ಸಿನಿಮಾ

ಕೇವಲ 80 ದಿನಗಳ ಕಾಲ್ ಶೀಟ್ ಗೆ ನಟಿ ರಾಧಿಕಾ ಕುಮಾರಸ್ವಾಮಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?

1088

ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ.

ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ.

ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಪೊಗರು’ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ, 60 ಲಕ್ಷ ಸಂಭಾವನೆ ಪಡೆದಿದ್ದು, ಇದಕ್ಕೂ ಮೊದಲು ಮೋಹಕ ತಾರೆ ರಮ್ಯ ಶಿವಣ್ಣ ನಟಿಸಿದ್ದ ಆರ್ಯನ್ ಚಿತ್ರಕ್ಕಾಗಿ 66 ಲಕ್ಷ ರೂಪಾಯಿ ಪಡೆದುಕೊಂಡಿದ್ದು ಕನ್ನಡದ ನಾಯಕಿಯರು ಪಡೆದ ಅತೀ ಹೆಚ್ಚು ಸಂಭಾವನೆಯಾಗಿತ್ತು.

ಈಗ ಕೇವಲ 80 ದಿನಗಳ ಕಾಲ ಕಾಲ್ ಶೀಟ್ ಗೋಸ್ಕರ ರಾಧಿಕಾ ದಮಯಂತಿ ಚಿತ್ರಕ್ಕಾಗಿ 1 ಕೋಟಿ ರೂ. ಪಡೆದಿದ್ದು, ಇದು ಚಂದನವನದ ನಾಯಕಿಯರಲ್ಲಿ ರಾಧಿಕಾ ಪಡೆದ ಅತೀ ಹೆಚ್ಚು ಸಂಭಾವನೆ ಎಂದು ಹೇಳಲಾಗಿದೆ.

ಹೇಗಿದೆ ನೋಡಿ ರಾಧಿಕಾ ಅಭಿನಯದ ದಮಯಂತಿ ಚಿತ್ರದ ಟೀಸರ್ ವಿಡಿಯೋ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ