ಸುದ್ದಿ

ವೀರ ಯೋಧ ಅಭಿನಂದನ್ ಅವರ ತಂದೆ ತಾಯಿಗಳನ್ನು ಕಂಡ ಜನ ಮಾಡಿದ್ದೇನು ಗೊತ್ತಾ?ಎಷ್ಟು ಗಂಟೆಗೆ ಭಾರತಕ್ಕೆ ಬರ್ತಾರೆ ಗೊತ್ತಾ?

150

ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಮೃತಸರದ ವಾಘಾ ಗಡಿಗೆ ತೆರಳಿದ್ದಾರೆ.

ಹೆಮ್ಮೆಯ ಪುತ್ರ ಅಭಿನಂದನ್ ಬರುತ್ತಿರುವ ಮಾಹಿತಿ ತಿಳಿದ ತಕ್ಷಣ ಅವರ ತಂದೆ ನಿವೃತ್ತ ಏರ್‍ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್ ಮತ್ತು ತಾಯಿ ಶೋಭಾ ವರ್ಥಮಾನ್ ಅವರು ಗುರುವಾರ ರಾತ್ರಿ ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು.

ಅಭಿನಂದನ್ ಪೋಷಕರು ವಿಮಾನದ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅದರೊಳಗಿದ್ದ ಸಹ ಪ್ರಯಾಣಿಕರು ಹರ್ಷೋದ್ಗಾರ ಕೂಗಿದ್ದು, ಅಲ್ಲದೇ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬರಮಾಡಿಕೊಂಡಿದ್ದರು. ಮಧ್ಯರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಏರ್ ಪೋರ್ಟ್ ನಲ್ಲಿಯೂ ಕೂಡ ಸೇನೆಯವರು ಅವರನ್ನು ಗೌರವದಿಂದ ಸ್ವಾಗತಿಸಿದ್ದಾರೆ.

ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ. ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಆಗಿದ್ದು, ತಾಯಿ ಶೋಭಾ ವರ್ಥಮಾನ್ ವೈದ್ಯರಾಗಿದ್ದಾರೆ. ಪೋಷಕರು ದೆಹಲಿಗೆ ಬಂದು ಇಳಿದ ಕೂಡಲೇ ಅಮೃತಸರಕ್ಕೆ ತೆರಳಿದ್ದಾರೆ.

ಪಾಕಿಸ್ತಾನವು ವಾಘಾ ಗಡಿಯಲ್ಲಿ ಇಂದು ಮಧ್ಯಾಹ್ನದ ಬಳಿಕ 4ರ ಸುಮಾರಿಗೆ ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯರ ಸಂಭ್ರಮ ಮುಗಿಲುಮುಟ್ಟಿದೆ. ಅಲ್ಲದೇ ವಾಘಾ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯ ಸೈನಿಕ ಅಭಿಯನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports

    2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

    2ನೇ ಟೆಸ್ಟ್ ಪಂದ್ಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ.  ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ  ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…

    Loading

  • ಸ್ಪೂರ್ತಿ

    ಈ ಮಹಾನುಭಾವ ಏನ್ ಮಾಡ್ತಾ ಇದ್ದಾರೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನೀವು ಹಲವು ರೀತಿಯ ಸಾಮಾಜಿಕ ಕಾರ್ಯ ಮಾಡುವವರನ್ನು ನೋಡಿರುತ್ತೀರ ಹಾಗು ಅವರ ಬಗ್ಗೆ ಕೇಳಿರುತ್ತೀರ. ಅದೇ ರೀತಿಯಲ್ಲಿ ನಾವು ನಿಮ್ಮನ್ನು ಒಬ್ಬ ಉದ್ಯಮಿ ಬಡ ಹೆಣ್ಣು ಮಕ್ಕಳಿಗಾಗಿ ತಾನು ಮಾಡಿರುವಂತ ಸಾಮಾಜಿಕ ಕಾರ್ಯದ ಬಗ್ಗೆ ತಿಳಿಸಿ ಕೊಡುತ್ತೇವೆ ನೋಡಿ. ಹೆಸರು ಮಹೇಶ್ ಸಾವನಿ ಇವರು ಮೂಲತಃ ಗುಜರಾತ್ ನವರು ಇವರು ಒಬ್ಬ ವಜ್ರದ ವ್ಯಾಪಾರೀ ಕೂಡ. ಸಾವನಿ ಅವರ ತ೦ದೆ ವಲ್ಲಭಭಾಯಿ ಅವರು ಸುಮಾರು 40 ವಷ೯ಗಳ ಹಿ೦ದೆ…

  • ಸುದ್ದಿ

    ಗುಡ್‌ ನ್ಯೂಸ್, ಹೈಟೆಕ್ ಬೆಂಗಳೂರಿಗೆ ಮೊದಲ ಬಾರಿಗೆ ಬರಲಿದೆ ಡಬಲ್ ಡೆಕ್ಕರ್ ಮೆಟ್ರೋ,.!

    ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ. ಈಗ…

  • ಸಾಧನೆ, ಸ್ಪೂರ್ತಿ

    ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ.

    ರಾಯಚೂರಿನ ವೆಂಕಟೇಶ್, ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು. ಇಂದು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ್, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ…

  • ಸುದ್ದಿ

    ಡಿಕೆಶಿ ಪುತ್ರಿಗೂ ಸಿದ್ದಾರ್ಥ ಅವರ ಪುತ್ರನಿಗೂ ಮದುವೆ ನಿಶ್ಚಯ, ಮದುವೆ ಯಾವಾಗ!

    ಇಂದು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಗಳಿಗೂ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯವಾಗಿದೆ. ಮೂರು ದಿನಗಳ ಹಿಂದೆ ಎಸ್ ಎಂಕೆ ನಿವಾಸಕ್ಕೆ ಡಿಕೆಶಿ ಕುಟಂಬದವರು ಹೋಗಿದ್ದರು ಈಗ ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಮನೆಗೆ ಎಂಸ್ ಕೃಷ್ಣ ಅವರ ಕುಟುಂಬ ಆಗಮಿಸಿದ್ದು ಗುರು ಹಿರಿಯ ಸಮ್ಮುಖದಲ್ಲಿ ಸಿದ್ದಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ಫಿಕ್ಸ್ ಆಗಿದೆ. ಡಿಕೆ…

  • ಸುದ್ದಿ

    ಆಭರಣ ಪ್ರಿಯರಿಗೊಂದು ಸಿಹಿ ಸುದ್ದಿ ; ಬಾರಿ ಇಳಿಕೆ ಕಂಡ ಬಂಗಾರದ ಬೆಲೆ,..!!

    ಸತತ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ  ತರುವಂತೆ  ಮಾಡಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ  ಚಿನ್ನದ ದರ ಇಳಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ಗೊತ್ತು ಆದರೆ  ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10ಗ್ರಾಂ ಚಿನ್ನಕ್ಕೆ38,072 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು…