ಸುದ್ದಿ

ಕೊಡಗಿನಲ್ಲಿ ಕಂಪಿಸಿದ ಭೂಮಿ, ಜಲ ಪ್ರಳಯಕ್ಕೆ ಸಿಲುಕಿದ ಜನರು…!

196

ಮಡಿಕೇರಿ, ಮೇ 26: ಕೊಡಗಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ (ಮಡಿಕೇರಿ ಭಾಗ) ಭೂಮಿ ಕಂಪಿಸಿದ ಅನುಭವವಾಗಿತ್ತು. ಜತೆಗೆ ನಿಗೂಢ ಶಬ್ದ ಕಿವಿಗೆ ಬಡಿದಿತ್ತು. ಅದಾದ ಬಳಿಕ ಆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಏನಾಯಿತು ಎಂಬುದು ಎಲ್ಲರ ಮುಂದಿದೆ. ಈ ಬಾರಿ ಮತ್ತೆ ಭೂಮಿ ಕಂಪಿಸಿದ್ದು, ಅದು ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿನತ್ತ ವರ್ಗಾವಣೆಗೊಂಡಿದೆ. ಇದು ಭಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ, ಜಲಪ್ರಳಯವಾಗಿ ಭಾರೀ ಅನಾಹುತ ಸಂಭವಿಸಿತ್ತು. ಆದರೆ ದಕ್ಷಿಣ ಕೊಡಗಿನಲ್ಲಿ ಪ್ರವಾಹ ಬಂದಿತ್ತಾದರೂ ಭೂಕುಸಿತದಂತಹ ಪ್ರಕರಣ ನಡೆದಿರಲಿಲ್ಲ.

ಆದರೆ, ಇದೀಗ ದಕ್ಷಿಣ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅದು ಕೂಡ ಭಾರೀ ಮಳೆಯೊಂದಿಗೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಕಡೆ ಕಂಪಿಸಿದೆ. ಜತೆಗೆ ಭೂಮಿ ಒಳಗೆ ಏನೋ ಓಡಾಡಿದ ಅನುಭವವಾಗಿದೆ. ಭೂಮಿ ಕಂಪಿಸಿದ ಅನುಭವವಾದ ಬಗ್ಗೆ ಜನರು ಹೇಳಿದ್ದರಿಂದ ಜಿಲ್ಲಾ ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಭೇಟಿ ನೀಡಿ, ಕೆಲವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಯಾವಾಗ ದಕ್ಷಿಣ ಕೊಡಗಿನಲ್ಲಿ ಭೂಮಿ ಕಂಪಿಸಿದ ಬಗ್ಗೆ ಸುದ್ದಿ ಹರಿದಾಡಲು ಆರಂಭವಾಯಿತೋ ಜನರಲ್ಲಿ ಭಯವಂತೂ ಆರಂಭವಾಗಿದೆ. ಈಗಾಗಲೇ ಜಿಲ್ಲಾಡಳಿತ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಬೇಕಾದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಒಂದು ವೇಳೆ ಪ್ರವಾಹ ಭೂಕುಸಿದಂತಹ ದುರಂತಗಳು ನಡೆದರೆ ಏನು ಮಾಡಬೇಕು? ತುರ್ತು ರೀತಿಯ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು? ಮುಂತಾದವುಗಳ ಬಗ್ಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನು ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ೪೧೨ ಕುಟುಂಬಗಳು ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದು ಅವರಿಗೆ ಇನ್ನೂ ಸೂರು ಸಿಕ್ಕಿಲ್ಲ. ಇಂತಹ ಕುಟುಂಬಗಳು ಇದುವರೆಗೆ ಬಾಡಿಗೆ ಹಣವಾಗಿ ಒಟ್ಟು 2,91,90,000 ರೂ.ಗಳನ್ನು ಜಿಲ್ಲಾಡಳಿತ ಪಾವತಿ ಮಾಡಿದೆ. ಸಂತ್ರಸ್ತ ಕುಟುಂಬಗಳಿಗೆ ಕಳೆದ ನವೆಂಬರ್ ತಿಂಗಳಿನಿಂದ ಪ್ರತಿ ತಿಂಗಳಿಗೆ 10 ಸಾವಿರ ರೂ.ಗಳಂತೆ ಖಾತೆಗಳಿಗೆ ಬಾಡಿಗೆ ಹಣವನ್ನು ಸಂದಾಯ ಮಾಡಲಾಗುತ್ತಿದೆ.
ಮಡಿಕೇರಿ ನಗರಸಭೆ ವ್ಯಾಪ್ತಿಯ 93 ಕುಟುಂಬ ಗಳಿಗೆ, ಕೆದಕಲು ಗ್ರಾ.ಪಂ. ವ್ಯಾಪ್ತಿಯ 5 ಕುಟುಂಬ, ಮಾದಾಪುರ ಗ್ರಾ.ಪಂ. ವ್ಯಾಪ್ತಿಯ 44 ಕುಟುಂಬಗಳು, ಗರ್ವಾಲೆ ಗ್ರಾಮ ಪಂಚಾಯಿತಿಯ 9 ಕುಟುಂಬಗಳು, ಕಂಬಿಬಾಣೆ ಪಂಚಾಯಿತಿಯ 4 ಕುಟುಂಬಗಳು, ಕೂಡಿಗೆ ಪಂಚಾಯಿತಿಯ 3, ಕೂಡುಮಂಗಳೂರು ಪಂಚಾಯಿತಿಯ 3, ನಂಜರಾಯಪಟ್ಟಣ ಪಂಚಾಯಿತಿಯ 1, ಕಿರಗಂದೂರು ಪಂಚಾಯಿತಿಯ 5, ಬೇಲೂರು ಪಂಚಾಯಿತಿಯ 5, ಐಗೂರು ಪಂಚಾಯಿತಿಯ 1, ನೇರುಗಲಳೆ ಪಂಚಾಯಿತಿಯ 2, ಚೌಡ್ಲು ಪಂಚಾಯ್ತಿಯ 1, ಹಾನಗಲ್ಲು ಪಂಚಾಯಿತಿಯ 5, ಶಾಂತಳ್ಳಿ ಪಂಚಾಯಿತಿಯ 2, ತೋಳೂರು ಶೆಟ್ಟಳ್ಳಿ ಪಂಚಾಯಿತಿಯ 1, ಬೆಟ್ಟದಳ್ಳಿ ಪಂಚಾಯಿತಿ 1, ಕುಶಾಲನಗರ ಪಟ್ಟಣ ಪಂಚಾಯಿತಿಯ 14 ಕುಟುಂಬಗಳಿಗೆ ಬಾಡಿಗೆ ಹಣವನ್ನು ಪಾವತಿ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ