ಸುದ್ದಿ

ಜಿಯೋ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನು ಕೊಟ್ಟ ಜಿಯೋ ಕಂಪನಿ,..!!ಇಲ್ಲಿದೆ ನೋಡಿ ಮಾಹಿತಿ,.!

26

ಜಿಯೋ ಕಂಪನಿ; ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ಇದೀಗ ಇತರೆ ನೆಟ್​ವರ್ಕ್​ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡಲಿದೆ ಎಂದು ತಿಳಿಸಿದ್ದಾರೆ . ಈ ಹೊಸ ನಿಯಮವು ಇವತ್ತಿನಿಂದಲೇ  ಜಾರಿಗೆ ಬರಲಿದೆ ಎಂದು  ಹೇಳಿದ್ದಾರೆ. ಅಂದರೆ ಇನ್ಮುಂದೆ ಜಿಯೋ ಟು ಏರ್​ಟೆಲ್ ಅಥವಾ ವೊಡಾಫೋನ್ ಸೇರಿದಂತೆ ಇನ್ನಿತರ ನೆಟ್​ವರ್ಕ್​ಗಳಿಗೆ ಕರೆ ಮಾಡಿದರೆ ಶುಲ್ಕ ಅನ್ವಯವಾಗಲಿದೆ. ಇದರ ಹೊರತಾಗಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಕಂಪೆನಿ ಹೇಳಿಕೊಂಡಿದೆ.

ಇತರೆ ಜಿಯೋ ಫೋನ್‌ಗಳು ಮತ್ತು ಲ್ಯಾಂಡ್‌ಲೈನ್‌ಗಳಲ್ಲಿ ಜಿಯೋ ಬಳಕೆದಾರರು ಮಾಡುವ ಕರೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅಂತೆಯೇ, ವಾಟ್ಸ್​ಆ್ಯಪ್, ಫೇಸ್ ಟೈಮ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಮಾಡಿದ ಕರೆಗಳಿಗೆ ಈ ಶುಲ್ಕ ವಿಧಿಸಲಾಗುವುದಿಲ್ಲ. ಹಾಗೆಯೇ ಇತರೆ ನೆಟ್‌ವರ್ಕ್‌ಗಳಿಂದ ಒಳಬರುವ ಕರೆಗಳು ಮೊದಲಿನಂತೆ ಉಚಿತವಾಗಿರಲಿದೆ ಎಂದು ತಿಳಿಸಿದೆ.

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) 2017 ರ ಇಂಟರ್​ಕನೆಕ್ಟ್​ ಬಳಕೆ ಶುಲ್ಕವನ್ನು (ಐಯುಸಿ) ನಿಮಿಷಕ್ಕೆ 14 ಪೈಸೆಗಳಿಂದ 6 ಪೈಸೆಗಳಿಗೆ ಇಳಿಸಿತ್ತು. ಹಾಗೆಯೇ ಈ ಶುಲ್ಕವನ್ನು 2020 ರ ಜನವರಿಯ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ ಈಗ TRAI ಈ ಗಡುವನ್ನು ವಿಸ್ತರಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

2015 ರಿಂದ ಜಿಯೋ ಉಚಿತ ಕರೆ ಸೌಲಭ್ಯವನ್ನು ಒದಗಿಸುತ್ತಿದೆ. ಇದರಿಂದ  ಕಳೆದ ಮೂರು ವರ್ಷಗಳಲ್ಲಿ ಇತರ ಮೊಬೈಲ್ ಆಪರೇಟರ್‌ಗಳಾದ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾಗಳಿಗೆ ಐಯುಸಿ ಶುಲ್ಕವಾಗಿ ಜಿಯೋ ಟೆಲಿಕಾಂ ಸಂಸ್ಥೆ ಸುಮಾರು 13,500 ಕೋಟಿ ರೂಪಾಯಿಗಳನ್ನು ಪಾವತಿಸಿದೆ.ಈ ನಷ್ಟದ ಮೊತ್ತವನ್ನು ಸರಿದೂಗಿಸಲು ಅನ್ಯ ನೆಟ್​ವರ್ಕ್​ಗಳಿಗೆ ಮಾಡುವ ವಾಯ್ಸ್ ಕರೆಗಳಿಗೆ ದರ ವಿಧಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗೆ ವಿಧಿಸಲಾಗುವ ದರಕ್ಕೆ ಸಮನಾಗಿ ಡೇಟಾವನ್ನು ಜಿಯೋ ಉಚಿತವಾಗಿ ನೀಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ