಇನ್ನೂ ಕೆಲವರು ಈ ಹಣ್ಣನ್ನು ತಿಂದರೂ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದಿಲ್ಲ.  ಈ ಹಣ್ಣನ್ನ ಸ್ಟಾರ್ ಫ್ರೂಟ್ ಅಂತ ಕರೆಯುತ್ತಾರೆ. ಈ ಹಣ್ಣು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಸಿಗುವುದಿಲ್ಲ. ಈ ಹಣ್ಣು ನಮ್ಮ ದೇಶದೇ ಆದರೂ ಸಹ ಕೇವಲ ಕೆಲವು ಊರುಗಳಲ್ಲಿ ಮಾತ್ರ ಈ ಹಣ್ಣನ್ನ ಬೆಳೆಯುತ್ತಾರೆ. ಇನ್ನೂ ನಮ್ಮ ದೇಶದಿಂದ ಬೇರೆ ದೇಶಗಳಿಗೆ ಈ ಹಣ್ಣು ಎಕ್ಸ್ಪೋರ್ಟ್ ಕೂಡ ಆಗುತ್ತದೆ. ಈ ಸ್ಟಾರ್ ಫ್ರೂಟ್ ಅನ್ನ…

  • ಸೌಂದರ್ಯ

    ಜಿಡ್ಡು ಮುಖ(ಆಯಿಲ್ ಪೇಸ್ )ಇರುವವರು ಫ್ರೇಶ್ ಆಗಿ ಕಾಣಲು ಇಲ್ಲಿದೆ ಪರಿಹಾರ..! ಈ ಲೇಖನ ಓದಿ…….

    ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು. ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.

  • ಸುದ್ದಿ

    8 ತಿಂಗಳ ಗರ್ಭಿಣಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ರೆಕಾರ್ಡ, ಜಾಲತಾಣದಲ್ಲಿ ವೈರಲ್.!

    ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದ ಬಹಳ ಮಹತ್ವದ ಘಟ್ಟ ಎನ್ನುತ್ತಾರೆ. ಈ ಸಮಯದಲ್ಲಿ ತಾಯಿ ತನ್ನ ಮಗುವಿನ ಬೆಳವಣಿಗೆಗಾಗಿ ಬಹಳ ಜಾಗರೂಕಳಾಗಿರಬೇಕು. ಹೆಚ್ಚು ಕಷ್ಟವಾಗುವ ಕೆಲಸಗಳನ್ನು ಮಾಡಬಾರದು. ಆದರೆ ಇಲ್ಲೊಬ್ಬರು ಮಹಿಳೆ ತಾವು 8ನೇ ತಿಂಗಳ ಗರ್ಭವತಿಯಾಗಿರುವಾಗ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಮುನ್ನವೇ  ಮಾಡಲಾಗಿದ್ದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ. ಚೂಡಾಮಣಿ ಪತಿ ಸಾಫ್ಟ್‍ವೇರ್ ಎಂಜಿನಿಯರ್. ಪತ್ನಿಗೆ ಅವರ ಸಂಪೂರ್ಣ ಸಹಕಾರ ಇದೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು…

  • ಸುದ್ದಿ

    ಬೆತ್ತಲೆ ಫೋಟೋ ಅಪ್ಲೋಡ್ ಮಾಡಿ ತನ್ನ ಹುಟ್ಟು ಹಬ್ಬವನ್ನು ಸಂಬ್ರಮಿಸಿದ ನಟಿ…!

    ವಾಷಿಂಗ್ಟನ್: ಸಾಮಾನ್ಯವಾಗಿ ಸೆಲಬ್ರೆಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಆದರೆ ಹಾಲಿವುಡ್‍ನ ಖ್ಯಾತ ನಟಿ, ಗಾಯಕಿ ತನ್ನ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಜನ್ಮದಿನವನ್ನು ಸಂಭ್ರಮಿಸಿದ್ದಾರೆ. ಹಾಲಿವುಡ್‍ನ ಮೀನ್ ಗಲ್ರ್ಸ್, ಫ್ರೀಕಿ ಫ್ರೈಡೇ ಸಿನಿಮಾದ ನಟಿ ಲಿಂಡ್ಸೆ ಲೋಹನ್ ಜುಲೈ 2ರಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಡ್ಸೆ ಕನ್ನಡಿಯ ಮುಂದೆ ಬೆತ್ತಲಾಗಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಲಿಂಡ್ಸೆ ಆಭರಣಗಳನ್ನು ಹೊರತಾಗಿ ಏನನ್ನೂ ಧರಿಸಿಲ್ಲ. ಹುಟ್ಟುಹಬ್ಬ ಆಚರಣೆಗೂ 2 ನಿಮಿಷ ಮುನ್ನ…

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…