ಸುದ್ದಿ

ಬ್ರೆಕಿಂಗ್ ಸುದ್ದಿ..!ಭಾರತೀಯ ವಾಯು ಸೇನೆಯ ಪೈಲಟ್ ನ್ನು ಬಂಧಿಸಿದ್ದೇವೆಂದು ವಿಡಿಯೋ ಬಿಡುಗಡೆ ಮಾಡಿದ ಪಾಕ್?

259

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ಪಸರಿಸಿರುವ ಬೆನ್ನಲ್ಲೇ ಪಾಕಿಸ್ತಾನ ಭಾರತೀಯ ಪೈಲಟ್ ರನ್ನು ಬಂಧಿಸಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜೆಟ್ ವಿಮಾನ ಪತನಗೊಂಡಿದ್ದು ಇದರಲ್ಲಿದ್ದ ಪೈಲಟ್ ಗಳ ಪೈಕಿ ಒಬ್ಬರನ್ನು ಬಂಧಿಸಿದ್ದೇವೆ. ಇನ್ನೊಬ್ಬ ಪೈಲಟ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ಪಾಕಿಸ್ತಾನ ಹೇಳಿದೆ. 

ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನಾನು ವಿಂಗ್ ಕಮಾಂಡರ್ ಅಭಿನಂದನ್, ನಾನು ಐಎಎಫ್ ಅಧಿಕಾರಿ, ನನ್ನ ಸರ್ವಿಸ್ ನಂಬರ್ 27981. ಹೀಗೆ ಪೈಲಟ್ ಒಬ್ಬರು ಹೇಳಿರುವ ವಿಡಿಯೋವನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿದೆ. ಇದು ಎಷ್ಟು ನಿಜವೋ ಎಂಬುದು ಇನ್ನು ತಿಳಿದುಬಂದಿಲ್ಲ.

ಜೈಷ್ ಉಗ್ರರ ಮೇಲೆ ದಾಳಿ ನಡೆಸಿದ ಬಳಿಕ ಭಾರತದ ಸೈನಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಸೇನೆ ಇಂದು ಬೆಳಗ್ಗೆ ದಾಳಿ ಮಾಡಿದೆ. ಈ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಭಾರತ ಪ್ರತಿದಾಳಿ ನಡೆಸುವ ವೇಳೆ ಪಾಕಿಸ್ತಾನದ ಒಂದು ವಿಮಾನ ಪತನವಾಗಿದೆ ಎಂಬ ವರದಿಗಳು ಬಂದಿವೆ.

ಪಾಕ್ ವಾಯುಸೇನೆಯನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ನಮ್ಮ ಮಿಗ್ ವಿಮಾನ ಪತನಗೊಂಡಿದ್ದು ಪೈಲಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲಟ್ ನಮ್ಮ ಬಳಿ ಇದ್ದಾರೆ ಎಂದು ಹೇಳುತ್ತಿದೆ. ಈ ಮಾಹಿತಿಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ಹಳದಿ ಕಟ್ಟಿದ ಹಲ್ಲಿಗೆ, ನಿಮ್ಮ ಮನೆಯಲ್ಲಿರುವ ಈ ವಸ್ತುಗಳನ್ನೇ ಬಳಸಿ, ಬಿಳಿಯಾಗಿ ಫಳ ಫಳ ಹೊಳೆಯುವಂತೆ ಮಾಡಿ…

    ಹಲ್ಲು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಕೇವಲ ತಿನ್ನುವುದಕ್ಕೆ ಮಾತ್ರವಲ್ಲ, ನಮ್ಮ ಮುಖದ ಸೌಂದರ್ಯದಲ್ಲಿ ಹಲ್ಲು ವಹಿಸುವ ಪಾತ್ರವನ್ನು ನಾವು ಕೇರ್ಲೆಸ್ ಮಾಡೋ ಅಂಗಿಲ್ಲ. ಯಾಕಂದ್ರೆ ಬಿಳಿ ಬಿಳಿಯಾಗಿ ಪಳ ಪಳ ಅಂತ ಹೊಳೆಯುವ ಹಲ್ಲು ನಮ್ಮ ಮುಖದ ಚಂದವನ್ನು ಜಾಸ್ತಿ ಮಾಡುತ್ತೆ.

  • ಸುದ್ದಿ

    ವಿಷದ ಹಾವು ಕಚ್ಚಿದ ಕೂಡಲೇ ಅವರ ಪ್ರಾಣವನ್ನು ಉಳಿಸಲು ತಕ್ಷಣ ಹೀಗೆ ಮಾಡಿ…!

    ಪ್ರಪಂಚ ಎಲ್ಲೆಡೆ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಜನ ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಭಾರತ ಈ ಸಂಖ್ಯೆ 2 ಲಕ್ಷ ಸಮೀಪ ಇದೆ… ನಮ್ಮ ದೇಶದಲ್ಲಿ ಸದ್ಯಕ್ಕೆ 250 ಜಾತಿಯ ಹಾವುಗಳು ಇದ್ದು ಅವುಗಳಲ್ಲಿ 52 ಜಾತಿಯ ವಿಷ ಸರ್ಪಗಳು ಇವೆ.. ನಮ್ಮ ರಾಜ್ಯದಲ್ಲಿ ಮಾತ್ರ 5 ಜಾತಿಯ ಹಾವುಗಳು ಅತ್ಯಂತ ವಿಷವನ್ನು ಹೊಂದಿವೆ. ಅವು ಕಚ್ಚಿದರೆ ಹೆಚ್ಚು ಅಂದ್ರೆ 3 ಗಂಟೆ ಒಳಗೆ ಮನುಷ್ಯ ಮರಣ ಹೊಂದುತ್ತಾನೆ… ಏನಾದರು ಪ್ರಥಮ ಚಿಕಿತ್ಸೆ ಮಾಡಿದರೆ ಆ…

  • ಸುದ್ದಿ

    ತನ್ನ ಪ್ರೊಫೆಸರ್ ಮದುವೆಗೆ ಹೋದ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಟೇಜ್ ಮೇಲೆ ಮಾಡಿದ್ದೇನು. ಶಾಕ್ ಆದ ಹೆಣ್ಣು.

    ಸಮಯ ಮತ್ತು ಸಂದರ್ಭದ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿಮಾಡಿ ಕೊಡುತ್ತದೆ. ಇಂತಹದ್ದೇ ಒಂದು ಕೆಲಸವನ್ನ ಇಂಜಿನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದಾನೆ ಮತ್ತು ಈತ ಮಾಡಿದ ಕೆಲಸಕ್ಕೆ ಒಂದು ಕ್ಷಣ ಎಲ್ಲರೂ ಬೆರಗಾಗಿದ್ದಾರೆ. ಇನ್ನು ಇದೂ ದೊಡ್ಡ ಸುದ್ದಿ ಅಲ್ಲದೆ ಇರಬಹುದು ಆದರೆ ಇದು ವಿಭಿನ್ನ ಅನ್ನುವ ಕಾರಣಕ್ಕೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ…

  • ಸುದ್ದಿ

    ವಿಕ್ರಮ್‌ ಲ್ಯಾಂಡರ್‌ನ್ನು ಚಂದ್ರನಿಗೆ ಮತ್ತಷ್ಟು ಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆ ಯಶಸ್ವಿಯಾಗಿದೆ…!

    ಬೆಂಗಳೂರು, ವಿಕ್ರಮ್‌ ಲ್ಯಾಂಡರ್‌ನ್ನು ಚಂದ್ರನಿಗೆ ಮತ್ತಷ್ಟುಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆಯಶಸ್ವಿಯಾಗಿದ್ದು, ಕೊನೆಯ ಕ್ಷಣದ ಕಾರ್ಯಚರಣೆಗಳನ್ನುಇದೀಗ ಎದುರು ನೋಡಲಾಗುತ್ತಿದೆ ಬುಧವಾರ ಬೆಳಿಗ್ಗೆ 3:42 ನಿಮಿಷಕ್ಕೆ ನೌಕೆಯಲ್ಲಿನ ಇಂಜಿನ್‌ನ್ನು 9 ಸೆಕೆಂಡುಗಳ ಕಾಲ ಉರಿಸಿ ಚಂದ್ರನಿಗೆ ಮತ್ತಷ್ಟು ಸಮೀಪದ ಕಕ್ಷೆಯಲ್ಲಿ ವಿಕ್ರಮ್‌ ಲ್ಯಾಂಡರ್‌ (ಪ್ರಗ್ಯಾನ್‌ ರೋವರ್‌ ಇದರ ಒಳಗಿದೆ)ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೆಲೆಗೊಳಿಸಿದೆ.  ಸದ್ಯ ವಿಕ್ರಮ್‌ ಲ್ಯಾಂಡರ್‌35ಕಿ.ಮೀ x 101 ಕಿ.ಮೀ ಕಕ್ಷೆಯಲ್ಲಿದೆ. ಇನ್ನೊಂದು ಕಡೆ ಚಂದ್ರಯಾನ 2 ಕ್ಷಕೆಗಾಮಿಯು96 ಕಿ.ಮೀ x 125 ಕಿ.ಮೀ…

  • ಸುದ್ದಿ

    ದಂಡ ಪಾವತಿಸಿದವರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ ಪ್ರೋತ್ಸಾಹಿಸಿದ ಪೊಲೀಸ್…!

    ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ ಮೊತ್ತ 80 ಸಾವಿರ ರೂ. ತಲುಪಿದ್ದು ಇದೆ. ಮೋಟಾರು ವಾಹನ ಕಾಯಿದೆ (ತಿದ್ದುಪಡಿ) 2019, ಜಾರಿಗೆ ಬಂದ ದಿನದಿಂದಲೂ ದೇಶಾದ್ಯಂತ ಸಂಚಾರ ಶಿಸ್ತು ಪಾಲನೆ ಮಾಡದ ಸವಾರರಿಗೆ ಭಾರೀ ಮೊತ್ತದ ದಂಡ ಪೀಕಿಸುತ್ತಿರುವ ಸುದ್ದಿಗಳೇ ಎಲ್ಲೆಲ್ಲೂ. ಇವುಗಳ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ…

  • ಸುದ್ದಿ

    ಚಳ್ಳಕೆರೆಯ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಪ್ರಯತ್ನ…..!

    ಒಂದೇ ಕುಟುಂಬದ ಐವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯ ನೆಹರು ಸರ್ಕಲ್ ಬಳಿ ನಡೆದಿದೆ. ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಶಿಲ್ಪಾ ಹಾಗೂ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಐವರು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ನಿವಾಸಿಗಳಾಗಿದ್ದು, ಖಾಲಿ ನಿವೇಶನದ ಹಕ್ಕು ಪತ್ರ ಮಾಡಿಕೊಡದೆ ಆರು ತಿಂಗಳಿಂದ ಸತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮ ಪಂಚಾಯ್ತಿ ಪಿಡಿಓ ಪ್ರತಿಭಾ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ್ ನಿರ್ಲಕ್ಷ್ಯಕ್ಕೆ ಮನನೊಂದು ಕುಟುಂಬ ಈ ನಿರ್ಧಾರ…