ರಾಜಕೀಯ

ಇಂದು 8 ಮಂದಿ ನೂತನ ಸಚಿವರ ಪ್ರಮಾಣವಚನ!ಈ ಪಟ್ಟಿಯಲ್ಲಿ ನಿಮ್ಮ ಕ್ಷೇತ್ರದ ಶಾಸಕರು ಇದ್ದಾರಯೇ ನೋಡಿ…

387

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮಾತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಧಾನ ಹೊರಹಾಕಿದ್ದ ಶಾಸಕರಿಗೆ ಸಚಿ ಸ್ಥಾನ ಕೊಡುವುದಾಗಿ ಮೈತ್ರಿ ಸರ್ಕಾರ ಭರವಸೆ ನೀಡಿದ್ದು ಅದರಂತೆ ಈಗ ಸಚಿವ ಸಂಪುಟದ ವಿಸ್ತರಣೆ ಶುರುವಾಗಿದೆ.

ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯಂತೆಯೇ ಡಿಸೆಂಬರ್ 22 ರಂದು ಅಂದರೇ ಇಂದು ಸಂಪುಟ ವಿಸ್ತರಣೆಯಾಗಲಿದೆ, ಇಬ್ಬರು ಹಾಲಿ ಸಚಿವರಿಗೆ ಕೊಕ್ ನೀಡಿದ್ದು, 8 ಮಂದಿ ನೂತನ ಸಚಿವರಾಗಿ ಇಂದು ಸಂಜೆ 5.30 ಕ್ಕೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆಯಲ್ಲಿ ಉತ್ತರ ಕರ್ನಾಟಕದ ರಮೇಶ್ ಜಾರಕಿಹೊಳಿ ಅವರಿಗೆ ಕೊಕ್ ಕೊಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಅದೇ ರೀತಿ ಅರಣ್ಯ ಸಚಿವ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈಬಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಮೇಶ್ ಜಾರಕಿಹೊಳಿ ಮತ್ತು ಆರ್.ಶಂಕರ್ ಅವರನ್ನು ಕೈಬಿಟ್ಟು ಸತೀಶ್ ಜಾರಕಿಹೊಳಿ, ಎಂಎಲ್ ಸಿ ಆರ್.ಬಿ.ತಿಮ್ಮಾಪುರ್, ಸಿಎಸ್ ಶಿವಳ್ಳಿ, ಎಂಟಿಬಿ ನಾಗರಾಜ್, ಪಿಟಿ ಪರಮೇಶ್ವರ್ ನಾಯ್ಕ್, ಎಂಬಿ ಪಾಟೀಲ್, ರಹೀಂ ಖಾನ್, ತುಕಾರಾಂ ಸೇರಿದಂತೆ ಎಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನೂ ಸಮ್ಮಿಶ್ರ ಸರ್ಕಾರ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೂ ಮುಂದಾಗಿದೆ. ಮಾಜಿ ಸಿಎಂ ಧರಂ ಸಿಂಗ್ ಪುತ್ರ ಅಜಯ್ ಸಿಂಗ್, ದೆಹಲಿಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಲವಿದ್ದಾರೆ, ವಿ. ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಗುರುವಾರದ ನಿಮ್ಮ ರಾಶಿ ಭವಿಷ್ಯ ಶುಭವೋ,ಅಶುಭವೋ ತಿಳಿಯಲು ಈ ಲೇಖನ ಓದಿ ತಿಳಿಯಿರಿ…

    ಇಂದು ಗುರುವಾರ, 15/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಿಗಳು ನೂತನ ವೃತ್ತಿಯನ್ನು ಕೈಗೊಳ್ಳಬಹುದು.ನಿಧಾನವಾಗಿ ಇತರರ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದಿಂದ ಆಗಾಗ್ಗೆ ಮನಸು ದೂರವಾಗುವ ಸಾಧ್ಯತೆಯಿರುತ್ತದೆ.ಹೊಸ ಮನೆಗೆ ಹೋಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗ ಬಹುದು. ಜಾಗ್ರತೆ ವಹಿಸಬೇಕು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆ ಜತೆ ಸಮಾಲೋಚಿಸಿ ತೀರ್ಮಾನ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ ಮಕ್ಕಳು ನಿಮಗೆ ನೆರವಾಗಲಿದ್ದಾರೆ. ಮಾನಸಿಕ ದುಗುಡ ಉಂಟಾದೀತು ವೃಷಭ:- ಮುಖ್ಯವಾದ ಕೆಲಸವೊಂದಕ್ಕೆ ಸಲಹೆ…

  • ಸಿನಿಮಾ

    ತನ್ನ ಹೆತ್ತ ತಾಯಿ ಮಾಡಿದ್ದ ಶೋಷಣೆಯನ್ನ ಬಹಿರಂಗ ಮಾಡಿದ ಫೇಮಸ್ ನಟಿ..!

    ಮಲಯಾಳಂ ಚಲನಚಿತ್ರ ನಟಿ ಸಂಗೀತ ಕ್ರಿಶ್ ತಮ್ಮ ತಾಯಿಯ ಆರೋಪಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಶ್ ತಾಯಿ ಇತ್ತೀಚೆಗೆ ಮಗಳು ತನ್ನನ್ನ ವೃದ್ಧಾಪ್ಯದಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ತಿಗಾಗಿ ಕ್ರಿಶ್ ನನ್ನನ್ನ ಮನೆಯಿಂದ ಹೊರ ಹಾಕಲು ಮುಂದಾಗಿದ್ದಾಳೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಕ್ರಿಶ್ ಳನ್ನ ಹೆಚ್ಚು ಸುದ್ದಿಯಲ್ಲಿರುವ ಹಾಗೆ ಮಾಡಿತ್ತು. ಈ ಆರೋಪಗಳಿಗೆ ಕ್ರಿಶ್ ಟ್ವಟರ್ ಮೂಲಕ ಸರಿಯಾಗೇ ಉತ್ತರ ನೀಡಿದ್ದಾರೆ. ತಾನು 13 ವರ್ಷದ ಬಾಲಕಿಯಾಗಿದ್ದಾಗ ಹೇಗೆ ತನ್ನನ್ನ ಶೋಷಿಸಲಾಯಿತು ಎಂದು ವಿವರಿಸಿದ್ದಾಳೆ. ಕುಡುಕ…

  • ಸುದ್ದಿ

    ಪ್ರವಾಹದಲ್ಲಿ ಕೊಚ್ಚಿ ಹೋದ ಅರ್ಚಕ , ಎರಡು ದಿನ ಸೇತುವೆ ಕೆಳಗೆ ಇದ್ದು ಬದುಕಿ ಬಂದಿದ್ಹೇಗೆ..?

    ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ. ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ…

  • ಸುದ್ದಿ

    ಜಪಾನ್‍ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಗೊಂಡಿದೆ,.!

    ರಸ್ತೆ ಮೇಲೆ ಚಲಿಸುವ ಕಾರುಗಳು ಗಗನದಲ್ಲಿ ಹಾರುವಂತಿದ್ದರೆ..? ನೀವು ಹಾಲಿವುಡ್ ಸಿನಿಮಾಗಳಲ್ಲಿ ಅದರಲ್ಲೂ ಜೇಮ್ಸ್‍ಬಾಂಡ್ ಚಿತ್ರಗಳಲ್ಲಿ ಇದನ್ನು ನೋಡಿರುತ್ತೀರಿ. ಜಪಾನ್‍ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಯಾಗಿದೆ. ಈ ವಿಶ್ವ ಬಹು ಕಾತುರದಿಂದ ನಿರೀಕ್ಷಿಸುತ್ತಿರುವ ಹಾರುವ ಕಾರುಗಳು ಇನ್ನು ಕೆಲವೇ ತಿಂಗಳುಗಳಲ್ಲಿ ವಾಣಿಜ್ಯ ಮಾರಾಟಕ್ಕೆ ಲಭ್ಯವಾಗಲಿದೆ. ಜಪಾನಿನ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ತಯಾರಿಕೆ ಸಂಸ್ಥೆ ಎನ್‍ಇಸಿ ಕಾಪೆರ್ರೇಷನ್ ಅಭಿವೃದ್ದಿಗೊಳಿಸಿರುವ ಪುಟ್ಟ ಹಾರುವ ಕಾರಿನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಇದನ್ನು ಇದೇ ಮೊದಲ ಬಾರಿ ಪ್ರಯೋಗಕ್ಕೆ…

  • ಸುದ್ದಿ

    ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸವಾಲೆಸೆದ ಸ್ಯಾಂಡಲ್​ವುಡ್​ ನಟಿ..!

    ದೇಶದಲ್ಲಿ ಜಾರಿಯಾದ ಹೊಸ ಟ್ರಾಫಿಕ್‌ ದಂಡದ ಕುರಿತಾಗಿ ಸಾಕಷ್ಟು ಚರ್ಚೆಗಳು, ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವ ಜವಾಬ್ದಾರಿ ಕೂಡಾ ಸರ್ಕಾರಕ್ಕೆ ಇದೆ.  ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರರು, ವಾಹನಗಳ ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟಿ ಸೋನು ಗೌಡ ಸವಾಲು ಹಾಕಿದ್ದಾರೆ. ಜನಸಾಮಾನ್ಯರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಅಧಿಕ ದಂಡ ವಿಧಿಸಿ ಅವರ ಜೀವನವನ್ನು…