ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವುದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವುದು. ನೀರು ಸರಬರಾಜು ಪೈಪುಗಳ ದುರಸ್ಥಿ-ಬದಲಾವಣೆ ಕಾಮಗಾರಿಗಳು ಮತ್ತು ಅತ್ಯವಶ್ಯಕತೆಯಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಹಾಗೂ ಪಂಪು ಮೋಟಾರ್ ಅಳವಡಿಸುವ ಕಾಮಗಾರಿಗಳನ್ನು ಮಾತ್ರ ಈ ಅನುದಾನದಡಿ ಕೈಗೆತ್ತಿಕೊಳ್ಳಲು ಹಾಗೂ ಅನುಮೋದನೆ ನೀಡಿರುವ ಅನುದಾನವನ್ನು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶಗಳಿಗೆ ಬಳಸಬಹುದಾಗಿದೆ.

ಇತರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಕಾಮಗಾರಿಗಳಿಗೆ ಅವಶ್ಯಕವಿರುವ ಪಂಪು, ಮೋಟಾರ್, ಪೈಪ್ಲೈನ್ ಮತ್ತು ಇತರೆ ಸಲಕರಣೆಗಳ ಸಂಗ್ರಹಣೆಯನ್ನು ನಿಯಮಾನುಸಾರ ಕೆಟಿಪಿಪಿ ಕಾಯಿದೆ 1999 ಮತ್ತು ನಿಯಮಗಳು 2000 ರನ್ವಯ ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

40 ಕೋಟಿ ರೂ. ಬಿಡುಗಡೆ ಮಾಡಲಾದ ಅನುದಾನವನ್ನು ಜಿಲ್ಲಾಧಿಕಾರಿಗಳು ತಮ್ಮ ಖಾತೆಯಲ್ಲಿ ಅನವಶ್ಯಕವಾಗಿ ಜಮಾಗೊಳಿಸಬಾರದು. ಖಜಾನೆಯಿಂದ ಹಣ ಪಡೆದು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಬಳಸಬೇಕು. ಹಾಗೂ ಅನುದಾನ ಬಳಕೆ ಸಂಬಂಧ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿ, ಅನುದಾನ ಬಳಕೆ ಬಗ್ಗೆ ಖಚಿತಪಡಿಸಬೇಕು ಎಂದು ಆದೇಶಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ-ಚೀನಾ ಗಡಿ ವಿವಾದದಲ್ಲಿ 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆ ರೋಣ ಪಟ್ಟಣದ ಯುವಕನೊರ್ವ ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಪಟ್ಟಣದ ಬಸವರಾಜ ಗೋಮಾಡಿ, ಬಸವರಾಜ್ ಯಶ್ ಎಂಬ ಹೆಸರಿನಿಂದ ಪೋಸ್ಟ್ ಹರಿಬಿಟ್ಟಿದ್ದಾನೆ. ಕರ್ನಾಟಕದ ಅದರಲ್ಲೂ ಶಾಂತಿನಾಡು ಗದಗ ಜಿಲ್ಲೆಯ ಯುವಕ ಚೀನಾ ಸೈನಿಕರಿಗೆ ಸಪೋರ್ಟ್ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ. ‘ಹೆಚ್ಚೆಚ್ಚು ಭಾರತೀಯ ಸೈನಿಕರನ್ನು ಚೀನಾದವರು ಕೊಲ್ಲಲಿ ಈ ದರಿದ್ರ…
ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಅಲ್ಲಿ ಫ್ಯಾನ್ಸ್ ಜೊತೆ ನಿರಂತ ಟಚ್ನಲ್ಲಿರುತ್ತಾರೆ. ಸುದೀಪ್ ತಮ್ಮ ಸಿನಿಮಾಗಳ ಮಾಹಿತಿಗಳ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡೋದೆ ಎಲ್ಲಾ ಅಲ್ಲೆ. ಇದೀಗ ಕಿಚ್ಚ ಪೋಸ್ಟ್ ಮಾಡಿರುವ ಎರಡು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.ಯಾಕಂದ್ರೆ ಈ ಟ್ವೀಟ್ನಲ್ಲಿ ಖಡಕ್ ಆಗಿ ಒಂದು ಸಾಲನ್ನು ಪೋಸ್ಟ್ ಮಾಡುವ ಮೂಲಕ ಯಾರಿಗೋ ಸರಿಯಾಗಿ ಟಾಂಗ್ ಕೊಟ್ಟಹಾಗೆ ಇದೆ. ಸಾಮಾನ್ಯವಾಗಿ ಸಿನಿಮಾಗಳ ವಿಚಾರವನ್ನು ಮಾತ್ರ ಟ್ವೀಟ್ ಮಾಡೋ ಕಿಚ್ಚನ…
ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ. ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್…
ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ…
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿ ಈಗ ಮುಗಿದಿರುವ ವಿಷಯ ನಮಗೆಲ್ಲರಿಗೂ ತಿಳಿದಿದೆ. ಆದರೆ ಈಗ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆ ಅವರು ತೆಲುಗು ನಟನನ್ನು ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ . ಅನುಷಾ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನುಷಾ ‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟನ…